Friday, January 27, 2012

ಭಾರತದ ಮೊದಲ ಛಾಯಾಚಿತ್ರ ವರದಿಗಾರ್ತಿ ಹೊಮಾಯಿ

































































ಇತ್ತೀಚಿಗೆ ನಮ್ಮನ್ನಗಲಿದ ಭಾರತದ ಮೊದಲ ಮಹಿಳಾ ಛಾಯಾಚಿತ್ರ ವರದಿಗಾರ್ತಿ ಹೊಮಯಿ ಅವರ ನೆನಪಿನ ಚಿತ್ರಗಳು















Saturday, January 14, 2012

ವಾರೆವ್ಹಾ ನಂದನ್ ....ಕಮಾಲ್ ಕಿಯಾ ತುನೆ







ಎಲ್ಲರಿಗೂ ಬಾರದ ಅದ್ಬುತ ಕಲೆ ಎಂದರೆ ಅದು ಛಾಯಾ ಚಿತ್ರ ಸುಂದರವಾದ ಫೋಟೋ ಕ್ಲಿಕ್ಕಿಸಿದ ನಂದನವರಿಗೆ ತುಂಬಾ ಧನ್ಯವಾದ

Wednesday, January 11, 2012

ಅವರ ಆಕ್ರಂದನಕ್ಕೆ ಕಿವಿ ಮುಚ್ಚಿಕೊಂದಿದ್ದೇಕೆ ?

ಒಂದು ಹೆಣ್ಣು ಮಧ್ಯರಾತ್ರಿ ಒಬ್ಬಳೇ ರಸ್ತೆಯಲ್ಲಿ ನಿಭರ್ೀತವಾಗಿ ಯಾವಾಗ ಒಡಾಡುತ್ತಾಳೋ ಅಂದೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಹಾಗೆ. ಎಂದು ಮಹಾತ್ಮಾ ಗಾಂಧಿ ಹೇಳಿದರು. ಆದರೆ ಪುರುಷ ಪ್ರಧಾನವಾದ ಸಮಾಜದಲ್ಲಿ ಸ್ತ್ರೀಯರ ಮೇಲೆ ನಡೆಯುತ್ತಿರುವ ಅಮಾನವಿಯ ಕೃತ್ಯಗಳನ್ನು ನೋಡಿದರೆ ನಮ್ಮ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಯಾವತ್ತು ಬರುವುದಿಲ್ಲ ಎನಿಸುತ್ತದೆ. ಯತ್ರ ನಾರ್ಯಸ್ಥು ಪುಜ್ಯಂತೆ ರಮಂತೆ ತತ್ರ ದೇವತಃ ಎನ್ನುವ ಉಕ್ತಿಯನ್ನು ಪದೆ ಪದೆ ಪಠಿಸುತ್ತೇವೆ. ಆದರೆ ಹೆಜ್ಜೆ ಹೆಜ್ಜೆಗೆ ಹೆಣ್ಣಿನ ಮೇಲೆ ದೌರ್ಜನ್ಯ ಎಸಗುತ್ತೇವೆ. ಈ ದೌರ್ಜನ್ಯಗಳ ಪಟ್ಟಿ ಅಂದಿನಿಂದ ಇಂದಿನ ವರೆಗೂ ಹಾಗೆ ಮುಂದುವರೆದುಕೊಂಡು ಬೆಳೆಯುತ್ತಲೇ ಹೋಗುತ್ತಿದೆ. ಈ ದೌರ್ಜನ್ಯಗಳ ಪಟ್ಟಿಯಲ್ಲಿ ಹೊಸದಾಗಿ ಸೇರಿರುವ ಅಮಾನುಷ ಕೃತ್ಯವೇ ಧಾರವಾಡದ ಹೊರವಲಯದಲ್ಲಿರುವ ರಾಯಾಪುರದ ಭಿಕ್ಷುಕರ ಪುರ್ವಸತಿ ಕೇಂದ್ರದಲ್ಲಿ ಅಸಾಹಯಕ ಭಿಕ್ಷುಕಿಯರ ಮೇಲೆ ನಡೆದಿರುವ ಹಾಗೂ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅಧಿಕಾರಿಗಳ ಅಟ್ಟಹಾಸ. ಭವಿಷ್ಯದ ಕೂರಿತು ಯಾವುದೇ ಸ್ಪಷ್ಟವಾದ ಗುರಿ ಇಲ್ಲದೇ, ಕನಸುಗಳಿಲ್ಲದೇ ಕಣ್ಣುಗಳಿಂದ ಒಂದು ಹೊತ್ತಿನ ತುತ್ತಿಗಾಗಿ ನೀರಿಕ್ಷಸಿಸುವ, ಕೈಹಿಡಿದು ನಡೆಸುವ ಯಾವುದೇ ಊರುಗೋಲಿಲ್ಲದೇ ಉದರ ಪೋಷಣೆಗೆ ಬೇರೆ ದಾರಿ ಕಾಣದೇ ಭಕ್ಷಾಟನೆ ಮಾಡುತ್ತ ಸಮಾಜದಿಂದ ತಿರಸ್ಕಾರಕ್ಕೆ ಒಳಗಾದ ಅಸಾಹಯಕ ಗುಂಪೆ ಇದೆ. ಇದನ್ನು ಎಲ್ಲ ಇದ್ದು ಏನು ಇಲ್ಲದವರಂತಿರುವ ನಾವುಗಳು ಭಿಕ್ಷುಕರು ಎಂದು ಕರೆಯುತ್ತೇವೆ. ನಿತ್ಯ ಭಿಕ್ಷಾಟನೆಯೇ ಇವರ ಕಾಯಕ. ಯಾರೋ ಕೊಡುವ ಒಂದೋ ಎರಡೋ ರುಪಾಯಿಗಳನ್ನು ತೆಗೆದುಕೊಂಡು, ತಂಗಳು ಪಂಗಳು ತಿಂದುಕೊಂಡು ಹೇಗೋ ಬದುಕಿನ ಚಕ್ಕಡಿ ಮುನ್ನಡೆಸುತ್ತ ಬದುಕುತ್ತಿದ್ದರು. ಭಿಕ್ಷಾಟನೆ ಮಾಡುವುದು ಕಾನೂನು ಬಾಹಿರ ಅದೊಂದು ಅಪರಾಧ ಎಂದು ಸಕರ್ಾರ ಇವರ ಜೀವಕ್ಕೆ ದಾರಿ ತೋರಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯ ರಾಯಾಪುರದಲ್ಲಿ ಭಿಕ್ಷಕರ ಪುನರ್ವಸತಿ ಕೇಂದ್ರವನ್ನು ಆರಂಭಿಸಿತು. ತಮಗಿಷ್ಟ ಬಂದ ಕಡೆ ಹೋಗಿ ಹೊಟ್ಟೆ ಹೊರೆಯುತ್ತಿದ್ದ ಭಿಕ್ಷುಕರನ್ನು ತಂದು ಕಾರಾಗ್ರಹ ರೂಪಿ ಪುನರ್ವಸತಿ ಕೇಂದ್ರಕ್ಕೆ ಸೇರಿಲಾಯಿತು. ಅಲ್ಲಿಯವರೆಗೂ ಬದುಕಿನ ಬಗ್ಗೆ ಬರವಸೆಯೂ ಇಲ್ಲ ಭಿಕ್ಷಕರಿಗೆ ಎಲ್ಲೋ ಮನದ ಮೂಲೆಯಲ್ಲಿ ನಮ್ಮನ್ನು ಸಹ ಬಚ್ಚಲು ಕತ್ತಲಿನಿಂದ ಬಯಲು ಬೆಳಕಿನೆಡೆಗೆ ಕೈ ಹಿಡಿದು ನಡೆಸಲು ಯಾವುದೋ ಕೈ ಸಹಾಯ ಸಿಕ್ಕಿತು ಎನ್ನುವ ನಮ್ಮದಿ ಕಂಡುಕೊಂಡರು. ಆದರೆ ಇಲ್ಲಿ ಮುಂದೆ ನಡೆದ ಕರ್ಮಕಾಂಡವನ್ನು ನೋಡಿದರೆ ಇಡೀ ಮನುಕುಲವೇ ತಲೆ ತಗ್ಗಿಸುವ ಹೇಯ ಕೃತ್ಯ, ಇಡೀ ಗಂಡುಜಾತಿಯೇ ಅಸಹ್ಯ ಪಟ್ಟುಕೊಳ್ಳುವಷ್ಟು ನೀಚಕೃತ್ಯಗಳು ನಡೆದಿವೆ. ಮನೆಯ ಮುಂದೆ ಭಿಕ್ಷೆ ಬೇಡಲು ಬಂದರೆ ಭಿಕ್ಷುಕಿಯರನ್ನು ನೋಡಿ ಅವಮಾನ ಪಟ್ಟುಕೊಳ್ಳುತ್ತೇವೆ. ಅವರು ನಮ್ಮ ಹಾಗೇ ಮನುಷ್ಯರು ಎಂಬುದನ್ನು ಸಹ ಮರೆತು ಅವರನ್ನು ಸ್ಪಶರ್ೀಸಲು ಹಿಂಜರಿಯುತ್ತೇವೆ. ಇಂತಹ ಮಹಾನ್ ಮಡಿವಂತರೆ ಇಂದು ಈ ಭಿಕ್ಷಕಿಯರ ಪಾಲಿಗೆ ಕಂಟಕವಾಗಿ ಮಾರ್ಪಟ್ಟಿದ್ದು ನಿಜಕ್ಕೂ ಪರಮ ಪಾಥಕವೇ ಸರಿ. ಬದುಕು ಕಲ್ಪಿಸುವ ಭರೆವಸೆ ನೀಡಿ ಪುನರ್ವಸತಿ ಕೇಂದ್ರಕ್ಕೆ ಕರೆದುಕೊಂಡು ಬಂದು ಭಿಕ್ಷಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಇಲ್ಲಿನ ಅಧಿಕಾರಿಗಳು ನಿಜಕ್ಕು ಅಟ್ಟಹಾಸ ಮೆರೆದಿದ್ದಾರೆ. ಇಷ್ಟುದಿನ ಕೇವಲ ಹಳ್ಳಿಗಳಲ್ಲಿ, ಪಟ್ಟಣದ ನಿರ್ಜನ ರಸ್ತಗಳಲ್ಲಿ ನಡೆಯುತ್ತಿದ್ದ ದೌರ್ಜನ್ಯ ಈಗ ಸುಶಿಕ್ಷಿತರ ಸೋಗಿನಲ್ಲಿನ ಅಧಿಕಾರಿಗಳ ಸಮ್ಮುಖದಲ್ಲಿಯೂ ನಡೆಯುತ್ತದೆ ಎಂದರೆ ನಮ್ಮಲ್ಲಿನ ವ್ಯವಸ್ಥೆ ಎಲ್ಲಿಗೆ ಬಂದು ತಲುಪಿದೆ ಎಂದು ತಿಳಿಯುತ್ತದೆ. ಭಿಕ್ಷುಕಿಯರನ್ನು ತಮ್ಮ ಅಶ್ಲೀಲ ಚಟುವಟಿಕೆಗಳಿಗೆ ಬಳಸಿಕೊಂಡು ನಂತರದಲ್ಲಿ ಅವರಿಗೇ ತಿಳಿಯದಂತೆ ಗರ್ಭಪಾತ ಮಾಡಿಸುತ್ತಿರುವುದನ್ನು ನೋಡಿದರೆ ಬೇಲಿಯೇ ಎದ್ದು ಹೊಲ ಮೇದಂತೆ ಎನ್ನುವ ಗಾದೆ ಮಾತನ್ನು ಇವರನ್ನೇ ನೋಡಿ ಸೃಷ್ಠಿಸಿದ್ದಾರೇನೋ ಎನ್ನಿಸುತ್ತಿದೆ. ಈ ವಿಷಯವನ್ನು ಕುರಿತು ಅನ್ಯಾಯಕ್ಕೊಳಗಾದ ಸ್ತ್ರೀಯರನ್ನು ಕೇಳಿದರೆ ಅವರು ಹೇಳುವಂತ ಉತ್ತರ, ಮಾತಿನಲ್ಲಿರುವಂತ ಮುಗ್ದತೆ, ಅನ್ಯಾಯಕ್ಕೆ ಸಿಕ್ಕು ನಲುಗುತ್ತಿರುವ ಅವರ ಧ್ವನಿ, ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ತಿಳಿತದಂತ ಅವರ ಅಮಾಯಕತೆಯನ್ನು ನೋಡಿದರೆ ಎಂತವರಿಗೂ ಕಣ್ಣಿರು ಬರುತ್ತದೆ. ಪುನರ್ ವಸತಿ ಕೇಂದ್ರವೆಂದರೆ ಅದು ನೊಂದ ಜೀವಗಳಿಗೆ, ಅಸಹಾಯಕರಿಗೆ ನೆಮ್ಮದಿಕೊಡುವ ಆಸ್ರಯ ಥಾಣ. ಇದನ್ನೇ ಅವಕಾಶವಾಗಿ ಬಳಸಿಕೊಂಡ ಅಧಿಕಾರಿಗಳು ಇಲ್ಲಿನ ಸ್ತ್ರೀಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದು ತಡವಾಗಿಯಾದರು ಬೇಳಕಿಗೆ ಬಂದಿದೆ. ಇಲ್ಲಿನ ವೈದ್ಯರು ಹೇಳುವಂತೆ ದಿನಾಲೂ ಇವರ ಆರೋಗ್ಯ ತಪಾಸಣೆ ಮಾಡುತ್ತೇವೆ ಆದರೆ ಇವರಲ್ಲಿ ಇಂತಹ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎನ್ನುತ್ತಾರೆ. ಇದರಿಂದ ಈ ಪುನರ್ವಸತಿ ಕೇಂದ್ರದಲ್ಲಿ ಯಾವ ಮಟ್ಟದಲ್ಲಿ ಅವ್ಯವಸ್ತೆ ಇದೆ ಮತ್ತು ಇದರಲ್ಲಿ ಇವರು ಶಾಮೀಲಾಗಿ ನಡೆಸಿರುವ ವ್ಯವಸ್ಥಿತ ಜಾಲ ಎಂಬುದು ಎಂತವರಿಗೂ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೂ ಇವರ ಮೇಲೆ ಕ್ರಮ ಕೈಗೊಳ್ಳುವಂತ ಕಾರ್ಯ ಇನ್ನು ನಡೆದಿಲ್ಲ. ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನ ಭಿಕ್ಷುಕ ಕೇಂದ್ರದಲ್ಲಿ ಹಲವು ಜನ ಭಿಕ್ಷುಕರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಇನ್ನೂ ಹಸಿ ಹಸಿಯಾಗೇ ಇರುವಾಗಲೇ ಇಂತ ದೌರ್ಜನ್ಯದ ಆಕ್ರಂದನ ಕೇಳಿ ಬಂದಿರುವುದು ವಿಪಯರ್ಾಸವೇ ಸರಿ. ಕಾನೂನು ಪ್ರಕಾರ ಭಿಕ್ಷಾಟನೆ ಎಂಬುದು ಅಪರಾಧ ನಿಜ ಹಾಗೆಂದು ಈ ಪುನರ್ವಸತಿ ಕೆಂದ್ರದ ಹೆಸರಲ್ಲಿ ಶಕ್ಷೆ ನೀಡುತ್ತಿದ್ದಾರೋ ರಣೋ ಎನ್ನುವ ಅನುಮಾನ ಸಾಮಾನ್ಯರಲ್ಲಿ ಕಾಡುತ್ತಿದೆ.ಇದರಿಂದಾಗಿ ಸಕರ್ಾರ ಹಾಕಿಕೊಳ್ಳುವ ಯೋಜನೆಗಳು ವಿಫಲವಾದವುಗಳೇ, ಇಂತಹ ಯೋಜನೆ ಹಾಕಿಕೊಳ್ಳುವ ಬದಲು ಸುಮ್ಮನಿದ್ದರೆ ದೌರ್ಜನ್ಯಗಳಾದರು ಕಡಿಮೆಯಾಗುತ್ತವೇ ಎಣೋ ಎನಿಸುತ್ತದೆ. ಆದರೆ ನಮ್ಮ ಸಮಾಜ ಮತ್ತು ನಮ್ಮ ಜನಗಳ ಮೇಲೆ ನನಗೇ ಅಸಹ್ಯ ಹುಟ್ಟಿಸುತ್ತಿದೆ. ಕಾರಣ ಇಡೀ ಮಾನವೀಯ ಸಮಾಜವೇ ತಲೆ ತಗ್ಗಿಸುವಂತ ಕೃತ್ಯ ಧಾರವಾಡಲ್ಲಿ ಜರುಗಿದ್ದರು ಸಹ ಯಾವುದೇ ಸಂಘಟನೆಯಾಗಲಿ, ಮಹಿಳಾ ಹೋರಾಟಗಾರರೆಂಬ ಬಾಡಿಗೆ ಪಡೆಗಳಾಗಲಿ, ಈ ಕೃತ್ಯವನ್ನು ವಿರೋಧಿಸಿ ಒಂದು ಸಣ್ಣ ಪ್ರತಿಭಟನೆ ಅದೂ ಬೇಡ ವಿರೋಧಿಸುವ ಮಾತನ್ನು ಕೋಡ ಆಡದಿರುವುದು ನಿಜಕ್ಕೂ ಖೆಧಕರ. ಯಾಕೆ ಆಸ್ತ್ರಿಯರ ಆಕ್ರಂದನ ಕೇಳಿಸಲಿಲ್ಲವೇ? ಕೇಳಿಯೂ ಕಿವಿ ಮುಚ್ಚಿದ್ದೇಕೆ? ಯಾವುದೋ ಚಿತ್ರ ನಟಿ ಚಿಲ್ಲರೆ ಪ್ರಚಾರಕ್ಕಾಗಿ ಸ್ವಯಂ ಪ್ರೇರಿತಳಾಗಿ ಬಟ್ಟೆ ಬಿಚ್ಚಿದರೆ ಅದನ್ನೇ ದೊಡ್ಡ ಸುದ್ದಿ ಮಾಡಿ ದಿನದ 24 ಗಂಟೆಗಳು ತೋರಿಸುವ ಮಾಧ್ಯಮದ ಕಣ್ಣಿಗೆ ಅನ್ಯಾಯಕ್ಕೆ ಒಳಗಾದ ಈ ಸ್ತ್ರೀಯರ ಮೂಕವೇದನೆ ಕೇಳಿಸಲಿಲ್ಲವೇ?. ಯಾವುದೋ ಹೆಣ್ಣು ತನಗನ್ಯಾಯ ಆಗಿದೆ ಎಂದು ಹೇಳುವುದಕ್ಕೂ ಮೊದಲು ಬಂಡಾಯದ ಬಾವುಟ ಹಾರಿಸುವ ಮಹಿಳಾ ಪರ ಸಂಘಟನೆಗಳಿಗೆ ಈವರು ಮಹಿಳೆಯರೆಂದು ಕಾಣಿಸಲಿಲ್ಲವೇ? ಅಥವಾ, ಇವರು ಹೋರಾಟ ಮಾಡುವುದು ಕೇವಲ ಸಮಾಜದ ಮೇಲ್ಸ್ಥರದಲ್ಲಿರುವವರ ಪರವಾಗಿ ಮಾತ್ರವೇ? ಬಿಟ್ಟಿ ಪ್ರಚಾರ ಗಿಟ್ಟಿಸುವುದಕ್ಕೆ ಇದು ಒಳ್ಳೆ ವಿಷಯವಲ್ಲ ಎಂಬ ಕಾರಣಕ್ಕೋ? ಇಲ್ಲಾ ಇಂತ ಸ್ತ್ರೀಯರ ಮೇಲೆ ದೌರ್ಜನ್ಯ ಎಸಗಿದವರು ಯಾವುದೇ ಎಂ.ಎಲ್.ಎ ಅಥವಾ ಎಂ.ಪಿಗಳಾಗಲಿ ಅಲ್ಲ ಎಂಬುದಕ್ಕೋ? ದೊಡ್ಡ ಸ್ಥಾನದಲ್ಲಿರುವವರು ಮಾಡಿದರೆ ಮಾತ್ರ ತಪ್ಪೇ? ಸಣ್ಣ ಅಧಿಕಾರಿಗಳು ಮಾಡಿದ ತಪ್ಪುಗಳ ಬಗ್ಗೆ ನಾವ್ಯಾಕೆ ತಲೆರ ಕೆಡಿಸಿಕೊಳ್ಳಬೇಕು ಅನ್ನುವ ಅಸಡ್ಡೆ ಇಂದಲೋ? ತಿಳಿಯುತ್ತಿಲ್ಲ. ಸಿನಿಮಾ ನಾಯಕಿಯರು ಸ್ವಯಂ ಪ್ರೇರಿತರಾಗಿ ಬಟ್ಟೆ ಬಿಚ್ಚುವುದು ಲಾಭಕ್ಕಾಗಿ.ಅಂತವರ ಕುರಿತು ಹೋರಾಟ ಮಾಡುವ ನಾವುಗಳು, ತಪ್ಪೇ ಮಾಡದ ಬದುಕುವುದೇ ದುಸ್ಥರವಾದ ಭಿಕ್ಷುಕಿಯರ ಮೇಲೆ ಅತ್ಯಾಚರ ಎಸಗಿದವರ ವಿರುದ್ಧ ಸಣ್ಣ ಚಿತ್ಕಾರವೆತ್ತದಿರುವುದು ನಮ್ಮಮೇಲೆ ನಮಗೆ ಅಸಹ್ಯ ಉಂಟು ಮಾಡುತ್ತಿದೆ. ಮೊದಲೇ ಸಮಾಜದಿಂದ ತಿರಸ್ಕಾರದ ಅನ್ಯಾಯಕ್ಕೆ ಒಳಗಾದ ಭಕ್ಷಕಿಯರ ಮೇಲೆ ನಡೆದ ಅಧಿಕಾರಿಗಳ ದೌರ್ಜನ್ಯವನ್ನು ಪ್ರಶ್ನಿಸದೇ ಮತ್ತೊಂದು ರೀತಿಯಲ್ಲಿ ಅನ್ಯಾಯ ಎಸಗುತ್ತಿದ್ದೇವೆ. ಇನ್ನಾದರು ಕಣ್ತೆರೆದು ನೊಂದ ಕಣ್ಣುಗಳ ನೀರು ಒರೆಸುವ ಕಾರ್ಯ ಮಾಡೋಣ. ಅನ್ಯಾಯ ಮಾಡಿದವರ ಮೇಲೆ ತನಿಖೆ ನಡೆದು ನೊಂದ ಸ್ತ್ರೀಯರಿಗೆ ನ್ಯಾಯ ದೊರಕಿಸಿ ಕೊಡದೇ ಹೋದರೆ ಇಂದು ನಡೆದ ಅನ್ಯಾಯದ ಕರ್ಮಕಾಂಡ ಮುಂದೊಂದು ದಿನ ನಡೆಯ ಬೇಕಾದ ಹೊಸ ಅನ್ಯಾಯಕ್ಕೆ ಮುನ್ನುಡಿ ಬರೆದಂತಾಗಿ ಬಿಡುತ್ತದೆ. ಸಮಾಜ ಎಲ್ಲ ಜನರು ಇದನ್ನು ಧಿಕ್ಕರಿಸಿ ನ್ಯಾಯಕ್ಕಾಗಿ ಹೋರಾಡೋಣ. ಆವಾಗಲಾದರು ನಮ್ಮ ದೇಶದಲ್ಲಿ ಸ್ತ್ರೀಯರಿಗೆ ನಾವೇ ರಕ್ಷಣೆ ಕೊಡಲು ಮುಂದಾಗೋಣ.

ಮಂಜುನಾಥ.ಮ.ಜುನಗೊಂಡ

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...