Friday, August 13, 2010

ಹುಣ್ಣಿಮೆಯ ರಾತ್ರಿಯಲಿ

ಹುಣ್ಣಿಮೆಯಾ ರಾತ್ರಿಯಲಿ
ಹೊರ ಬರಬೇಡ ಗೆಳತಿ
ಚಂದ್ರ ಸೂಸುವ ಬೆಳ್ಳಿ ಕಿರಣಗಳು
ಸುಡಬಹುದು ನಿನ್ನ ಸುಂದರ ಮೈಕಾಂತಿ
ಇದೇ ಹುಣ್ಣಿಮೆಯ ರಾತ್ರಿಯಲಿ ನನ್ನನ್ನು
ಕಾಡುವ ಚಿಂತಿ

Sunday, August 1, 2010

ನಿಜಪ್ರೀತಿ ಕಡಲಾಳ

ನಿನ್ನ ತುಂಟ ಕಿರುನಗೆ
ಮರೆಯಲಾರೆ ನಾ ಕೊನೆವರೆಗೆ
ನನ್ನ ಕಲ್ಪನೆಯಲಿ ಸಿಕ್ಕ ನೀನು
ನನ್ನ ಮನದ ಕಡಲಲಿ ಅಲೆಯ ಎಬ್ಬಿಸಿ
ಪ್ಫ್ರೀತಿ ಎಂದರೇನು ಎಂದು ತೋರಿಸಿ
ಮರೆಯಾದೆ ನನ್ನ ಬಾಳಿನಿಂದ
ಎಷ್ಟೇ ಸುಂದರಿಯರು ಬಂದರೇನು
ನಿನಗೆಯಾರು ಸಾಟಿಯಿಲ್ಲ
ಏಕೆಂದರೆ ನಾನೆಂದು ನಿನ್ನನ್ನು
ನೋಡಿಯೇ ಇಲ್ಲ
ಇದು ನಿಜವಾದ ಪ್ರೀತಿ

ಮನಕದ್ದ ಚಲುವೆ


ಬಾಡಿದಾ ಮೊಗದೊಳಗೆ ನಗುವಾಗಿ ಬಂದಳು
ಬಾನಿಂದಾ ಕೆಳಗಿಳಿದ ಅಪ್ಸರೆಯಂತಿರುವಳು
ಇವಳನ್ನು ಕಂಡು ಸೌಂದರ್ಯವೇ ನಾಚಿತು
ಇವಳ ಕಾಲ್ಗೆಜ್ಜೆ ನಾದಕೆ ಕೋಗಿಲೆ ಹಾಡಿತು
ನನಿವಳ ಕಂಟದ ಸ್ವರವಾಗಿ ಇರುವೆ
ಅವಳ ಕೊಳಲಂತ ಕೊರಳಿಂದ ನಾ ಶೃತಿಯಾಗಿ ಬರುವೆ
ನನ್ನ ಮಾನವನು ಕದ್ದಿರುವ ಚಲುವೆ
ಹೇಳು?....ನೀ ನನ್ನ ಮನೆಗೆಂದು ಬರುವೆ ?

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...