ಮರೆಯಲಾಗದ ಆ ಮಳೆ ಮತ್ತೆ ಕಾಡುತಿದೆ ಗೆಳತಿ
ಡಿಯರ್ ಸೋನು,
ಮೊದಲು ಮಳೆ ಬಂದಿತೆಂದರೆ ಸಾಕು ನನ್ನ ಕೋಪಕ್ಕೆ ಮಿತಿ ಇಲ್ಲದ ಹಾಗಾಗುತ್ತಿತ್ತು. ಆ ಕಿಚಿ ಪಿಚಿ ಕೆಸರಲಿ ಕಾಲಿಟ್ಟಗಲಂತು ಆ ದೇವರನ್ನು ಎಷ್ಟು ಸೆಪಿಸುತ್ತದ್ದೇನೋ ಅದೇ ದೇವರಿಗೇ ಗೊತ್ತು. ಹಾಗಿತ್ತು ಮಳೆಯ ಮೇಲೆ ನನ್ನ ಮುನಿಸು. ಒಟ್ಟಿನಲ್ಲಿ ನಾನೊಬ್ಬ ಮಳೆಯ ವಿರೋಧಿಯಾಗಿದ್ದೆ. ಯಾಕಾದರು ಈ ಹಾಳು ಮಳೆ ಹಿಡಿದುಕೊಳ್ಳುತ್ತದೆಯೋ ಎಂದುಕೊಳ್ಳುತ್ತಿದ್ದ ಮನಸು ಇಂದು ಮೊದಲ ಮುಂಗಾರು ಮಳೆಯನ್ನು ಕಾಯುತ್ತಿದೆ. ಅದರಲ್ಲೂ ಜಿಡಿ...ಜಿಡಿ....ಮಳೆಯಲ್ಲಿ ನೆನೆಯಬೇಕೆಂಬ ಆಶೆ ಹೆಚ್ಚುತ್ತಿದೆ. ಮನೆ ಬಿಟ್ಟು ಹೊರಗೆ ಬಾ ಎಂದು ಸ್ವಾಗತ ಕೋರುವ ಆ ಮಣ್ಣಿನ ಕಮಟು ವಾಸನೆ ನೆನಯುತ್ತಿದ್ದರೆ, ನನ್ನ ಮನದ ಭಾವನೆಯ ಭೂಮಿಯಲಿ ಕಲ್ಪನೆಯ ಬಳಿಯಲ್ಲಿ ನೆನಪಿನ ಹೂ ಅರಳುತ್ತದೆ.
ಮೊದಲ ಮುಂಗಾರು ಮಳೆ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿಯೂ ಕಳೆದ ಮುಂಗಾರು ಮಳೆಯ ಝಲಕ್ನ್ನು ಮತ್ತೆ ಮತ್ತೆ ತೋರಿಸುತ್ತಿದೆ. ಅಂದು ಬಂದ ಮಳೆ ಭೂತಾಯಿಗೆ ಅಮೃತ ಸಿಂಚನ ನೀಡುತ್ತಿತ್ತು. ಹನಿಗೂಡುತ್ತಿದ್ದ....ಮಳೆ, ಕಡಿದಾದ ದಾರಿ ದಾರಿಯ ಮೇಲೆ ಒಬ್ಬರು ಮಾತ್ರ ಸಂಚಿರಿಸಿವಷ್ಟು ಇಕ್ಕಟ್ಟು ಇಂತಹ ಸಮಯದಲ್ಲಿಯೇ ಹೀಲ್ಟ್ಸನ ಶಬ್ದ ಮಾಡುತ್ತ ಹೆಜ್ಜೆ ಹಾಕುತ್ತ ಸಾಗೂತ್ತಿದ್ದ ನನ್ನ ಮೌನದೇವತೆ ಮತ್ತೆ ಮತ್ತೆ ಮನದಲ್ಲಿ ಪ್ರತ್ಯಕ್ಷಳಾಗುತ್ತಾಳೆ. ಅಂದು ನಿನ್ನ ಜೊತೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಆ ಸಮಯದಲ್ಲಿ ನನ್ನ ಮನದ ಮುಗಿಲಲ್ಲಿ ಭಾವನೆಯ ಮೋಡಗಳು ಕಟ್ಟಿಕೊಂಡು ಪ್ರೀತಿಯ ಧಾರೆಯಾಗೆ ಧರೆಗಿಲಿಯಲು ಕಾಯುತ್ತಿದ್ದವು.
ಆದರೆ ಸಿಕ್ಕಿದ್ದೆ ಛಾನ್ಸ್ ಎನ್ನುವಂತೆ ಮಳೆಯ ಹನಿಗಳು ಬಂದುನನ್ನವಳ ಮುಖಕ್ಕೆ ಮುತ್ತಿಕ್ಕುತ್ತಿದ್ದರೆ ಆ ಹನಿಗಳ ಮೇಲೆ ಮತ್ಸರದ ಭಾವನೆ ಉಂಟಾಗುತ್ತಿತ್ತು. ಶ್ವೇತ ವರ್ಣದ ವಸ್ತ್ರದಲ್ಲಿ ಥೇಟ್ ಅಪ್ಸರೆಯ ಪ್ರತಿರುಪವಾಗಿ ಕಾಣುತ್ತಿದ್ದ ನನ್ನವಳ ರೇಷ್ಮೆಯಂತಹ ಕೇಶರಾಸಿ ಮತ್ತಷ್ಟು ನೆನಯದಿರಲೆಂದು ಅವಳ ದುಪ್ಪಟ್ಟಾವನ್ನು ತಲೆಗೆ ಹೊದಿಸಿದಾಗ ಅವಳು ಕೊಟ್ಟ ಆ ಒಂದು ಪ್ರೀತಿಯ ನಗು ಅಲ್ಲಿಯವರೆಗೂ ಕಾದಿದ್ದ ಭಾವನೆಯ ಮೋಡಗಳು ಹನಿಗಳಾಗಿ ಪರಿವತರ್ಿತಗೊಂಡವು. ಮತ್ತೆ ಅವಳೋಟ್ಟಗಿನ ನಡಿಗೆ ಏಳೇ ಏಳು ಜನ್ಮದಲ್ಲೂ ನಾನು ನಿನ್ನ ಜೊತೆಗೆ ಹೆಜ್ಜೆ ಹಾಕುವೆ ಎನ್ನುವಂತ ಸ್ಪಷ್ಟ ಸಂದೇಶದಂತೆ ತೋರುತ್ತಿತ್ತು. ಇದೆಲ್ಲವನ್ನು ಗಮನಿಸುತ್ತಿದ್ದ ಮೇಗರಾಜನಿಗೆ ಖುಷಿ ಹೆಚ್ಚಾಗಿ ಕುಣಿದಾಡತೊಡಗಿದನು. ನಾನು ನೆನೆಯದಿರಲೆಂದು ನೀ ಹೊದಿಸಿದ ದುಪ್ಪಟ್ಟಾ ನಮ್ಮಿಬ್ಬರ ಪ್ರೀತಿಗೆ ಸಾಕ್ಷಿಯಾಗಿತ್ತು. ನನ್ನ ಕೈಹಿಡಿದು ನೀನು ನಡೆಯುತ್ತದ್ದರೆ ಮೇಘರಾಜ ನಿನ್ನ ದಾರಿಯನ್ನು ಹಸನಾಗಿಸಲು ಕಷ್ಟ ಪಡುತ್ತಿದ್ದಾನೇನೊ ಎನ್ನಿಸುತ್ತಿತ್ತು.
ನಿಜಾ ಸೋನು ನನಗೀಗಲು ಮರೆಯಲಾಗದ ಆ ಮಳೆಯನ್ನು ನೆನಸಿಕೊಂಡರೆ ಸಾಕು ಏನೋ ರೋಮಂಚನವಾಗುತ್ತದೆ. ಮಳೆಯಲಿ ಜೊತೆಯಲಿ, ನೆನೆಯುತ ಸಾಗಲಿ ಎಂದು ಹಾಡುವುದಕ್ಕೆ ಮನಸು ಆರಂಭಿಸುತ್ತದೆ. ಅಂದು ಮಳೆ ಸೃಷ್ಟಸಿದ ಸಂದರ್ಭ ಇಂದು ನನ್ನ ಜೀವನದ ಆಟೋಗ್ರಾಫ ಪುಸ್ತಕದಲ್ಲಿ ಮರೆಯದಂತ ಪುಟವಾಗಿಬಿಟ್ಟಿದೆ. ಅಂದು ಆ ಮಳೇ ಬಾರದೇ ಇದ್ದಿದ್ದರೆ ನಾವಿಂದು ಇಷ್ಟು ಆತ್ಮಿಯರಾಗಿರಲು ಆಗುತ್ತಿರಲಿಲ್ಲ ಅನಿಸುತ್ತದೆ.
ಮತ್ತೇ ಮುಂಗಾರಾ ನಮಗಾಗಿ ಕದಿದೆ. ಕಳೆದ ಕ್ಷಣಗಳು ಮತ್ತೆ ಮತ್ತೆ ಕಾಡುತಿವೆ. ಬರುವ ಮುಂಗಾರಿನಲಿ ಮತ್ತೆ ಒಂದಾಗೋಣ ಪ್ರತಿ ಮುಂಗಾರು ಮಳೆಯನ್ನು ಜೊತೆಯಾಗಿಯೇ ಆಸ್ವಾಧಿಸೋಣ ಎನ್ನುವ ಬಯಕೆ ಆಡುತಿದೆ ಸೋನು ಕಾಯ್ತಾ ಇರ್ತಿನಿ ಪ್ಲೀ........ಸ್ ಬೇಗ ಬರ್ತಿಯಾ ತಾನೇ..........?
ಇಂತಿ ನಿನ್ನ ನೆನಪಿನ ದೋಣಿಯ ನಾವಿಕ