Thursday, February 10, 2011

ಕ್ಯಾ ಯಹಿ ಪ್ಯಾರ್ ಹೈ?

ಅರ್ಚಕರು ಪೂಜೆ ನೆರವೇರಿಸಿ ಮಂಗಳಾರತಿಯನ್ನು ಮುಗಿಸಿ, ಸಾಲುಸಾಲಾಗಿ ಕೈ ಮುಗಿದು ನಿಂತಿದ್ದ ಭಕ್ತರಿಗೆ ಮಂಗಳಾರತಿ ನೀಡುತ್ತಿದ್ದರು. ಹತ್ತು ರೂಪಾಯಿಯ ನೋಟು ಕೊಟ್ಟವರಿಗೆ ಪ್ರಸಾದ, ಐದು ರೂಪಾಯಿ ಕೊಟ್ಟವರಿಗೆ ತೀರ್ಥವನ್ನು ಕೊಡುತ್ತಿದ್ದರು. ಬಿಟ್ಟಿ ಮಂಗಳಾರತಿ ತೆಗೆದುಕೊಳ್ಳುವವರನ್ನು ಕೆಕ್ಕರಿಸಿಕೊಂಡು ನೋಡುತ್ತಿದ್ದರು. ಎಲ್ಲ ಪೂಜೆ ಮುಗಿಸಿಕೊಂಡು ಬಂದ ಮುದಿ ಅರ್ಚಕರು, ದೇವಸ್ಥಾನದ ಕಂಬಕ್ಕೆ ಒರಗಿಕೊಂಡು ಧ್ಯಾನ ಮಾಡುತ್ತಿರುವವಳಂತೆ ಕುಳಿತುಕೊಂಡಿದ್ದ ಹುಡುಗಿಯ ಭುಜ ತಟ್ಟಿ ಭೂಮಿಕಾ, ತಗೋ ಈ ಪ್ರಸಾದ ಎಂದರು. ಆ ಕಡೆ ಈ ಕಡೆ ಕದಲಿದ ಆ ಹುಡುಗಿ ಕರೆಂಟು ಹೋದ ಬಳಿಕ ಮ್ಯಾಕ್ಸ್ ಹುಡುಕಲು ತಡವರಿಸುವಂತೆ ಅತ್ತಿತ್ತ ಕೈ ಬೀಸಿದಳು. ತಗೋಳಮ್ಮ ಇಲ್ಲೇ ಇದೆ ಎನ್ನುತ್ತ ಅರ್ಚಕರು ಪ್ರಸಾದವನ್ನು ಕೈಗಿಟ್ಟರು.
ಪ್ರಸಾದ ತಿನ್ನುತ್ತಾ ಅರ್ಚಕರನ್ನು ಕುರಿತು ಭೂಮಿಕಾ `ದೇವರ ಪ್ರಸಾದ ಎಂದು ಹೇಳ್ತಾರಲ್ಲ, ಅವನಿದಾನ? ಬರ್ತಾನಾ? ಕೈಗೆ ಸಿಗ್ತಾನಾ? ಕಣ್ಣಿಗೆ ಕಾಣ್ತಾನಾ> ಎಂದು ಪ್ರಶ್ನೆ ಹಾಕಿದಳು. ಅವಳ ಮುಗ್ಧ ಪ್ರಶ್ನೆಗೆ ಅರ್ಚಕರು ಸತ್ಯ ಎಂಬುದು ಜಗದಲ್ಲಿದ್ದಿದ್ದೇ ಆದಲ್ಲಿ ಆ ದೇವರು ಇದ್ದಾನೆ. ನಂಬಿ ಬೇಡಿಕೊಂಡರೆ ಬಂದೇ ಬರ್ತಾನೆ. ಸಿಕ್ಕೇ ಸಿಕ್ತಾನೆ. ಒಂದಲ್ಲ ಒಂದು ರೂಪದಲ್ಲಿ ಬಂದು ನಿನಗೂ ಬೆಳಕು ಕೊಡ್ತಾನಮ್ಮ ಎಂದು ಹೇಳಿ ತಲೆ ಸವರಿ ಎದ್ದು ಹೋದರು.
ತನಗೋಸ್ಕರ ದೇವರು ಬಂದೇ ಬರ್ತಾನೆ ಎನ್ನುವಂತಹ ನಂಬಿಕೆಯಲ್ಲಿಯೇ ಅವಳು ದೇವಸ್ಥಾನದ ದ್ವಾರ ಬಾಗಿಲು ಕಡೆಗೆ ಪಾದ ಬೆಳೆಸಿದಳು. ಭೂಮಿಕಾಳ ಬಾಳಲ್ಲಿ ಬೆಳಕು ಬರಲಿ ಎಂದು ದೇವರ ಬಳಿ ಪ್ರಾಥರ್ಿಸುತ್ತಾ ಅರ್ಚಕರು ದೂರದಿಂದ ಅವಳನ್ನು ವೀಕ್ಷಿಸುತ್ತಿದ್ದರು. ಅಷ್ಟರಲ್ಲಿ ಯಾವುದೋ ಅವಸರದಲ್ಲಿ ಬಂದ ಯುವಕ ಭೂಮಿಕಾಳಿಗೆ ಡಿಕ್ಕಿ ಹೊಡೆದನು. ಆಯ ತಪ್ಪಿದ ಭೂಮಿಕ ಕೆಳಗೆ ಬಿದ್ದಳು. ಇದನ್ನು ನೋಡಿದ ಅರ್ಚಕರು ಓಡಿ ಬಂದು ಅವಳನ್ನೆಬ್ಬಿಸಿ ಆ ಯುವಕನಿಗೆ ಬೈಗುಳಗಳ ಮಜ್ಜನವನ್ನೇ ಮಾಡಿಸಿ ಬಿಟ್ಟರು.
ಮೇಲೆದ್ದು ನಿಂತುಕೊಂಡ ಭೂಮಿಕಾಳನ್ನು ಆ ಯುವಕ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದ ಅವಳೊಬ್ಬಳು ಅದ್ಭುತ ಸುಂದರಿ. ಕತ್ತಲು ತುಂಬಿದ ಕಣ್ಣುಗಳಲ್ಲಿಯೂ ಕೂಡ ಜಿಂಕೆಯ ಕದಲಿಕೆ. ಅಮೃತ ತುಂಬಿದ ತುಟಿಗಳ ಮೇಲೆ ನರ್ತನ ಮಾಡುವ ಆ ನಗು, ಬೇಡ ಬೇಡವೆಂದರೂ ಬಾಗಿ ಕೆನ್ನೆಗೆ ಮುತ್ತಿಡುವ ಮುಂಗುರುಳುಗಳು, ಅಪ್ಪಟ ಅಪ್ಸರೆಯಂತೆ ಕಾಣುತ್ತಿದ್ದ ಭೂಮಿಕಾಳನ್ನು ನೋಡುತ್ತ ಯುವಕ ನಿಂತಲ್ಲಿಯೇ ಶಿಲೆಯಂತಾಗಿ ಹೋಗಿದ್ದ.
ಕಣ್ಣೆದುರಿಗಿದ್ದ ಚೆಲುವೆ ಕಣ್ಮರೆಯಾದ ನಂತರವೇ ಈತನಿಗೆ ವಾಸ್ತವ ಪ್ರಪಂಚದಲ್ಲಿದ್ದ ಅನುಭವವಾಗಿದ್ದು. ಆಗ ಪಕ್ಕದಲ್ಲಿದ್ದ ಅರ್ಚಕರನ್ನು ಕುರಿತು ಅರ್ಚಕರೆ ನಾನು ಬೇಕೆಂದು ಡಿಕ್ಕಿ ಹೊಡೆದಿಲ್ಲ. ತಪ್ಪಿ ಆಕಸ್ಮಿಕವಾಗಿ ಆಗಿ ಹೋಯಿತು ಕ್ಷಮಿಸಿ ಎಂದು ಕೈ ಮುಗಿದ.
ಆಗ ಅರ್ಚಕರು ಅಲ್ಲಪ್ಪಾ ಹೇಳಿ ಕೇಳಿ ಕಣ್ಣುಗಳಿಲ್ಲದ ಕುರುಡಿ ಹುಡುಗಿಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದೆಯಲ್ಲ ಸರೀನಾ ಎಂದು ಕೇಳುತ್ತಲೇ ದಿಗ್ಭ್ರಾಂತನಾಗಿಬಿಟ್ಟ. ಕಲ್ಪನೆಗೂ ಎಟುಕದಂತಹ ಸುಂದರ ಪ್ರತಿಮೆ ಅವಳು, ಆದರೆ ಕೆತ್ತಿದ ಕಲಾವಿದ ಕಣ್ಣುಗಳನ್ನು ಕೆತ್ತುವುದನ್ನೇ ಮರೆತಿದ್ದಾನಲ್ಲ ಎಂದುಕೊಂಡ ಯುವಕ ಮೌನಿಯಾಗಿ ಮುನ್ನಡೆದು ಬಿಟ್ಟ.
ಅಂದು ಮನಸ್ಸೆಂಬುದು ಸೂತಕದ ಮನೆಯಂತಾಗಿ ಬಿಟ್ಟಿತು. ನೋಡಿದ ಕ್ಷಣದಲ್ಲಿಯೇ ಪ್ರೀತಿಯ ಒರತೆ ಚಿಮ್ಮಿಸಿದ ಚಿತ್ತ ಚೋರಿಯವಳು. ಪಥ ಬದಲಿಸುವ ಕ್ಷಣದಲ್ಲಿ ಆಯ ತಪ್ಪಿ ಧರಣಿಗೆ ಬಿದ್ದ ನಕ್ಷತ್ರ ಅವಳು. ಆದರೆ ಅದರಲ್ಲಿ ಹೊಳಪಿಲ್ಲ ಎನ್ನುವ ಕೊರಗು ಅವನನ್ನು ಕಾಡುತ್ತಿತ್ತು. ಅವಳ ಅಪ್ಸರೆಯಂತಹ ರೂಪ ಅವನನ್ನು ಬೆರಗುಗೊಳಿಸಿದ್ದರೆ, ಕಣ್ಣುಗಳಿಲ್ಲ ಎಂಬುದು ಅವನನ್ನು ಬೇಸರಗೊಳಿಸುತ್ತಿತ್ತು. ಹೇಗಾದರಾಲಿ ನಾಳೆ ಅವಳನ್ನು ಮಾತಾಡಿಸಬೇಕು. ಆಕಸ್ಮಿಕವಾಗಿ ಆದ ತಪ್ಪಿಗೆ ಕ್ಷಮೆ ಕೇಳಬೇಕು ಎಂದು ನಿರ್ಧರಿಸಿದನು.
ಬೆಳಿಗ್ಗೆ ಎದ್ದು ಕಾಂತಿಹೀನವಾಗಿದ್ದ ಕಣ್ಣುಗಳಲ್ಲಿ ಚೇತನವನ್ನು ಮೂಡಿಸುವ ಮಹದಾಶೆ ಇಟ್ಟುಕೊಂಡು ಯುವಕ ದೇವಸ್ಥಾನಕ್ಕೆ ಹೋದನು. ಸುತ್ತ ಹುಡುಕಿದ. ಒಂದು ಕಂಬಕ್ಕೆ ಒರಗಿ ಕುಳಿತುಕೊಂಡ ಸುಂದರ ಮೂತರ್ಿಯಂತೆ ಹುಡುಗಿ ಕುಳಿತಿದ್ದಳು. ಹತ್ತಿರ ಹೋದ ಯುವಕ ಅವಳನ್ನು ಕುರಿತು ಕೇಳಿ ಇವರೇ, ನಾನು ನಿನ್ನೆ ನಿಮಗೆ ಡಿಕ್ಕಿ ಹೊಡೆದದ್ದು ಅನಿರೀಕ್ಷಿತವಾಗಿ. ಅದರಿಂದ ನನಗೆ ತುಂಬ ಬೇಸರವಾಗಿದೆ ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಂಡನು. ಮುಗುಳ್ನುಗುತ್ತ ಹುಡುಗಿ, ಅಯ್ಯೋ ಅದರಲ್ಲಿ ನಿಮ್ಮದೇನು ತಪ್ಪಿದೆ. ತಪ್ಪೆಲ್ಲ ನನ್ನದೇ, ಕಣ್ಣು ಕಾಣದ ನಾನು ಹೇಗಿರಬೇಕೊ ಹಾಗಿದ್ದರೆ ತಾನೆ ಚಂದ. ಕಾಣದೆ ಬಂದು ಡಿಕ್ಕಿ ಹೊಡೆದೆ. ದಯವಿಟ್ಟು ಕ್ಷಮಿಸಿ ಎಂದು ಹತಾಶೆಯಿಂದ ನುಡಿದಳು. ಅವಳ ಬಾಡಿದ ಮೊಗವನ್ನು ನೋಡಿದ ಯುವಕ, ಇದರಲ್ಲಿ ಯಾರದು ತಪ್ಪಿಲ್ಲ ಹೋಗ್ಲಿ ಬಿಡಿ. ಇನ್ನು ಮುಂದೆ ನಾವಿಬ್ಬರು ಸ್ನೇಹಿತರಾಗಿರೋಣ ಎಂದ.
ಸ್ವಲ್ಪ ಕ್ಷಣ ಸುಮ್ಮನಿದ್ದ ಹುಡುಗಿ, `ನಾನು, ನಾನೇ ಹೇಗಿದ್ದೀನಿ ಎಂಬುದು ತಿಳಿದುಕೊಳ್ಳದಂತಹ, ನೋಡಿಕೊಳ್ಳದಂತಹ ನತದೃಷ್ಟೆ. ಇನ್ನೂ ನಿಮ್ಮನ್ನು ನೋಡದೆ ನಾನು ಹೇಗೆ ಗೆಳೆತನ ಮಾಡಲಿ ಎಂದು ಕೇಳಿದಳು. ಆಗ ಅವಳನ್ನೇ ದಿಟ್ಟಿಸುತ್ತ `ಕತ್ತಲೆಂಬುದು ನಿಮ್ಮ ಕಣ್ಣುಗಳಿಗಿವೆ ಹೊರತು ಮನಸ್ಸಿಗಲ್ಲ. ಬಾಹ್ಯ ಕಣ್ಣುಗಳು ಇಲ್ಲದಿದ್ದರೇನಂತೆ ಅಂತರಂಗದ ಕಣ್ಣುಗಳಿಗೆಲ್ಲ ಕಾಣುವುದಲ್ಲಎಂದು ಹೇಳಿದನು. ಅವನ ಮಾತಿಗೆ ಮುಗುಳ್ನಗುತ್ತ ನಿಮ್ಮ ಹೆಸರೇನು ಎಂದು ಕೇಳಿದಳು.
ನನ್ನ ಹೆಸರು ಹೇಮಂತ. ನಾನೊಬ್ಬ ನಿರುದ್ಯೋಗಿ. ಆದರೆ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತ ದೊಡ್ಡ ಕನಸುಗಳನ್ನು ಕಾಣುವ ಕನಸುಗಾರ. ನಿಮ್ಮ ಹೆಸರೇನು? ಎಂದು ಕೇಳಿದನು.
ಭೂಮಿ ಹೇಗಿರುತ್ತದೆ ಎಂಬ ಸಣ್ಣ ಕಲ್ಪನೆ ಇಲ್ಲದಿದ್ದರೂ ಕೂಡ ಹೆತ್ತವರು ಭೂಮಿಕಾ ಎಂದು ಹೆಸರಿಟ್ಟರು. ಹೆಸರಿಟ್ಟದ್ದೇ ತಪ್ಪೇನೋ ಎನ್ನುವಂತೆ ಭೂಮಿಯನ್ನು ನೋಡದಂತ ಕುರುಡಿಯಾಗಿ ಬಿಟ್ಟೆ ಎಂದು ಹೇಳಿದಳು.
`ಭೂಮಿಕಾ ಅದ್ಭುತವಾದ ಹೆಸರು. ಹೆಸರಿಗೆ ತಕ್ಕಂತೆ ನೀನು ಕೂಡ ಭೂಮಿ ತೂಕದವಳೇ ಆಗಿದ್ದೀಯಾ ಎಂದು ನಕ್ಕನು.
ಹೀಗೆ ಸ್ನೇಹತರಾದ ಇವರಿಬ್ಬರು ಸುತ್ತದ ಸ್ಥಳಗಳೇ ಇರಲಿಲ್ಲ. ಸೂರ್ಯ-ಚಂದ್ರರ ಕಲ್ಪನೆಯನ್ನು ಅವಳ ಮನ ಮುಟ್ಟುವಂತೆ ತಿಳಿಸುತ್ತಿದ್ದ ಹೇಮಂತ, ಕಣ್ಣಿಲ್ಲದ ಅವಳಿಗೆ ಕಣ್ಣಾಗಿ ಜಗದ ಸೌಂದರ್ಯವನ್ನು ವರ್ಣನೆಯ ಮೂಲಕ ತಿಳಿಸುತ್ತಿದ್ದ. ಹೀಗೆ ಅವಳಿಗೆ ದೃಷ್ಟಿ ಕಾಣದ ಕೊರತೆಯನ್ನೇ ನೀಗಿಸಿಬಿಟ್ಟ. ದಿನ ಕಳೆದಂತೆ ಇಬ್ಬರ ಮನದಲ್ಲಿ ಸ್ನೇಹದ ಮುಂದುವರಿದ ಅಧ್ಯಾಯವಾಗಿ ಪ್ರೀತಿಯ ಪುಟಗಳು ತೆರೆದುಕೊಳ್ಳುವುದಕ್ಕೆ ಬಹಳ ಸಮಯ ಬೇಕಾಗಲಿಲ್ಲ. ಅದು ಇದೂ ಮಾತನಾಡುತ್ತ ಒಂದು ಬಾರಿ ಭೂಮಿಕಾ ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದಳು. ಹೇಮಂತ, ನಾನು ಸಾಯುವ ಮೊದಲು ಒಂದು ಬಾರಿಯಾದರೂ ಈ ಜಗತ್ತನ್ನು ನೋಡುತ್ತೇನಾ? ಎಂದು ಕೇಳಿದಳು. ಅವಳ ಮಾತಿಗೆ ಪ್ರತಿಕ್ರಿಯಿಸುತ್ತ, ಖಂಡಿತಾ ನೋಡುತ್ತೀಯಾ ಕಣೇ ನಾನಿದ್ದೀನಿ, ನಾನು ನಿನ್ನ ಕಣ್ಣಿಗೆ ಬೆಳಕನ್ನು ನೀಡುತ್ತೇನೆ ಚಿನ್ನು, ಚೆನ್ನಾಗಿರು ಎಂದು ಹೇಳಿದನು.
ಅವನ ಮಾತಿಗೆ ಖುಷಿಯಾದ ಭೂಮಿಕಾ, ಅಮ್ಮನ ಸಾಂತ್ವಾನಕ್ಕೆ ಸಮಾಧಾನಗೊಳ್ಳುವ ಹಾಗೆ ಅವನೆದೆಗೆ ತಲೆ ಇಟ್ಟು ಸಂತಸ ವ್ಯಕ್ತಪಡಿಸಿದಳು. ನಂತರ ಅವಳನ್ನು ಕರೆದುಕೊಂಡು ಎಲ್ಲ ಆಸ್ಪತ್ರೆಗಳನ್ನು ಸುತ್ತಿದ್ದಾಯಿತು. ಪ್ರಯೋಜನವಾಗಲಿಲ್ಲ. ಯಾರಾದರೂ ಕಣ್ಣುಗಳನ್ನು ಕೊಟ್ಟಿದ್ದೇ ಆದಲ್ಲಿ ಮಾತ್ರ ಅವಳಿಗೆ ಕಣ್ಣುಗಳು ಬರುತ್ತವೆ. ಇಲ್ಲದಿದ್ದರೆ ಇಲ್ಲ. ಜೀವನ ಪರ್ಯಂತ ಹೀಗೆಯೇ ಇರಬೇಕೆಂದು ವೈದ್ಯರು ಕೈ ಚೆಲ್ಲಿಬಿಟ್ಟರು. ದಿನೇ ದಿನೇ ಅವಳ ಮನಸಲ್ಲಿ ನನಗೆ ಕಣ್ಣು ಬರುವುದಿಲ್ಲ ಎಂದುಕೊಳ್ಳುತೊಡಗಿದಳು. ಹೇಮಂತನನ್ನು ಕುರಿತು `ಥೂ, ಈ ಹಾಳು ಜೀವನ ಯಾರಿಗಾದರು ಬೇಕು. ಜೀವನ ಪರ್ಯಂತ ಕತ್ತಲಲ್ಲಿ ಬದುಕುವ ಕಷ್ಟದ ಜೀವನ ಯಾರಿಗೆ ಬೇಕು. ಹಗಲು ರಾತ್ರಿಯ ಪರಿವೆಯೂ ಕೂಡ ಇಲ್ಲದ ಈ ಜೀವನ ಯಾತಕ್ಕೆ ಬೇಕು. ಕುರುಡ, ಕಣ್ಣು ಕಾಣುವುದಿಲ್ಲ ಎನ್ನುವುದು ಗೊತ್ತಾದ ತಕ್ಷಣ ಗುಂಡಿಟ್ಟು ಕೊಂದು ಬಿಡಬೇಕು ಎಂದು ಗುಡುಗಿದಳು. ಬೇಸರ ವ್ಯಕ್ತಪಡಿಸಿ ಅತ್ತಳು. ಕೊನೆಗೆ ನನ್ನ ಜೀವನ ಇಷ್ಟೇ ಎನ್ನುವ ನಿಧರ್ಾರಕ್ಕೆ ಬಂದು ಮಂಕಾಗಿ ಬಿಟ್ಟಳು.
ಕೆಲವು ದಿನಗಳು ಕಳೆದವು. ಓಡಿ ಬಂದ ಹೇಮಂತ ನಾಳೆ ಆಸ್ಪತ್ರೆಗೆ ಹೋಗೋಣ. ಮಾರನೇ ದಿನವೇ ನಿನಗೆ ಕಣ್ಣಿನ ಆಪರೇಷನ್ ಮಾಡುತ್ತೇನೆ ಎಂದು ಡಾಕ್ಟರ್ ಹೇಳಿದ್ದಾರೆ ಎಂದು ತಿಳಿಸಿದ. ವಿಷಯ ತಿಳಿದ ಭೂಮಿಕಾಳ ಸಂತಸಕಕೆ ಪಾರವೇ ಇರಲಿಲ್ಲ. ಅತ್ತಿತ್ತ ಸುತ್ತಾಡಿದ ಹೇಮಂತ ಹಾಗೂ ಹೀಗೂ ದುಡ್ಡು ಹೊಂದಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋದನು. ಭೂಮಿಕಾಳಿಗೆ ಕಣ್ಣು ಬರುವ ಸಂತಸ ಒಂದೆಡೆಯಿದ್ದರೆ, ಅವನ ಮುಖದಲ್ಲಿ ಕಣ್ಣಲ್ಲಿ ಒಂದು ತರಹದ ನಿಸ್ತೇಜತೆ ಎದ್ದು ಕಾಣುತ್ತಿತ್ತು. ಆಗ ಭೂಮಿಕಾಳನ್ನು ಕುರಿತು ಅಮ್ಮನಿಗೆ ಊರಿನಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರಂತೆ ಅವರನ್ನು ಕಾಣಬೇಕೆಂದು ಊರಿಂದ ಕರೆ ಬಂದಿದೆ. ಹೋಗಿ ಬೇಗ ಬರುತ್ತೇನೆ ಧೈರ್ಯವಾಗಿರು ಎಂದು ಸಮಾಧಾನ ಹೇಳಿ ಹೋದನು.
ಮರುದಿನವೇ ಭೂಮಿಕಾಳ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಯಿತು. ಆದರೆ ಹೋದ ಹೇಮಂತ ಬರಲೇ ಇಲ್ಲ. ದಿನಗಳು ಉರುಳಿದವು. ಕಣ್ಣಿನ ಪಟ್ಟಿ ಬಿಚ್ಚಬೇಕು ಎಂದು ಡಾಕ್ಟರ್ ಹೇಳಿದರು.ಹೇಮಂತನ ಸುಳಿವೇ ಇಲ್ಲ. ಅನಿವಾರ್ಯ ಅವನ ಅನುಪಸ್ಥಿತಿಯಲ್ಲಿಯೂ ಕಣ್ಣಿನ ಪಟ್ಟಿ ಕಳಚಲೇ ಬೇಕಾಗಿತ್ತು. ಹೀಗಾಗಿ ಡಾಕ್ಟರ್ ಬಿಚ್ಚಿಯೆ ಬಿಟ್ಟರು. ಆದರೆ ಹೇಮಂತ ಕಾಣಲಿಲ್ಲ. ಅವನಿಗಾಗಿ ಕಾದು ಕಾದು ಸಾಕಾಯಿತು. ಕೊನೆಗೆ ಡಿಸ್ಚಾಜರ್್ ಆಗಿ ಹೊರಡಲು ಅಣಿಯಾದರೂ ಹೇಮಂತ ಬರಲಿಲ್ಲ. ಆಗ ನಸರ್್ ಒಂದು ಪತ್ರವನ್ನು ಕೈಗೆ ಕೊಟ್ಟು ಹೋದಳು. ಬಿಚ್ಚಿ ಓದಿದರೆ ಆಘಾತ ಕಾದಿತ್ತು. `ಭೂಮಿಕಾ ನೀನು ದೇವಲೋಕದ ಅಪ್ಸರೆ. ನಿನ್ನಲ್ಲಿದ್ದ ಒಂದೇ ಒಂದು ಕೊರತೆ ಎಂದರೇ ದೃಷ್ಟಿ ಇಲ್ಲದಿರುವುದು. ನೀನು ಈ ಪತ್ರ ಓದುವ ಹೊತ್ತಿಗೆ ಬೆಳಕು ತುಂಬಿದ ಕಣ್ಣುಗಳಿಂದ ನಳನಳಿಸುತ್ತಿರುತ್ತೀಯಾ. ಇಲ್ಲಿಯವರೆಗೂ ನೀನು ಕತ್ತಲಲ್ಲಿ ಬದುಕಿ ಕುರುಡುತನಕ್ಕೆ ರೋಸಿ ಹೋಗಿದ್ದೀಯಾ. ಕುರುಡುತನದ ಮೇಲೆ ಮತ್ಸರವಿದೆ. ಹೀಗಾಗಿ ನೀನೊಬ್ಬ ಕುರುಡನ ಜೊತೆಗೆ ಬದುಕು ಸಾಗಿಸಲು ಸಾಧ್ಯವಾಗುವುದಿಲ್ಲ. ಬಿದಿಗೆ ಚಂದ್ರನಂತಿರುವ ನಿನ್ನ ಬಾಳಿನಲ್ಲಿ ಅಮಾವಾಸ್ಯೆ ಕತ್ತಲೆಯಂತೆ ನಾನು ಬರುವುದು ನಿನಗೆ ಇಷ್ಟವಾಗದಿರಬಹುದು ಎಂದು ಕೊಂಡು ನಿನ್ನಿಂದ ಬಹುದೂರ ಹೋಗುತ್ತಿದ್ದೇನೆ. ಆದರೆ ನಿನ್ನಲ್ಲಿ ಕ್ಷಮಿಸು. ಆದರೆ ನಿನ್ನಲ್ಲಿ ನನ್ನದೊಂದು ಸಣ್ಣ ಕೋರಿಕೆ. ನಡೆಸಿಕೊಡ್ತಿಯಲ್ವಾ? ಅದೇನ ಗೊತ್ತಾ? ಇಲ್ಲಿಯವರೆಗೂ ಜಗದ ಬೆಳಕಿನ ಸವಿ ಉಂಡ ನನ್ನ ಕಣ್ಣುಗಳು ಇಂದು ಪ್ರೀತಿಯ ಕಾಣಿಕೆಯಾಗಿ ನಿನಗೆ ನೀಡಿದ್ದೇನೆ. ಕಣ್ಗಳ ರೂಪದಲ್ಲಿ ಸದಾ ನಿನ್ನ ಜೊತೆ ಇರುತ್ತೇನೆ. ಸರಿಯಾಗಿ ನೋಡಿಕೊ ಚಿನ್ನು ಪ್ಲೀಸ್ ಎಂದು ಬರೆದ ಸಾಲುಗಳನ್ನು ಓದಿದ ತಕ್ಷಣ ಮೊದಲ ಬಾರಿಗೆ ಬೆಳಕು ಕಂಡುಕೊಂಡ ಕಣ್ಣುಗಳಿಂದ ಹನಿಗಳು ಧರೆಗಿಳಿದವು. ಅಷ್ಟರಲ್ಲಿ ಸುಂದರ ಮುಖದ ಕುರುಡನೊಬ್ಬ ನಡೆದು ಹೋದದ್ದು ಗೋಚರಿಸಿತು. ಅಂದಿನಿಂದ ಭೂಮಿಕಾ ತನ್ನ ಬಾಳಿಗೆ ಬೆಳಕು ನೀಡಿದ ಹೇಮಂತನ ಮುಖವನ್ನು ಪ್ರತಿ ಕುರುಡನ ಮುಖದಲ್ಲೂ ಹುಡುಕುತ್ತಿದ್ದಾಳೆ. ಇಲ್ಲಿಯವರೆಗೂ ಹೇಮಂತ ಸಿಗಲೇ ಇಲ್ಲ.... ಆ ಕಣ್ಗಳ ಹುಡುಕಾಟಕ್ಕೆ ಕೊನೆಯೇ ಇಲ್ಲ. ಕುರುಡು ಪ್ರೀತಿಯೆಂದರೆ ಇದೇನಾ

ಚಲನಚಿತ್ರಗಳಲ್ಲಿ ಪ್ರೀತಿ ಪ್ರೇಮ

ಚಲನಚಿತ್ರಗಳಲ್ಲಿ ಪ್ರೀತಿ ಪ್ರೇಮ
ಪ್ರೀತಿ ಎನ್ನುವ ಈ ಎರಡೂವರೆ ಅಕ್ಷರದ ಪದ ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ನಡುವೆ ಬೆಸುಗೆ ಹಾಕುವ ಕೊಂಡಿಯಾಗಿದೆ. ಇಂದು ಪ್ರೀತಿ ಇಲ್ಲದೇ ಏನು ಇಲ್ಲ ಎನ್ನುವ ಮಟ್ಟದಲ್ಲಿ ತನ್ನ ಸ್ಥಾನವನ್ನು ಅಲಂಕರಿಸಿದೆ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಬರೆದಂತಹ ಕೆಲವು ಸಾಲುಗಳನ್ನೊದಿದರೆ ಜಗದಲ್ಲಿ ಪ್ರೀತಿಯ ಪಾತ್ರವೇನು ಎಂಬುದು ಗೊತ್ತಾಗುತ್ತದೆ.
ಪ್ರೀತಿ ಇಲ್ಲದ ಮೇಲೆ
ಮಾತಿಗೆ ಮಾತು ಮೂಡಿತು ಹೇಗೆ
ಅರ್ಥ ಹುಟ್ಟಿತು ಹೇಗೆ
ಹನಿ ಒಡೆದು ಧರೆಗಿಳಿದು
ಹಸಿರು ಮೂಡಿತು ಹೇಗೆ
ಬರೀ ಪದಕ್ಕೆ ಪದ
ಜೊತೆಗಿದ್ದ ಮಾತ್ರಕ್ಕೆ
ಪದ್ಯವಾದೀತು ಹೇಗೆ
ಹೌದು. ಪ್ರೀತಿ ಎನ್ನುವುದಕ್ಕೆ ಒಂದು ವಿಶಾಲವಾದ ವ್ಯಾಪ್ತಿ ಇದೆ. ಮನುಕುಲವು ನಿಂತಿರುವುದೇ ಒಂದು ಪ್ರೀತಿ ಎನ್ನುವಂತಹ ವಿಶಾಲ ತಳಹದಿಯ ಮೇಲೆ. ಹೀಗಿರುವಾಗ ಪ್ರೀತಿ ಎಂಬುದು ವಿಶ್ವವ್ಯಾಪ್ತಿಯಾಗಿದ್ದು ಎಲ್ಲರಿಗೂ ಬೇಕಾಗುವಂತಹ ಒಂದು ಅವಶ್ಯಕತೆ. ಇದನ್ನೇ ಇಂದು ಚಲನಚಿತ್ರರಂಗದಲ್ಲಿ ಬಂಡವಾಳವಾಗಿಸಿಕೊಂಡು ಬಿಟ್ಟಿವೆ.
ಹಿಂದಿನ ಲವ್ ಸ್ಟೋರಿ
ಮೊದಲೇ ಸಂಪ್ರದಾಯಬದ್ಧ ಸಮಾಜ ಎಂದು ಹೆಸರುಗಳಿಸಿಕೊಂಡಿರುವ ಭಾರತ ದೇಶ ಪ್ರೀತಿಗೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದೆ. ಆದರೆ ಇದು ಬೆಳೆಯುತ್ತಾ ಬೆಳೆಯುತ್ತಾ ಎತ್ತು ಕತ್ತೆಯಾಯಿತು ಎನ್ನುವ ಗಾದೆ ಮಾತಿನ ಹಾಗೆ ಪ್ರೀತಿಗೆ ಒಂದು ನಿದರ್ಿಷ್ಟವಾದ ಅರ್ಥ, ವ್ಯಾಪ್ತಿ, ಚೌಕಟ್ಟು ನಿಮರ್ಿಸಿ ಅದರ ಅರ್ಥವನ್ನೇ ಕೆಡಿಸುತ್ತಿದ್ದಾರೆ. ಅದಕ್ಕೆ ಚಲನಚಿತ್ರಗಳಲ್ಲಿನ ದೃಶ್ಯಗಳು ಸಹ ಪೂರಕವಾಗಿವೆ.
* ಪ್ರೇಮ ಕಥೆಗಳನ್ನು ಹೇಳಿದ ಕೃತಿಗಳು
ಷೇಕ್ಸ್ಪಿಯರ್ನ, ರೋಮಿಯೋ ಜುಲಿಯೇಟ್, ಸಲೀಂ-ಅನಾರ್ಕಲಿ, ದೇವದಾಸ-ಪಾರ್ವತಿ, ದುಶ್ಯಂತ-ಶಕುಂತಲೆ ಇಂತಹ ಮೊದಲಾದ ಕೃತಿಗಳಲ್ಲಿ ಪ್ರೇಮ ಗಾಂಧರ್ವ ವಿವಾಹ ಮುಂತಾಗಿ ಶೃಂಗಾರಮಯ ಸನ್ನಿವೇಶಗಳನ್ನು ಸುಲಲಿತವಾಗಿ ರಚಿಸಿದರು ಕೂಡ ಯಾವುದೇ ರೀತಿಯಲ್ಲಿಯೂ ಸಹ ಅಶ್ಲೀಲ ಎಂದೆನಿಸುತ್ತಿರಲಿಲ್ಲ. ಹೀಗಾಗಿ ಜನರಲ್ಲಿ ಪ್ರೀತಿಗೆ ಒಂದು ಗೌರವ ಸ್ಥಾನ ನೀಡಿದ್ದರು.
ಐತಿಹಾಸಿಕ ಸತ್ಯಗಳನ್ನು ಹುಡುಕುತ್ತ ಹೋದಂತೆ ಆದಿಲ್ಶಾಹಿ ತನ್ನ ಪ್ರೇಯಸಿ ರಂಭಾ ನಡುವಿನ ಪ್ರೀತಿ ಎಷ್ಟಿತ್ತು ಎಂಬುದನ್ನು ಗೋಲಗುಂಬಜ ನೋಡಿದರೆ ತಿಳಿಯುತ್ತದೆ. ಇವರೀರ್ವರ ನಡುವಿನ ಪ್ರೀತಿ ಧರ್ಮಗಳನ್ನೇ ಮರೆಸಿಬಿಟ್ಟಿತ್ತು.
ಶಹಜಹಾನ್-ಮಮತಾಜ್ಳ ನಡುವಿನ ಪ್ರೀತಿಗೆ ಸಾಕ್ಷಿ ಎನ್ನುವಂತೆ ತಾಜಮಹಲ್ ನಿಮರ್ಾಣ ರಾರಾಜಿಸುತ್ತಿದೆ. ಹೀಗೆಯೇ ಭಾರತ ಮಾತ್ರವಲ್ಲದೆ ಜಾಗತಿಕ ಇತಿಹಾಸದ ಪುಟಗಳನ್ನು ತಿರುವುತ್ತ ಹೋದಂತೆ ಪ್ರೀತಿಯ ಆಳ ಎಂಬುದು ಎಷ್ಟಿತ್ತು ಎಂಬುದು ತಿಳಿದು ಬರುತ್ತದೆ.
* ಹೊಸ ಇತಿಹಾಸ ನೀಡಿದ ಲವ್ಸ್ಟೋರಿ ಚಿತ್ರಗಳು
ಮನುಷ್ಯ ಬೆಳೆದಂತೆ ಬೆಳೆದಂತೆಲ್ಲ ಅವನ ಚಿಂತನೆಗಳು ಸಹ ಬದಲಾಗುತ್ತಾ ಹೋಗುತ್ತದೆ. ಅವನ ವಿಚಾರ ವ್ಯಾಪ್ತಿಯು ಕೂಡ ಬದಲಾವಣೆಯಾಗಿ ವಿಶಾಲವಾಗುತ್ತ ಹೋಗುತ್ತದೆ. ಹೀಗಾಗಿ ಸಾಹಿತ್ಯ ಕೃತಿಗಳಿಗೆ ಮಾತ್ರ ಸೀಮಿತವಿದ್ದಂತಹ ಪ್ರೀತಿಯ ವಿಷಯ ವಸ್ತು ಚಲನಚಿತ್ರಗಳಾಗಿ ತೆರೆಯ ಮೇಲೆ ಮೂಡುವುದಕ್ಕೆ ಬಹಳ ಸಮಯ ಬೇಕಾಗಲಿಲ್ಲ.
ಮೊದಲಿಗಿದ್ದ ಮೂಕಿ ಚಿತ್ರಗಳಲ್ಲಿ ಸಮಾಜ, ದೇಶಭಕ್ತಿ, ಕುಟುಂಬ ಎನ್ನುವಂತಹ ಹಲವಾರು ವಿಷಯ ವಸ್ತುಗಳೇ ಚಲನಚಿತ್ರಗಳಾಗಿ ತೆರೆಯ ಮೇಲೆ ಪ್ರದಶರ್ಿತವಾದವು. ಮೂಕಿ ಚಿತ್ರಗಳು ಬರಬರುತ್ತ ರಂಜನೆಯನ್ನು ಕಳೆದುಕೊಳ್ಳುವ ಹೊತ್ತಿಗೆ ಸರಿಯಾಗಿ ವಾಕಿ ಚಿತ್ರಗಳು ಆ ಸ್ಥಳವನ್ನು ಆಕ್ರಮಿಸಿಕೊಂಡವು. ಅಲ್ಲಿಯೂ ಕೂಡ ಅಷ್ಟೇ ಭಕ್ತಿ ಪ್ರಾಧಾನ್ಯತೆ, ವಿಷಯ ವಸ್ತುವುಳ್ಳ ಚಿತ್ರಗಳನ್ನೇ ಚಿತ್ರಿಸಲಾಗುತ್ತಿತ್ತು. ಹೀಗಾಗಿ ಜನಮನ ಸೆಳೆಯುವುದಕ್ಕೆ ಸ್ವಲ್ಪ ಸಮಯ ಹಿಡಿಯಿತು.
ನಂತರದ ದಿನಗಳಲ್ಲಿ ಬಣ್ಣದ ಚಿತ್ರಗಳು ಯಾವಾಗ ಮಾರುಕಟ್ಟೆಗೆ ಲಗ್ಗೆ ಇಟ್ಟವೋ ಆಗ ಚಲನಚಿತ್ರಗಳಲ್ಲಿ ಹೊಸ ಹೊಸ ಪ್ರಯೋಗಗಳು ಆರಂಭಗೊಂಡವು. ನಂತರದ ದಿನಗಳಲ್ಲಿ ಪ್ರೇಮ ಕಥೆಗಳನ್ನಿಟ್ಟುಕೊಂಡ ಕಥೆ ಹೆಣೆದು ಚಲನಚಿತ್ರಗಳನ್ನು ತಯಾರಿಸತೊಡಗಿದರು. ಇದು ಅದ್ಭುತ ಯಶಸ್ಸು ತಂದುಕೊಟ್ಟವು.
* ಜನ ಮನಸ್ಸಿಗೆ ಲಗ್ಗೆ ಇಟ್ಟ ಲವ್ಸ್ಟೋರಿ ಚಿತ್ರಗಳು
ಇದುವರೆಗೂ ಭಕ್ತಿ ಪ್ರಧಾನ ಮತ್ತು ಐತಿಹಾಸಿಕ ಕಥೆಗಳನ್ನು ಇಟ್ಟುಕೊಂಡು ಚಲನಚಿತ್ರಗಳನ್ನು ನಿಮರ್ಿಸುತ್ತಿದ್ದ ಕಾಲ ಬದಲಾಗಿ ಪ್ರೇಮ ಕಥೆಗಳಾಧಾರಿತ ಚಿತ್ರಗಳು ಲಗ್ಗೆ ಇಟ್ಟವು. ವಾಣಿಜ್ಯ ದೃಷ್ಟಿಯಿಂದಲೂ ಈ ಚಿತ್ರಗಳು ಅಭೂತಪೂರ್ವ ಯಶಸ್ಸು ಸಾಧಿಸಿದವು.
ವಿಭಿನ್ನ ರೀತಿಯ ಕಥಾ ಹಂದರಗಳು, ಮಧುರವಾದ ಸಂಭಾಷಣೆಗಳ ಮೂಲಕವಾಗಿ ಹಲವಾರು ಚಲನಚಿತ್ರಗಳು ಜನರ ಮನಸ್ಸಿಗೆ ಲಗ್ಗೆ ಇಟ್ಟವು.
* ಅಭೂತಪೂರ್ವ ಯಶಸ್ಸು ಗಳಿಸಿದ ಪ್ರೇಮಕಥೆಗಳು
ಭಾರತೀಯ ಚಿತ್ರರಂಗದಲ್ಲಿ ಹೆಜ್ಜೆ ಇಟ್ಟ ಲವ್ಸ್ಟೋರಿಗಳು, ಚಲನಚಿತ್ರರಂಗದ ಬೆಳವಣಿಗೆಗೆ ಸಹಾಯಕವಾದವು. ಸಲೀಂ ಅನಾರ್ಕಲಿಯ ಪ್ರೇಮ ಚರಿತ್ರೆಯನ್ನು ಸಾರುವ ಮೊಘಲ್ ಇ ಅಸಮ್ಚಲನಚಿತ್ರವು ಅದ್ಭುತ ಯಶಸ್ಸು ಕಂಡಿತು. ಐತಿಹಾಸಿಕ ಪ್ರೇಮ ಕಥಾನಕವನ್ನು ತೆರೆಗೆ ತರುವ ಮೂಲಕ ಪ್ರೇಮ ಕಥೆಗಳಾಧಾರಿತ ಚಲನಚಿತ್ರಗಳ ದಂಡಯಾತ್ರೆ ಆರಂಭವಾಯಿತು. ನಂತರದ ದಿನಗಳಲ್ಲಿ ಪ್ರೇಮಕಥೆಗಳೆ ಚಲನಚಿತ್ರಗಳ ಮುಖ್ಯ ಕಥಾವಸ್ತುಗಳಾದವು. `ಮೇರಾ ನಾಮ್ ಜೋಕರ್ ರಾಜ್ಕಪೂರ ಅಭಿನಯದ ಈ ಚಿತ್ರವು ಪ್ರೇಮ ಕಥೆಗಳಲ್ಲಿ ಹೊಸತನ ಮೂಡಿಸಿದ್ದಲ್ಲದೆ, ತ್ರಿಕೋನ ಪ್ರೇಮಕಥೆಯನ್ನು ತೋರಿಸಿತು. `ಸಂಗಮ ಎಂಬ ಮತ್ತೊಂದು ಚಿತ್ರವು ಬಾಕ್ಸ್ ಆಫೀಸ್ ದೋಚಿದ ಲವ್ಸ್ಟೋರಿ ಚಿತ್ರ. ನಂತರದ ದಿನಗಳಲ್ಲಿ `ದಿಲ್ `ಹಿಂದೂಸ್ತಾನಿ `ಕಯಮತ ಸೆ ಕಯಾಮತ ಎಂಬ ಹಲವಾರು ಚಿತ್ರಗಳು ಸಂಪೂರ್ಣ ಪ್ರೇಮಕಥೆಗಳನ್ನವಲಂಭಿಸಿಯೇ ನಿಮರ್ಾಣವಾದವು. ಒಟ್ಟಿನಲ್ಲಿ ಇವೆಲ್ಲ ಮುಂದಿನ ದಿನಗಳಲ್ಲಿ ಇಡೀ ಚಲನಚಿತ್ರರಂಗವನ್ನು ಸಂಪೂರ್ಣವಾಗಿ ಲಗ್ಗೆ ಇಟ್ಟಿದ್ದೆಂದರೆ ಪ್ರೀತಿ ಪ್ರೇಮಗಳ ಕುರಿತಾದ ವಿಷಯ. ಇವು ಕೇವಲ ವಾಣಿಜ್ಯ ದೃಷ್ಟಿಯಿಂದ ಸೃಷ್ಟಿಸಿದ್ದರೂ ಕೂಡ ಇದರ ಪರಿಣಾಮ ನೇರವಾಗಿ ಅಗಿದ್ದು ಮನರ ಮನಸ್ಸಿನ ಮೇಲೆ. ಅದರಲ್ಲೂ ಹದಿಹರೆಯದ ಮನಸ್ಸಿನ ಮೇಲೆ `ಲವ್ಸ್ಟೋರಿ `1947 ಲವ್ಸ್ಟೋರಿ ಮುಂತಾದ ಚಿತ್ರಗಳು ಯುವ ಜನರ ಮನಸ್ಸಿನಲ್ಲಿ ಪ್ರೀತಿ ಪ್ರೇಮದ ಭಾವನೆಗಳು ಚಿಗುರೊಡೆಯುವಂತೆ ಮಾಡಿದವು.
* ಪ್ರೀತಿಗೆ ಪ್ರಾಶಸ್ತ್ಯ ನೀಡಿದ ಕನ್ನಡ ಚಿತ್ರಗಳು
ಹಿಂದಿ ಚಿತ್ರರಂಗ ಅನುಸರಿಸಿದಂತೆ ಕನ್ನಡ ಚಿತ್ರರಂಗವು ಕೂಡ ಪ್ರೇಮ ಕಥಾನಕಗಳನ್ನು ಇಟ್ಟುಕೊಂಡು ಚಿತ್ರ ನಿಮರ್ಾಣ ಮಾಡುವುದನ್ನು ರೂಢಿಯಾಗಿಸಿಕೊಂಡಿತು. ಮೊದಲಿದ್ದ ಭಕ್ತಿ ಪ್ರಧಾನತೆ ಚಿತ್ರಗಳ ಸ್ಥಾನದಲ್ಲಿ ಲವ್ಸ್ಟೋರಿ ಚಿತ್ರಗಳು ನಿಂತುಕೊಂಡವು. ಡಾ.ರಾಜ್ಕುಮಾರ್ ಅಭಿನಯದ `ಎರಡು ಕನಸು ಚಿತ್ರವು ಸುಂದರವಾದ ಕಥಾಯಾಧಾರಿತ ಚಿತ್ರ. ಮನಮನ ಸೂರೆಗೊಂಡಿದ್ದಲ್ಲದೆ ಪ್ರೇಮ ಪ್ರೀತಿಯ ಕಲ್ಪನೆಯನ್ನು ಯುವ ಜನರ ಮನಸ್ಸಿನಲ್ಲಿ ಮೂಡಿಸಿದಂತಹ ಚಿತ್ರವಾಗಿದೆ. ಒಂದರ ಬೆನ್ನ ಹಿಂದೆ ಒಂದೊಂದಾಗಿ ಲವ್ಸ್ಟೋರಿ ಚಿತ್ರಗಳ ನಿಮರ್ಾಣ ಹಾಗೆಯೇ ಮುಂದುವರಿಯಿತು. ಅದರಲ್ಲಿ `ನಾ ನಿನ್ನ ಮರೆಯಲಾರೆ ಮುಂತಾದ ಚಲನಚಿತ್ರಗಳು ಯಶಸ್ಸನ್ನು ಸಾಧಿಸಿದ್ದಲ್ಲದೆ ಜನಮಾನಸದಲ್ಲಿ ಪ್ರೀತಿ-ಪ್ರೇಮದ ಕಲ್ಪನೆಗಳು ಗರಿಗೆದರುವಂತೆ ಮಾಡಿದವು.
ಇನ್ನು `ಬೆಸುಗೆಯಂತಹ ಅದ್ಭುತ ಕಥಾಹಂದರ ಹೊಂದಿದ ಚಿತ್ರಗಳು ಯಶಸ್ಸಿನ ಮೆಟ್ಟಿಲು ಹತ್ತಿದ್ದು ಮಾತ್ರವಲ್ಲದೆ ಚಿತ್ರ ನಟ ಶ್ರೀನಾಥರಿಗೆ ಪ್ರಣಯರಾಜ ಎನ್ನುವಂತಹ ಬಿರುದನ್ನು ಕೂಡ ತಂದು ಕೊಟ್ಟವು. ಹೀಗೆ ಚಲನಚಿತ್ರಗಳಲ್ಲಿ ಪ್ರೀತಿ-ಪ್ರೇಮ ವಿಷಯಾಧಾರಿತ ಚಿತ್ರಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ನಿಮರ್ಾಣವಾಗತೊಡಗಿದವು.
* ಪ್ರೀತಿಯ ಹುಚ್ಚು ಹಿಡಿಸಿದ ಪ್ರೇಮಲೋಕ
ಕನ್ನಡ ಚಲನಚಿತ್ರರಂಗದ ಲವ್ಗುರು ಎಂದೇ ಕರೆಸಿಕೊಂಡಿರುವ ರವಿಚಂದ್ರನ್ ಅಭಿನಯದ ಪ್ರೇಮಲೋಕ ಚಿತ್ರವು ಯಾವಾಗ ಶತದಿನೋತ್ಸವ ಆಚರಿಸಿತೋ ಯುವ ಜನ ಮನದಲ್ಲಿಯೂ ಸಹ ಪ್ರೇಮ ಕಾರಂಜಿ ಚಿಮ್ಮತೊಡಗಿತು. ಅದರಲ್ಲಿನ ಸಂಭಾಷಣೆ, ಹಾಡುಗಳು ಎಲ್ಲವೂ ಪ್ರೀತಿಸುವ ಯುವ ಹೃದಯಗಳ ಪಾಲಿಗೆ ಪ್ರೇಮದ ಬೈಬಲ್ ಎನಿಸಿಕೊಂಡು ಬಿಟ್ಟಿತು. ಇದರಿಂದ ಸ್ಫೂತರ್ಿಪಡೆದ ರವಿಚಂದ್ರನ್ ಮುಂದಿನ ಚಿತ್ರಗಳೆಲ್ಲವೂ ಪ್ರೀತಿ ಪ್ರೇಮದ ವಿಷಯ ವಸ್ತುವನ್ನೇ ಆಧಾರವಾಗಿಟ್ಟುಕೊಂಡು ಚಿತ್ರಿತವಾಗತೊಡಗಿದವು. `ಯಾರೇ ನೀನು ಚೆಲುವೆ `ಕಲಾವಿದ `ರಸಿಕ `ಪುಟ್ನಂಜ ಯಶಸ್ವಿ ಚಿತ್ರಗಳೆಲ್ಲವೂ ಕೂಡ ಪ್ರೇಮ ಚಿತ್ರಗಳೇ.
ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದ ಹೆಜ್ಜೆಗುರುತುಗಳನ್ನು ನೋಡುತ್ತಾ ಹೋದಂತೆ ಜನಮಾನಸದಲ್ಲಿ ಉಳಿದ ಚಿತ್ರಗಳು ಪ್ರೇಮಕಥಾನಕವನ್ನೇ ಹೊಂದಿರುವ ಚಿತ್ರಗಳು`ನಮ್ಮೂರ ಮಂದಾರ ಹೂವೆ `ಪ್ರೇಮ ರಾಗ ಹಾಡು ಗೆಳತಿ `ಬಂಧನ `ಅಮೃತ ವಷರ್ಿಣಿ ಮುಂತಾದ ಚಿತ್ರಗಳು ಯಶಸ್ಸು ಕಾಣಿಸಿದವು.
* ಪ್ರೇಮ ಕಥಾ ಹಂದರ ಮತ್ತು ಸಮಾಜ
ಯಾವಾಗ ಕೆಲವು ಚಲನಚಿತ್ರಗಳು ಪ್ರೀತಿ-ಪ್ರೇಮ ಕಥೆಗಳನ್ನು ಹೊತ್ತ ಎಲ್ಲ CIನಿಮರ್ಾಪಕರು ಮತ್ತು ನಿದರ್ೇಶಕರು ಅದರ ಬೆನ್ನತ್ತಿ ಹೊರಟು ಬಿಟ್ಟರು. ಪರಿವರ್ತನೆಯಾಗುತ್ತ ಸಾಮಾಜಿಕ ಕಾಳಜಿಯನ್ನು ಕಡೆಗಣಿಸುವ ಮಟ್ಟದಲ್ಲಿ ಚಿತ್ರಗಳು ನಿಮರ್ಾಣವಾಗತೊಡಗಿದವು. ಅದಕ್ಕೆ ಸರಿ ಹೊಂದುವಂತಹ ದೃಶ್ಯಾವಳಿಗಳು ಇಡೀ ಸಾಮಾಜಿಕ ಸ್ವಾಸ್ತ್ಯವನ್ನು ಹದಗೆಡಿಸುವ ಮಟ್ಟದಲ್ಲಿ ಬಂದು ನಿಂತವು. ಅಲ್ಲಿಯವರೆಗೂ ಜನರ ಭಾವನೆಯಲ್ಲಿ ಪ್ರೀತಿ ಪ್ರೇಮ ಎನ್ನುವುದಕ್ಕೆ ಒಂದು ಗೌರವಯುತ ಸ್ಥಾನಮಾನವನ್ನು ಕೊಡಲಾಗಿತ್ತು. ನಂತರ ಪ್ರೇಮ ಕಥೆಗಳನ್ನು ಹೊಂದಿರುವ ಚಿತ್ರಗಳ ಹಾವಳಿಯಿಂದಾಗಿ ಅದರ ಅರ್ಥವೇ ಬೇರೆಯಾಯಿತು. ಪ್ರೀತಿ ಎನ್ನುವುದು ಕೇವಲ ಭಾವನೆಗಳಿಗೆ ಸಂಬಂಧಿಸಿದಂತಹದ್ದು ಎಂಬುದು ಮೊದಲಿದ್ದ ಕಲ್ಪನೆ. ಇದು ನಿಜವೂ ಹೌದು. ಆದರೆ ಇಂತಹ ಚಿತ್ರಗಳು ಮಾಡಿದ ಅಚಾತುರ್ಯ ಈ ಕೆಳಗಿನಂತಿವೆ.
* ಅಪ್ಪುಗೆ ಎಂದರೆ ಪ್ರೀತಿಯೆ?
ಪ್ರೇಮ ಕಥೆಯಾಧಾರಿತ ಚಿತ್ರಗಳು ಕೇವಲ ಲಾಭದ ಉದ್ದೇಶದಿಂದ ನಿಮರ್ಾಣವಾಗತೊಡಗಿದವು. ಇದರಿಂದ ಜನರನ್ನು ತನ್ನತ್ತಸೆಳೆದುಕೊಳ್ಳುವುದಕ್ಕಾಗಿ ಹಸಿ ಹಸಿ ದೃಶ್ಯಗಳನ್ನು ಚಿತ್ರಿಸತೊಡಗಿದವು. ಆ ಚಿತ್ರಗಳಲ್ಲಿ ಅಪ್ಪುಗೆ ಎಂದರೆ ಪ್ರೀತಿ, ಪ್ರೀತಿ ಮಾಡುವುದೆಂದರೆ ಅಪ್ಪಿಕೊಳ್ಳಲೇ ಬೇಕು ಎನ್ನುವ ಮಟ್ಟದಲ್ಲಿ ಅದನ್ನು ಚಿತ್ರಿಸಿ, ಭಾವನೆಯಲ್ಲಿದ್ದ ಪ್ರೀತಿಯನ್ನು ದೈಹಿಕತೆಗೆ ತಂದು ನಿಲ್ಲಿಸಿದರು. ಇದರಿಂದಾಗಿ ಯುವಜನರ ಮನಸ್ಸು ಕೂಡ ಪಥ ಬದಲಿಸಿತು. ಓಹ್... ಪ್ರೀತಿ ಎಂದರೆ ಇದೇನಾ ಎನ್ನುವ ಮಟ್ಟದಲ್ಲಿ ಅವನ ಚಿಂತನೆಗಳು ಬದಲಾದವು.
* ಚುಂಬನ ಮಾದಕತೆಯ ಪ್ರದರ್ಶನ
ಹಲವಾರು ಚಿತ್ರಗಳನ್ನು ನಾವು ವೀಕ್ಷಿಸಿದ್ದೇವೆ. ಅಲ್ಲಿ ಪ್ರೀತಿಯ ಕಥಾಹಂದರವೇನಾದರೂ ಇದ್ದದ್ದೆ ಆದಲ್ಲಿ ಅಲ್ಲಿ ಚುಂಬನ ದೃಶ್ಯಗಳು, ಮಾದಕತೆಯ ದೃಶ್ಯಗಳು ಸವರ್ೇ ಸಾಮಾನ್ಯವಾಗಿ ಕಾಣುತ್ತೇವೆ. ಇದರಿಂದಾಗಿ ಪ್ರೀತಿ ಎನ್ನುವುದು ದೈಹಿಕ ವಾಂಛೆಯನ್ನು ತೀರಿಸಿಕೊಳ್ಳುವ ಕಳ್ಳದಾರಿ ಎನ್ನುವಂತೆ ಬಿಂಬಿತವಾಗಿ ಯುವ ಜನರ ಮನಸ್ಸಿನ ಮೇಲೆ ದಾಳಿ ಮಾಡುತ್ತಿದೆ. ಹೀಗಾಗಿ ಪ್ರೀತಿ ಎಂಬುದು ಅರ್ಥ ಕಳೆದುಕೊಳ್ಳುತ್ತಲಿದೆ.
* ಎಳೆಯ ಜೀವಿಗಳ ಪ್ರೇಮಕಥೆ
ಚಲನಚಿತ್ರ ಎಂಬುದು ಮನೋರಂಜನೆಯ ಬದಲಿಗೆ ವ್ಯಾಪಾರಿ ದೃಷ್ಟಿಯಿಂದಾಗಿ ತಮ್ಮ ತನವನ್ನು ತೊರೆದು ಬಿಟ್ಟು ಏನು ಬೇಕಾದರೂ ಮಾಡಲು ಮುಂದಾದರು. ಪರಿಣಾಮವಾಗಿ ಅಪ್ರಾಪ್ತ ವಯಸ್ಸಿನವರನ್ನು ಚಿತ್ರದಲ್ಲಿ ಹಾಕಿಕೊಂಡು ಅದರಲ್ಲಿ ಪ್ರೀತಿ, ಪ್ರೇಮ ಮನೆ ತೊರೆದು ಹೊರಟು ಹೋಗುವ ದೃಶ್ಯಗಳನ್ನು ಅಳವಡಿಸಿ ಯುವ ಜನರ ದಿಕ್ಕು ತಪ್ಪಿಸುತಿದ್ದಾರೆ.
ಹದಿಹರೆಯಕ್ಕೆ ಕಾಲಿಡುತ್ತಿರುವ ಅಪ್ರಾಪ್ತರು ಇದು ನಿಜ ಜೀವನದಲ್ಲಿ ನಡೆದರೆ ಏನಾಗಬಹುದು ಎಂಬುದರ ಪರಿವೆಯೂಇಲ್ಲದೆ ತಾವು ಕೂಡ ಎಡವಿ ಬಿಡುತ್ತಾರೆ. ಕೇವಲ ಚಿತ್ರದಲ್ಲಿ ನೋಡಿರುವಂತಹ ಪ್ರೇಮಕಥೆಯನ್ನು ನಂಬಿಕೊಂಡು ಜೀವನವನ್ನೇ ದುರಂತಕಥೆಯಾಗಿ ಮಾಡಿಕೊಂಡ ಎಷ್ಟೋ ನಿದರ್ಶನಗಳು ಇಂದಿಗೂ ನಮ್ಮ ಕಣ್ಣ ಮುಂದೆ ಇವೆ.
* ಪ್ರೀತಿಗಾಗಿ ಮಾರಣಹೋಮ
ಹಲವಾರು ಚಿತ್ರಗಳು ಯಶಸ್ಸು ಪಡೆದುಕೊಳ್ಳುವುದಕ್ಕೆ ಇಂದು ಪ್ರೀತಿ ಅಥವಾ ಮಚ್ಚು, ಲಾಂಗು ಇರಲೇಬೇಕು ಎಂಬಂತಹ ಸ್ಥಿತಿ ಚಿತ್ರರಂಗಕ್ಕೆ ಬಂದು ಬಿಟ್ಟಿದೆ. ಒಂದು ವೇಳೆ ಪ್ರೀತಿ ಪ್ರೇಮದ ಜೊತೆಯಲ್ಲಿ ಲಾಂಗು, ಮಚ್ಚು ಸೇರಿದರಂತೂ ಮಗಿದೇ ಹೋಯ್ತು. ಅಲ್ಲಿ ಪ್ರೀತಿಗಾಗಿ ಮಾರಣ ಹೋಮ ನಡೆಯಲೇಬೇಕು.
ಪ್ರೀತಿಸಿದ ಹುಡುಗಿಗಾಗಿ ಹುಡುಗ ಕಾಲೇಜು ಬಿಟ್ಟು ಕೈಯಲ್ಲಿ ಲಾಂಗು ಹಿಡಿದು ರೌಡಿಯಾಗುವಂತಹ ಕಥಾನಕಗಳು ಇಂದು ಅಧಿಕವಾಗಿ ಬರುತ್ತಿವೆ. ಇವೆಲ್ಲವುಗಳು ನಮ್ಮ ಯುವ ಜನತೆ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂದರೆ ಪ್ರೀತಿಗೋಸ್ಕರ ನಾನು ಯಾರನ್ನ ಬೇಕಾದರೂ ಎದುರು ಹಾಕಿಕೊಳ್ಳೋಕೆ ಸಿದ್ಧ. ಯಾರನ್ನು ಬೇಕಾದರೂ ಕೊಲ್ಲೋಕೆ ಸಿದ್ಧ ಎನ್ನುವ ಮನಸ್ಥಿತಿ ನಿಮರ್ಾಣ ಮಾಡುತ್ತಿವೆ.
* ಪ್ರಚೋದನಕಾರಿ ಪ್ರೇಮ ಸಂಭಾಷಣೆ
ಬೆನ್ನಹಿಂದೆ ಒಂದು ಗ್ಯಾಂಗು, ಕೈಯ್ಯಲ್ಲೊಂದು ಲಾಂಗು, ಬಾಯಲ್ಲೊಂದು ಸಾಂಗು ಇದ್ದು ಬಿಟ್ಟರೆ ಸಾಕು ಸಿನೆಮಾ ಎಂಬುದು ಮುಗೀದೆ ಹೋಯ್ತು ಎನ್ನುವ ಮಟ್ಟಕ್ಕೆ ಚಲನಚಿತ್ರರಂಗ ಬಂದು ತಲುಪಿದೆ. ಇಂತಹ ಸಂದರ್ಭದಲ್ಲಿಯೇ ಪ್ರೀತಿ-ಪ್ರೇಮ ಎನ್ನುವ ವಿಷಯದಲ್ಲಿ ಪ್ರಚೋದನಕಾರಿಯಂತಹ ಸಂಭಾಷಣೆಗಳು ಯುವ ಜನರ ಮನಸ್ಸಿನಲ್ಲಿ ಒಂದು ರೀತಿಯ ಕೆಟ್ಟದಾದ ಭಾವನೆಗಳು ಬೆಳೆಯುವಂತಾಗುತ್ತಿದೆ. ಇದರಿಂದಾಗಿ ಅಲ್ಲಿನ ಸಂಭಾಷಣೆಯಂತೆಯೇ ತಂದೆ-ತಾಯಿಯರ ಎದುರಿಗೆ ನಿಂತು ಮಾತನಾಡುವ ಮಟ್ಟಕ್ಕೆ ಯುವ ಜನತೆ ಬಂದು ತಲುಪಿ ಬಿಡುತ್ತದೆ.
ಪ್ರೀತಿಸಿದ ಜೀವಗಳು ಮನೆ ತೊರೆದು ಓಡಿ ಹೋಗುವುದು, ಜಗತ್ತನ್ನು ಮೆಟ್ಟಿನಿಲ್ಲುವುದು, ಎಲ್ಲ ಕಷ್ಟಗಳಿಗೂ ಅವರು ಎದೆಗುಂದದೆ ಮುನ್ನುಗ್ಗುವುದು ಇವೇ ಮೊದಲಾದ ಘಟನೆಗಳನ್ನು ನೋಡಿದ ಯುವಜನ ಅದು ಬರೀ ಮೂರು ಘಂಟೆಯ ಕಥೆ ಅಲ್ಲಿ ನಡೆಯುವುದೆಲ್ಲ ಬರೀ ಮನೋರಂಜನೆಗೆ ಎನ್ನುವುದನ್ನು ಅರಿಯದವರ ಹಾಗೆ ಯುವ ಜನತೆ ತಮ್ಮ ಜೀವನಕ್ಕೆ ಕಲ್ಲು ಹಾಕಿಕೊಳ್ಳುವುದನ್ನು ಸಹ ನಾವು ನೋಡುತ್ತೇವೆ.
* ಪ್ರೀತಿ ಎಂದರೇನು?
ಪ್ರೀತಿ ಎಂಬುದು ಜಗಬೆಳಗುವ ಜ್ಯೋತಿಯೇ ಹೊರತು ಜಗ ಸುಡುವ ಬೆಂಕಿಯಲ್ಲ. ಅದಕ್ಕೆ ನಿಷ್ಕಲ್ಮಷವಾದಂಥ ಅರ್ಥವಿದೆ. ಅದಕ್ಕೆ ಒಂದು ಸೀಮಿತ ಪರಿಧಿ ಇಲ್ಲ.
ಆದರೆ ಚಲನಚಿತ್ರಗಳಲ್ಲಿ ಅದನ್ನು ಅಶ್ಲೀಲ ಎನ್ನುವ ಮಟ್ಟದಲ್ಲಿ ಬಿಂಬಿಸುತ್ತಿರುವುದರಿಂದ ಇಂದು ಪ್ರೀತಿ ಎನ್ನುವುದು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುತ್ತಿದೆ. ಪ್ರೀತಿಗೆ ಅನಾರೋಗ್ಯಕರ ಚೌಕಟ್ಟಿನಲ್ಲಿ ಬಂಧಿಸುತ್ತಿರುವುದು ವಿಷಾಧನೀಯ.
ಮಾಧಕತೆ, ಚುಂಬನ, ಅಲಿಂಗನ ಇವು ಪ್ರೀತಿಯನ್ನು ತೋರ್ಪಡಿಸುವ ಬಗೆ ಎನ್ನುವ ಮಟ್ಟದಲ್ಲಿ ಚಿತ್ರೀಕರಿಸಿ ತಪ್ಪು ಸಂದೇಶ ನೀಡುತ್ತಿರುವುದರಿಂದ ಪ್ರೀತಿಯು ತನ್ನ ನಿಜ ಮೌಲ್ಯವನ್ನುಕಳೆದುಕೊಳ್ಳುತ್ತಿದೆ. ಹೀಗಾಗಿ ಚಲನಚಿತ್ರಗಳಲ್ಲಿನ ಪ್ರೀತಿ-ಪ್ರೇಮ ಜೀವನಕ್ಕೆ ಮಾರಕ ಎನ್ನುವಂತಾಗಿ ಬಿಟ್ಟಿದೆ.
* ಕೊನೆಯ ಹನಿ
ತಪ್ಪು ಚಿತ್ರರಂಗದಲ್ಲ. ವೀಕ್ಷಕರೇ ಕಾರಣ. ನಾವು ನೋಡುವದೃಷ್ಟಿಕೋನ, ಕೇವಲ ಪ್ರೀತಿ-ಪ್ರೇಮ ಎಂಬುದನ್ನು ಚಿತ್ರಗಳಲ್ಲಿ ನೋಡಿ ಜೀವನಕ್ಕೆ ಅಳವಡಿಸಿಕೊಳ್ಳಲು ಹವಣಿಸುವ ನಾವುಗಳು, ಮುಂದಾಗುವ ಪರಿಣಾಮದ ಕುರಿತು ವಿಚಾರ ಮಾಡುವುದೇ ಇಲ್ಲ.
ಪ್ರೀತಿಯ ದೃಶ್ಯಗಳಲ್ಲಿನ ಮಾದಕತೆಗೆ ಮನಸೋಲುವ ನಾವುಗಳು ಅದರ ತಾತ್ಪರ್ಯದ ಕುರಿತಾಗಿ ಆಲೋಚನೆ ಮಾಡುವುದಿಲ್ಲ. ಚಲನಚಿತ್ರಗಳನ್ನು ವೀಕ್ಷಿಸಿ ಪ್ರೀತಿಯನ್ನು ಸಂಕುಚಿತ ಅರ್ಥ ಕಲ್ಪಿಸಿಕೊಂಡು ನೋಡುವ ಬದಲು ಅದು ವಿಶ್ವವ್ಯಾಪಿ. ಅದಕ್ಕೆ ಮಹತ್ವದ ಸ್ಥಾನವಿದೆ. ಪ್ರೀತಿಗೂ, ಲೈಂಗಿಕತೆಗೂ ತುಂಬ ವ್ಯತ್ಯಾಸವಿದೆ. ಪ್ರೀತಿ ಎಂಬುದು ದೈಹಿಕ ವಾಂಛೆಯನ್ನು ತೀರಿಸಿಕೊಳ್ಳುವ ಚಟವಲ್ಲ. ಮಾನವ ಮಾನವನಂತೆ ಬಾಳಲು ಕಲಿಸಿಕೊಡುವ ಪಾಠ ಎನ್ನುವುದು ಅರಿಯಬೇಕಾಗಿರುವುದು ಅನಿವಾರ್ಯವಾಗಿದೆ.

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...