ಡಿಯರ್ ಅಪ್ಪಿ
ನಾನಿದನ್ನು ಬರೆಯಬಾರದಾಗಿತ್ತು ಅಂದುಕೊಳ್ಳುವಷ್ಟರಲ್ಲಿ ನೀನಿದನ್ನು ಒದುತ್ತಾ ಇರತ್ತಿಯಾ ಂತ ನಂಗೊತ್ತು. ಆದರೇನು ಮಾಡಲಿ ಮಾತನಾಡಲು ಬಾಯಿಂದ ಪದಗಳೇ ಹೊರಡದಿದ್ದಾಗ ನಾನು ಅಕ್ಷರದ ಮೊರೆ ಹೋಗಲೇಬೇಕು ತಾನ?. ಮನದ ಭಾವನೆಗಳನ್ನು ನಿನ್ನೇದುರಿಗೆ ಹೇಳಿಕೊಳ್ಳುವುದಕ್ಕೆ ಆಗದ ಸ್ಥತಿಯಲ್ಲಿ ಈ ರೀತಿಯ ಪ್ರಯತ್ನಕ್ಕೆ ಕೈ ಹಾಕಿರುತ್ತೇನೆ ಅಪ್ಪಿ.
ಆವಾಗ ತಾನೆ ಅತ್ತು ಅತ್ತು ಕಣ್ಣಿರು controll ಗೆ ಬಂದಿತ್ತು, ಮನಸ್ಸು ಕೆಟ್ಟ ಕನಸ್ಸಿಗೆ ಹೆದರಿ ಎಚ್ಚೆತ್ತುಕೊಂಡ ಮಗುವಿನ ಹಾಗೆ ಹಲಬುತ್ತಿತ್ತು, ಜೀವನವು ಒಂದು un expected ಆಘಾತದಿಂದ ಹೊರಬಂದಿತ್ತು. ಆವಾಗ ನಿನ್ನ ಸ್ನೇಹ ನನ್ನನ್ನು ಎದೆಗೊತ್ತಿಕೊಂಡು ಸಾಂತ್ವನ ಹೇಳಿತ್ತು. ಯಾರನ್ನು ಸಲಿಸಾಗಿ ಹಚ್ಚಿಕೊಳ್ಳದ ನಾನು ಅದೇಕೊ ಗೊತ್ತಿಲ್ಲ ನಿನ್ನ ಆ ಮುಗ್ದ ಮಾತಿಗೆ ಮಗುವಾಗಿ ಬಿಟ್ಟೆ. ಯಾವುದೊ ಒಂದು ತಪ್ಪಿ ಬಂದ ಕರೆಯು ಯಾರನ್ನೊ ಒಂದು ಮಾಡಿ ಬಿಟ್ಟಿತು. ಯಾರಿಂದಲೋ ದುರವಾಗಿ ಇನ್ನಯಾರಿಗೊ ಹತ್ತಿರವಾಗುವ ಹಾಗೆ ನಮ್ಮ ಆಗಿನ ಸ್ಥಿತಿ ನಮ್ಮಿಬ್ಬರನ್ನು ಹೀಗೆ ಬೆಸುಗೆ ಹಾಕಿತು ಅಲ್ವಾ ಅಪ್ಪಿ. ಗೇಗಿದೆ ನೋಡು ಅಪ್ಪಿ ಎಲ್ಲೊ ಇದ್ದೆವು ಎಲ್ಲೊ ಬೆಳೆದು ಇವಾಗ ಒಳ್ಳೆ ಸ್ನೇಹಿತರಾಗಿ ನಗುತ ಬದುಕುತ್ತಿದ್ದೇವೆ. ನನ್ನ ನೆನಪಿನ ದೋಣಿಯ ಪಯಣಿಗರಲ್ಲಿ ಕೇವಲ ನಾಲ್ಕಾರು ಜನರಿಗೆ ಮಾತ್ರ ಜಾಗ ನೀಡಿದ್ದೆ ಆದರೆ ಸಂಪೂರ್ಣವಾಗಿ ನೀ ಆ ಸ್ಥಳವನ್ನು ಹೇಗೆ ಆವರಿಸಿಕೊಂಡೆ ಎಂಬುದೆ ನನಗೆ ಇನ್ನು ತಿಳಿಯದ ಪ್ರಶ್ನೆಯಾಗಿ ಕಾಡತಾ ಇದೆ.
ನಿನ್ನ ಜೊತೆಗೆ ಕಳೆಯುವ ಪ್ರತಿಯೊಂದು ಸಮಯವು ನನ್ನ ಜೀವನದಲ್ಲಿ ಮರೆಯಲಾಗದ ಅದ್ಯಾಯಗಳಾಗಿವೆ ಅಪ್ಪಿ. ಆ ನಿನ್ನ Fluty voice, Charming Eyes, ಆ ನಿನ್ನ ತುಂಟತನ ಆ ನಿನ್ನ ಮುಗುಳ್ನಗೆ ಆನಿನ್ನ ಹಟಮಾರಿತನ ಚೆಷ್ಟೆ ಎಲ್ಲವು ನನ್ನ ಮನವೆಂಬ ಅಂಗಳದ ಅಚ್ಚಳಿಯದ ರಂಗೋಲಿಯಾಗಿವೆ. ಜೀವನ ಎಂದರೇನು ಎನ್ನುವಂತದನ್ನು ತಿಳಿಯುವ ಮೋದಲೆ ನೀನು ಪ್ರೀತಿಯ ಬಲೆಯಲ್ಲಿ ಸಿಲುಕಿ ಒದ್ದಾಡಿ ಅದರಿಂದ ಹೊರಕ್ಕೆ ಬಾರಲಾಗದೆ ತೊಳಲಾಟ ನಡೆಸಿದ ಸಂದರ್ಭದಲ್ಲಿ ತಾನೆ ನಿನಗೆ ಈ ಕನಸುಗಾರನ ಪರಿಚಯವಾದುದು. ಆಗ ನಿನ್ನ ಪ್ರತಿನೋವಿಗು ನಾನು ಸ್ಪಂದಿಸುತ್ತಿದ್ದ ರೀತಿ ಯಿದೆಯಲ್ಲ ನಿಜವಾಗಲು ನನಗೆ ಆಶ್ಚರ್ಯವುಂಟು ಮಾಡುತ್ತದೆ. ನನ್ನ ಬಳಿ ನಿನ್ನನ್ನು ಸಮಾದಾನ ಮಾಡುವಷ್ಟು ಯೋಗ್ಯತೆ ಇದೆ ಎಂಬುದು ಗೊತ್ತಾಗಿದ್ದೆ ನಿನ್ನಿಂದ ಅಪ್ಪಿ. ಜೀವನದ ರಣರಂಗದಲ್ಲಿ ಹೋರಾಟ ಮಾಡಲಾರದೆ ಹೆಣಗಾಡುತ್ತಿರುವಾಗ ನನಗೆ ನೀನು ಹೇಳುತ್ತಿದ್ದ ದೈರ್ಯ ಇದೆಯಲ್ಲಾ ನೀನಲ್ಲದೆ ಅದನ್ನು ಮತ್ತಾರು ಹೇಳೊಕೆ ಸಾದ್ಯಾನೆ ಇರ್ಲಿಲ್ಲಾ ಅಪ್ಪಿ.
ಅಂದು ದುಡ್ಡಿಲ್ಲ ಎಂದು ನಾನು ಹೇಳಿದಾಗ ನಿನಗಾಗಿ ಇಟ್ಟುಕೊಂಡ ಹಣವನ್ನು ನನಗೆ ಕೊಡೋಕೆ ಮನ್ಸು ಮಾಡಿದೆಯಲ್ಲಾ ಆವಾಗ ನಾನೆಂದುಕೊಂಡೆ ಒಥಿ ಂಣಣಠರಡಿಚಿಠಿ ನಲ್ಲಿ ಬರುವ ದಿವ್ಯಾ ಇವೆಳೆನಾ ಅಂತ ಅದರಲ್ಲಿ ಸುದೀಪ ಮುಂದೆ ಬರೋಕೆ ದಿವ್ಯಾ ಸಾಥ್ ಕೊಡತಾಳೆ ಇಲ್ಲಿ ಈ ಪಾರ್ಥ ಮುಂದೆ ಬರೋಕೆ ಅಪ್ಪಿ ಸಾಥ್ ಕೊಡತಿದಾಳೇ ಅನಸ್ತಾ ಇತ್ತು. ಪ್ರತಿ ಕ್ಷಣದಲ್ಲು ನಿನ್ನ ಜೊತೆ ಇರಬೇಕು ಆನಿನ್ನ ಮುಗ್ದ ಮಾತುಳು ನ್ನ ಕಿವಿ ತುಂಬಬೇಕು ನೀನು ನನ್ನ ಕೋತಿ ಎಂತ ಕರೆಯೋದನ್ನ ಕೇಲೋಕೆ ಒಂತರಾಖುಷಿ ಅನಸ್ತಾ ಇತ್ತು.
ಇಂದು ಸಂಜೆಯ ಹೊತ್ತಿನಲ್ಲಿ ಸುರಿಯುತ್ತಿದ್ದ ಮಲೆಯನ್ನು ನೋಡೊಕೆ ಅಂತಾ ಕೊಂಚ ಕಿಟಕಿ ಎಡೆಗೆ ಬಂದು ನಿಂತುಕೊಂಡು ಗಿಡದ ಎಲೆಯ ಮೇಲೆ ಮಳೆಯ ಹನಿಗಳು ಬೀಳುವುದನ್ನು ನೋಡತಾ ಇದ್ದೆ.ತುಂತುರು ಹನಿಯಾದ್ದರಿಂದ ಹನಿಗಳ ಬಿಳುವಿಕೆ ಸ್ಪಷ್ಟವಾಗಿ ಕಾಣತಾ ಇತ್ತು. ಒಂದು ಎಲೆಯ ಮೇಲೆ ಒಂದು ಹನಿ ಬಿದ್ದುದು ನನ್ನ ಕಣ್ಣಿಗೆ ಕಾಣೀಸಿತು. ಅಷ್ಟರಲ್ಲಿ ಇನ್ನೊಂಡು ಮುತ್ತಿನ ಹನಿ ಅಲ್ಲಿಯೆ ಬಿದ್ದಾಗ ಅವುಗಳ ಸ್ನೇಹ ಕಂಡು ನನಗೆ ನಿನ್ನ ನೆನಪಾಯಿತು. ಅಷ್ಟರಲ್ಲಿ ಮಳೆಯ ರಬಸ ಜಾಸ್ತಿಯಾಗಿ ಎಲೆಯ ಮೇಲಿದ್ದ ಹನಿಗಳು ಜಾರಿ ಹೋದಾಗ ಮನಸ್ಸು ಸ್ತಿಮಿತ ತಪ್ಪಿತು. ನಂತರ ಬಂದ ಕೆಲವು ಹನಿಗಳು ಸ್ವಲ್ಪ ಸಮಯಾ ಅಲ್ಲಿದ್ದವು ನಿಜ ಆದರೆ ಅವು ನಮ್ಮ ವ್ಯವಸ್ಥೆಯ ಬಾಗ ಎನ್ನುವಂತೆ ತೋರುತ್ತಿತ್ತು. ಆಗ ನಮ್ಮಿಬ್ಬರ ಗೇಳೆತನ ಹೀಗಾಗದಿರಲಿ ಎಂದು ದೇವರ ಭಳಿ ಪ್ರಾಥರ್ಿಸೋಕೆ ಆರಂಭಿಸಿದೆ ಅಪ್ಪಿ. ಅಪ್ಪಿ ನಮ್ಮಿಬ್ಬರ ಈ ಗೆಲೆತನ ಹೀಗ ಆಗೊದಿಲ್ಲಾ ಅಲ್ವಾ?
ಮನಸ್ಸೆಕೊ ಇಂದು ತನೆ ಗುಂಇ ಗುಡುತ್ತಿದೆ
ನೀನಿಲ್ಲದೆ ನನಗೇನಿದೆ, ಮನಸ್ಸೇಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ ಅಪ್ಪಿ ದೇವರ ಆಸೆಯಂತೆ ನಮ್ಮಿಬ್ಬರ ಗೆಳೇತನವಾಗಿದೆ ದಯವಿಟ್ಟು ಅದನ್ನು ಮುರಿದು ಮುನ್ನುಗ್ಗಬೇಡ. ನಿನ್ನ ಗೆಲೆತನ ಕೊನೆಯಾಗುವ ಒಂದು ದಿನ ಬೇಡ ಒಂದು ಘಂಟೆ ಅದು ಬೇಡ ಒಂದು ಕ್ಷಣ ಮೊದಲು ನನ್ನ ಸಾವು ಬರಲಿ ಸಾಯುವ ಸಮಾಯದಲ್ಲು ನಾನಿನ್ನ ಗೇಳೆಯನಾಗಿಯೆ ಸಾಯುತ್ತನೇ ಅಪ್ಪಿ ಅದಕ್ಕಾದರು ನಿನ್ನಬಳಿ ಅವಕಾಶವಿದೆಯಲ್ಲ. ಗೆಳತಿಗಾಗಿ ಪ್ರಾಥರ್ಿಸುತ್ತಿರುವ ಪಕೀರನಾಗಿ ಕುಳಿತಿರುತ್ತನೆ ನೀನ್ನ ಗೆಳೆತನವೆ ಆದೇವರು ನನಗೆ ಕೊಡುವ ವರ.
Subscribe to:
Posts (Atom)
ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ
ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...

-
ಚಲನಚಿತ್ರಗಳಲ್ಲಿ ಪ್ರೀತಿ ಪ್ರೇಮ ಪ್ರೀತಿ ಎನ್ನುವ ಈ ಎರಡೂವರೆ ಅಕ್ಷರದ ಪದ ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ನಡುವೆ ಬೆಸುಗೆ ಹಾಕುವ ಕೊಂಡಿಯಾಗಿ...
-
ಇದು ಕೇವಲ ಓದಿ ಬಿಡುವ ಎರಡು ಸಾಲುಗಳಲ್ಲ ಅರ್ಥಗರ್ಭಿತವಾದ ಸಂಭಾಷಣೆಯ ಜಳಕು. ಹೌದು ಸಾರಥಿ ಚಿತ್ರದ ಒಂದು ಸುಂದರವಾದ ಸಂಭಾಷಣೆ. ಪ್ರೀತಿಗೆ ಓದು ವಿಚಿತ್ರವಾದ ಅರ್ಥ ಕಲ್ಪಿಸು...
-
ಇದು ನಿಜ ಪ್ರೀತಿಯ ಕಡಲಾಳ ಸುಮ್ಮನೆ ನಿಂತು ನೋಡಿದರೆ ತಿಳಿಯದು ಆಳಕ್ಕೆ ಇಳಿದಾಗ ಮಾತ್ರ ಪ್ರೀತಿಯ ಅರಿವಾಗುವುದು ಒಮ್ಮೆ ಓದಿ ...