Friday, June 23, 2017

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್ಯಕ್ತಿಯಾಗಿ ಆ ದೇಶಕ್ಕೆ ಹೋದ ಆತ ಕೆಲವೇ ವರ್ಷಗಳಲ್ಲಿ ನೊಂದವರ ಪಾಲಿನ ಶಕ್ತಿಯಾಗಿ, ಸೋತವರಿಗೆ ಆಶಾ ಕಿರಣವಾಗಿ, ತುಳಿತಕ್ಕೊಳಗಾದವರಿಗೆ ಸಾಂತ್ವನದ ಪ್ರತೀಕವಾಗಿ, ಅನ್ಯಾಯ ಅನುಭವಿಸಿದವರ ಪಾಲಿಗೆ ಭರವಸೆಯ ಬೆಳಕಾಗಿ ಪರಿವತರ್ಿತನಾದ. ಚರ್ಮದ ವರ್ಣದ ಮೇಲೆ ವ್ಯಕ್ತಿತ್ವ ಅಳೆಯುವ ಹೇಯ ಮನಸ್ಸುಗಳಿಗೆ ಸಿಂಹಸ್ವಪ್ನವಾಗಿ ಕಾಡಿದ. ಶಸ್ತ್ರಾಸ್ತ್ರಗಳನ್ನು ಮುಟ್ಟದೆ ಮಾತಿನ ಅಸ್ತ್ರಗಳಿಂದ ಹೋರಾಟಕ್ಕೀಳಿದ. ಹೋರಾಟದ ಹಾದಿಯಲ್ಲಿ ಹೊಸ ತಂತ್ರಗಳನ್ನು ರೂಪಿಸಿಕೊಂಡು ಹೋರಾಟಕ್ಕೆ ಹೊಸ ಭಾಷ್ಯಬರೆದು ಯಶಸ್ವಿಯಾದ. ದಕ್ಷಿಣಾಫ್ರಿಕಾದಂತ ನೆಲದಲ್ಲಿ ಭಾರತೀಯನೊಬ್ಬನಲ್ಲಿ ಅಡಗಿದ ಗಟ್ಟಿತನವನ್ನು ಪ್ರದಶರ್ಿಸಿ ವರ್ಣಬೇಧ ನೀತಿಗೆ ತಿಲಾಂಜಲಿ ಹಾಡುವುದಕ್ಕೆ ಮುನ್ನುಡಿ ಬರೆದ. ನ್ಯಾಯವಾದಿಯಾಗಿ ಆಫ್ರಿಕಾಕ್ಕೆ ಹೋದವನು ಹೋರಾಟಗಾರನಾಗಿ ಭಾರತಕ್ಕೆ ಹಿಂತಿರುಗಿದ. ಮಾನವನ ಹಕ್ಕುಗಳಿಗಾಗಿ ಹೋರಾಡಿದ ಆ ಮಹಾನ್ ವ್ಯಕ್ತಿಯೇ ಮಹಾತ್ಮಾ ಗಾಂಧೀಜಿ. ಅತ್ತ ಗಾಂಧೀಜಿ ಆಫ್ರೀಕಾದಲ್ಲಿ ವರ್ಣಬೇಧ ನೀತಿಯ ವಿರುದ್ಧ ಸಮರ ಸಾರಿದಂತ ಸಂದರ್ಭದಲ್ಲಿ ಇತ್ತ ಭಾರತ ದೇಶಕ್ಕೆ ದೇಶವೇ ಬ್ರೀಟಿಷರ ವಿರುದ್ಧ ಸಮರ ಸಾರಿ ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕಿಳಿದಿತ್ತು. 1885 ರಲ್ಲಿ ಸ್ಥಾಪಿತವಾಗಿದ್ದ ರಾಷ್ಟ್ರೀಯ ಕಾಂಗ್ರೆಸ್ನ ಸದಸ್ಯರಾಗಿ ಉಗ್ರಗಾಮಿಗಳು, ಮಂದಗಾಮಿಗಳು ಪರಸ್ಪರ ತಮ್ಮಲ್ಲಿಯೇ ಭಿನ್ನಾಭಿಪ್ರಾಯಗಳನ್ನು ಕಕ್ಕುತ್ತ ದೇಶಕ್ಕಾಗಿ ಹೋರಾಟ ಮಾಡುತ್ತಿದ್ದ ಕಾಲವದು. ಅದಾಗಲೇ 1857 ರ ಮಹಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರೀಟೀಷರಿಗೆ ಮನವರಿಕೆಯಾಗಿತ್ತು. ಒಂದಲ್ಲ ಒಂದು ದಿನ ಭಾರತೀಯರೆಲ್ಲ ತಮ್ಮ ವಿರುದ್ಧ ತಿರುಗಿ ಬೀಳುತ್ತಾರೆ. ಸುನಾಮಿಯಂತೆ ಏಳುವ ಆ ಅಲೆಯಲ್ಲಿ ಬ್ರಿಟೀಷ ಸಾಮ್ರಾಜ್ಯ ಕೊಚ್ಚಿ ಹೋಗುತ್ತದೆ ಎಂಬುದರ ಅರಿವಾಗಿತ್ತು. ಆವತ್ತಿನ ಎಲ್ಲ ಸಂದರ್ಭಗಳನ್ನೋಮ್ಮೆ ಅವಲೋಕಿಸಿ ನೋಡಿದಾಗ ಅದಕ್ಕೆ ಮುನ್ನುಡಿ ಬರೆಯುವುದಕ್ಕಾಗಿಯೇ ಆಫ್ರೀಕಾದಿಂದ ಮಹಾತ್ಮಾಜಿಯವರು ಬಂದಂತೆ ಭಾಸವಾಗುತ್ತದೆ. ಭಾರತೀಯರಲ್ಲಿ ಅದಾಗಲೇ ಹೋರಾಟದ ಮನೋಭೂಮಿಕೆ ನಿಮರ್ಾಣವಾಗಿತ್ತು. ಆದರೆ ನಾಯಕತ್ವದ ಕೊರತೆ ಎದ್ದು ಕಾಣುತ್ತಿತ್ತು. ರಾಷ್ಟ್ರೀಯ ಕಾಂಗ್ರೇಸ್ನಲ್ಲಿಯೇ ಇದ್ದ ಉಗ್ರಗಾಮಿಗಾಮಿಗಳು ಹಾಗೂ ಮಂದಗಾಮಿಗಳಲ್ಲಿ ಯಾರ ನಾಯಕತ್ವವನ್ನು ಒಪ್ಪಿಕೊಳ್ಳಬೇಕು ಎಂಬುದೇ ಒಂದು ಯಕ್ಷಪ್ರಶ್ನೆಯಾಗಿ ಭಾರತೀಯರನ್ನು ಕಾಡುತ್ತಿತ್ತು. ಆ ಸಂದರ್ಭಕ್ಕೆ ಸರಿಯಾಗಿ ಮಹಾತ್ಮಾ ಗಾಂಧಿಜಿಯವರ ಆಗಮನ ಹೋರಾಟಗಾರರಲ್ಲಿ ಒಂದು ಹೊಸ ಭರವಸೆಯನ್ನು ಹುಟ್ಟು ಹಾಕಿತು. 1915ರಲ್ಲಿ ಭಾರತಕ್ಕೆ ಬಂದ ಗಾಂಧೀಜಿಯವರಿಗೆ ಅವರ ರಾಜಕೀಯ ಗುರುವಾಗಿದ್ದ ಗೋಪಾಲಕೃಷ್ಣ ಗೋಖಲೆಯವರು ಒಂದು ಕಿವಿ ಮಾತನ್ನು ಹೇಳಿದ್ದರು. ಅದೇನೆಂದರೆ ನಿನ್ನ ಕಣ್ಣಾರೆ ನೀನು ಭಾರತವನ್ನು ನೋಡುವ ಮೊದಲು ಅದರ ಕುರಿತು ಮಾತನಾಡಬೇಡ ಎಂದು ಹೀಗಾಗಿ 1914ರಲ್ಲಿ ಭಾರತಕ್ಕೆ ಬಂದರು ಸಹ ಗಾಂಧೀಜಿ ಹೋರಾಟದ ಹಾದಿಗೆ ಇಳಿಯಲಿಲ್ಲ. ಅಹ್ಮದಾಬಾದಿನ ಸಾಬರಮತಿ ದಂಡೆಯಮೇಲೆ ಆಶ್ರಮವನ್ನು ನಿಮರ್ಾಣ ಮಾಡಿಕೊಂಡು ಸಂಘಟನೆಯನ್ನು ಮಾಡುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಆದರೆ ಯುದ್ಧ ಬಲ್ಲ ಸೇನಾನಿಗೆ ಕೈಕಟ್ಟಿ ಕೂರಲು ಆಗುವುದಿಲ್ಲ ಎನ್ನುವ ಮಾತಿನಂತೆ ಗಾಂಧೀಜಿಯು ಹೋರಾಟದ ಹಾದಿಗೆ ಮರಳುವ ವೇದಿಕೆಯು ರೈತ ಹೋರಾಟದ ಮೂಲಕ ನಿಮರ್ಾಣವಾಯಿತು. ಅದೇ 1917 ರ 'ಚಂಪಾರಣ ಸತ್ಯಾಗ್ರಹ'. ಆಂಗ್ಲರ ದಬ್ಬಾಳಿಕೆಗೆ ನಲುಗಿದ ರೈತರು
ಪಾಪಿ ಬ್ರಿಟೀಷರು ಭಾರತೀಯರನ್ನು ಶೋಷಣೆ ಮಾಡದೇ ಇರುವ ಸಮುದಾಯವೇ ಇಲ್ಲವೇನೊ ಎನ್ನಿಸುತ್ತದೆ. ಸಾಮಾನ್ಯ ಪ್ರಜೆಯ ಆದಿಯಾಗಿ ರೈತರನ್ನು ಸಹ ಇನ್ನಿಲ್ಲದಂತೆ ದೋಚಿದ ಖದಿಮರಾಗಿದ್ದಾರೆ. ರೈತರ ಮೇಲಿನ ದೌರ್ಜನ್ಯದ ಪರಿಣಾಮವಾಗಿಯೇ ಚಂಪಾರಣ ಸತ್ಯಾಗ್ರಹ ಜರುಗಿತು. ಇದರೊಂದಿಗೆ ಇತಹಾಸದಲ್ಲಿ ತನ್ನ ಹೋರಾಟದ ಗುರುತನ್ನು ಅಜರಾಮರವಾಗಿಸುವುದರ ಜೊತೆಗೆ ಬಾಪೂಜಿಯವರನ್ನು ಭಾರತದ ಸ್ವಾತಂತ್ರ್ಯ ಚಳುವಳಿಗೆ ಇಳಿಯುವುದಕ್ಕೆ ಪ್ರೇರಣೆ ನೀಡಿತು. ಹೌದು ಅದು 1917 ರ ಸಮಯ ಆಂಗ್ಲರ ಕಬಂದಭಾಹುವಿನಲ್ಲಿ ಭಾರತಾಂಬೆ ನರಳುತ್ತಿದ್ದ ಕಾಲವದು. ಆಗ ಭಾರತೀಯರನ್ನು ಮನಬಂದಂತೆ ನಡೆಸಿಕೊಳ್ಳುತ್ತಿದ್ದ ಬ್ರಿಟೀಷರು ಇನ್ನಿಲ್ಲದಂತೆ ತೊಂದರೆ ನೀಡುತ್ತಿದ್ದರು. ಬಿಹಾರ ಪ್ರಾಂಥದಲ್ಲಿ ರೈತರ ಮೇಲೆ ಬ್ರಿಟೀಷರು ತಮ್ಮ ಬಿಗಿ ಹಿಡಿತವನ್ನು ಸಾಧಿಸಿದ್ದರು. ಜಮೀನು ಹೊಂದಿರುವ ಪ್ರತಿಯೊಬ್ಬ ರೈತನು ಅಲ್ಲಿ ಆಂಗ್ಲರಿಗಾಗಿ ನೀಲಿ(ಇಂಡಿಗೋ) ಬೆಳೆಯನ್ನು ಬೆಳೆದುಕೊಡಲೇ ಬೇಕಿತ್ತು. ಅದರ ಪ್ರಮಾಣ ಅಂದರೆ 20 ಗುಂಟೆ ಜಮೀನು ಹೊಂದಿದ್ದರೆ ಕನಿಷ್ಟ 3 ಗುಂಟೆಯಾದರೂ ನೀಲಿ ಬೆಳೆಯಲೇ ಬೇಕಿತ್ತು. ಬೆಳೆದ ನೀಲಿಯನ್ನು ಬ್ರಿಟೀಷರು ನಿಗದಿ ಪಡಿಸುವ ಅಲ್ಪ ಬೆಲೆಗೆ ನೀಡಬೇಕಿತ್ತು. ಅದರ ಜೊತೆಯಲ್ಲಿ ರೈತರ ಮೇಲೆ ಅನೇಕ ವಿಧದ ಕಂದಾಯವನ್ನು ಹೇರುತ್ತ ಶೋಷಣೆ ಮಾಡುತ್ತಿದ್ದರು. ಒಂದು ವೇಳೆ ನೀಲಿ ಬೆಳೆಯಿಂದ ತಪ್ಪಿಸಿಕೊಳ್ಳಬೇಕಾದರೆ ಹೆಚ್ಚಿನ ಹಣವನ್ನು ಅಧಿಕಾರಿಗೆಳಿಗೆ ಕಾಣಿಕೆ ರೂಪದಲ್ಲಿ ನೀಡಬೇಕಿತ್ತು. ತನ್ನ ಜಮೀನಿನಲ್ಲಿ ತನಗೆ ಬೇಕಾದ ಬೆಳೆ ಬೇಳೆಯಲು ಸಹ ಸ್ವತಂತ್ರ್ಯವಿರದ ಹಾಗೆ ಅವರ ಕೈಯನ್ನು ಕಟ್ಟಿ ಹಾಕಲಾಗಿತ್ತು. ಹಲವು ವರ್ಷಗಳ ಕಾಲ ಈ ದಬ್ಬಾಳಿಕೆಯ ದಳ್ಳುರಿ ಭಾರತದ ರೈತರನ್ನು ದಹಿಸುತ್ತಲೇ ಇತ್ತು. ಇದರಿಂದ ಎಷ್ಟೋ ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಬಂದು ತಲುಪಿದ್ದರು. ದುಪ್ಪಟ್ಟಾದ ದಬ್ಬಾಳಿಕೆ ಕಂಗೆಟ್ಟ ರೈತ ಇದರ ಮಧ್ಯದಲ್ಲಿಯೇ ಬ್ರಿಟನ್ ದೇಶದಲ್ಲಿ ಕೃತಕ ನೀಲಿಯನ್ನು ಅಭಿವೃದ್ಧಿ ಪಡಿಸಿದರು. ಇದರ ಪರಿಣಾಮವಾಗಿ ಭಾರತೀಯ ರೈತರು ಬೆಳೆಯುವ ನೀಲಿಗೆ ಬೆಂಬಲ ಬೆಲೆ ನೀಡಲು ಬ್ರಿಟೀಷರು ನಿರಾಕರಿಸಿದರು. ಬದಲಿಗೆ ನೀಲಿ ಬೆಳೆಯಿಂದ ಪಡೆಯುತ್ತಿದ್ದ ಲಾಭವನ್ನು ರೈತರಿಂದ ಅಧಿಕ ಕಂದಾಯ ವಸೂಲಿ ಮಾಡುವ ಮೂಲಕ ಸುಲಿಗೆ ಮಾಡಲು ಆರಂಭಿಸಿದರು. ರೈತರ ಮೇಬಲವಂತವಾಗಿ ತೆರಿಗೆ ಹೇರಲಾರಂಭಿಸಿದರು. ಒಂದು ವೇಳೆ ತೆರಿಗೆ ಕೊಡಲು ನಿರಾಕರಿಸಿದರೆ ರೈತರು ಊಳುಮೆ ಮಾಡಲು ಬಳಸುತ್ತಿದ್ದ ನೇಗಿಲನ್ನು ಕಿತ್ತುಕೊಂಡು ತಮ್ಮ ಕಾಖರ್ಾನೆಗಳಲ್ಲಿ ಇಡುತ್ತಿದ್ದರು. ಈ ಅಮಾನವೀಯ ಕಾರ್ಯಕ್ಕೆ 'ಸತ್ತಾ' ಎಂದು ಹೆಸರು ನೀಡಿ ಅದನ್ನು ಸಮತರ್ಿಸಿಕೊಳ್ಳುತ್ತಿದ್ದರು. ಸಾಲದೆಂಬಂತೆ ಕಾಖರ್ಾನೆಗಳ ದಾಸ್ತಾನುಗಳನ್ನು ತುಂಬುವುದಕ್ಕಾಗಿ ರೈತರ ಗಾಡಿಗಳನ್ನು ಬಲವಂತವಾಗಿ ಕಸಿದುಕೊಳ್ಳುತ್ತಿದ್ದರು. ಇದನ್ನು ಪ್ರಶ್ನಿಸಿದ ರೈತರಿಗೆ ಇನ್ನಿಲ್ಲದ ತೆರಿಗೆಯನ್ನು ಹೇರಿ ಬದುಕೇ ದುಸ್ತರವಾಗುವಂತೆ ಮಾಡುತ್ತಿದ್ದರು. ಕೂಲಿ ಮಾಡುವ ರೈತರು ತಮ್ಮ ಉಪಜೀವನಕ್ಕಾಗಿ ಬಳಕೆ ಮಾಡುತ್ತಿದ್ದ ಎತ್ತಿನ ಗಾಡಿ ಬಾಡಿಗೆ ಮೇಲೆ 1/5 ರಷ್ಟು ತೆರಿಗೆಯನ್ನು ಹೇರಲಾಗಿತ್ತು. ಇದಕ್ಕೆ 'ದಸ್ತೂರಿ' ಎಂದು ಕರೆಯುತ್ತಿದ್ದರು. ಇದರಿಂದ ಜಗತ್ತಿಗೆ ಅನ್ನ ನೀಡಿ ಸ್ವಾಭಿಮಾನದ ಸಂಕೇತವಾಗಿದ್ದ ರೈತನು ಸಂಪೂರ್ಣವಾಗಿ ತನ್ನ ತನವನ್ನು ಕಳೆದುಕೊಂಡು ಅಕ್ಷರಶಃ ಗುಲಾಮಗಿರಿಯಲ್ಲಿ ಜೀವನ ಮಾಡುವಂತ ಹೇಯ ಸ್ಥಿತಿ ನಿಮರ್ಾಣವಾಯಿತು. ಗಾಂಧೀ ಬಂದರು ನೆಮ್ಮದಿ ತಂದರು ರೈತರ ಮೇಲಾಗುತ್ತಿರುವ ದೌರ್ಜನ್ಯವನ್ನು ಕಂಡು ಕಂಗೆಟ್ಟ ಬಿಹಾರದ ಸ್ಥಳೀಯ ವ್ಯಕ್ತಿ ರಾಜಕುಮಾರ ಶುಕ್ಲಾ ಗಾಂಧೀಜಿಯವರನ್ನು ಭೇಟಿಯಾಗಿ ಸಮಸ್ಯೆಯನ್ನು ವಿವರಿಸುವುದರ ಜೊತೆಗೆ ತಮಗೆ ಸಹಾಯ ಮಾಡಬೇಕು ಎಂದು ಕೇಳಿಕೊಂಡರು. ಶುಕ್ಲಾರ ಮಾತನ್ನು ಆಲಿಸಿದ ಗಾಂಧೀಜಿ ಮರುಮಾತಾಡದೆ ಬಿಹಾರದ ರೈತರಿಗೆ ಸಹಾಯ ಮಾಡಲು ಧಾವಿಸಿ ಬಂದರು. ಗಾಂಧೀಜಿಯವರು ದಕ್ಷಿಣಾಫ್ರೀಕಾದಲ್ಲಿ ಮಾಡಿದ ಹೋರಾಟವನ್ನು ಕೇಳಿದ್ದ ರೈತರಿಗೆ ಗಾಂಧೀಜಿಯವರ ಮೇಲೆ ಸಂಪೂರ್ಣ ನಂಬಿಕೆ ಮೂಡಿತು. ಜೊತೆಗೆ ಬ್ರಿಟೀಷರ ವಿರುದ್ಧ ಧ್ವನಿ ಎತ್ತಿ ಮಾತಾಡುವ ಧೈರ್ಯವು ಬಂದಿತು. ಗಾಂಧೀಜಿ ಜೊತೆಗೆ ಬಾಬು ರಾಜೇಂದ್ರ ಪ್ರಸಾದ, ಜೆ.ಪಿ.ಕೃಪಲಾನಿ, ಮಹದೇವ ದೇಸಾಯಿ, ಮಜಾಹರ್-ಉಲ-ಹಕ್ ಸೇರಿದಂತೆ ಅನೇಕ ಜನರು ಗಾಂಧೀಜಿಯೊಂದಿಗೆ ಬಿಹಾರಕ್ಕೆ ಬಂದು ಪರಿಸ್ಥಿತಿಯ ಕುರಿತು ಅಧ್ಯಯನ ನಡೆಸಿದರು. ನಂತರ ಎಲ್ಲರು ಸಂಗ್ರಹಿಸಿದ ಮಾಹಿತಿ ಆಧಾರವಾಗಿ 2250 ಪದಗಳನ್ನೊಳಗೊಂಡ ವರದಿಯನ್ನು ತಯಾರಿಸಿ ರೈತರ ಮೇಲೆ ಆಗುತ್ತಿರುವ ಶೋಷಣೆಯನ್ನು ಸಕರ್ಾರದ ಗಮನಕ್ಕೆ ತರಲು ಯತ್ನಿಸಿದರು. ಆದರೆ ಶೋಷಣೆಗಾಗಿಯೇ ನಿಂತ ಸಕರ್ಾರ ಈ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ಸಿದ್ಧವಾಗಿರಲಿಲ್ಲ. ಆಗ ಗಾಂಧೀಜಿ ದಕ್ಷಿಣಾಫ್ರೀಕಾದಲ್ಲಿ ವರ್ಣಬೇಧ ನೀತಿಯ ವಿರುದ್ಧ ಬಳಸಿದ ಸತ್ಯಾಗ್ರಹದ ತಂತ್ರವನ್ನು ಇಲ್ಲಿಯೂ ಪ್ರಯೋಗಿಸಲು ನಿರ್ಧರಿಸಿದರು. ಪರಿಣಾಮವಾಗಿ 21 ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. ಆಫ್ರೀಕಾದಲ್ಲಿ ಗಾಂಧೀಜಿಯವರು ನಡೆಸಿದ ಹೋರಾಟವನ್ನು ಅರಿತಿದ್ದ ಬ್ರಿಟೀಷ್ ಸಕರ್ಾರ ಗಾಂಧೀಜಿಯ ಹೋರಾಟಕ್ಕೆ ಮಣಿಯ ಬೇಕಾಯಿತು. 22 ನೇ ದಿನ ಗಾಂಧೀಜಿಯವರ ಬೇಡಿಕೆಯನ್ನು ಪುರಸ್ಕರಿಸಿ ರೈತರ ಹಕ್ಕುಗಳನ್ನು ಕಾಯುದಾಗಿ ಮತ್ತು ಅವರ ಮೇಲಿನ ಎಲ್ಲ ತೆರಿಗೆಗಳ್ನು ಹಾಗೂ ನೀಲಿ ಬೆಳೆಯಿಂದ ವಿನಾಯಿತಿ ನೀಡುವುದಕ್ಕೆ ಒಪ್ಪಿಕೊಂಡರು. ಇದರೊಂದಿಗೆ ಭಾರತದಲ್ಲಿ ಗಾಂಧೀಜೀ ಆರಂಭಿಸಿದ ಮೊದಲ ಹೋರಾಟವು ಯಶಸ್ವಿಯಾಗಿ ಗಾಂಧೀಜಿ ಭಾರತ ಸ್ವಾತಂತ್ರ್ಯ ಚಳುವಳಿಗೆ ಧುಮುಕಲು ಕಾರಣವಾಯಿತು. ಈ ಸತ್ಯಾಗ್ರಹಕ್ಕೀಗ ಶತಮಾನದ ಸಂಭ್ರಮ ಅಂದು ಹೋರಾಟ ಮಾಡಿ ಯಶಸ್ವಿಯಾಗಿ ರೈತರ ಹಕ್ಕುಗಳನ್ನು ಉಳಿಸಲು ಕಾರಣವಾದ 'ಚಂಪಾರಣ ಸತ್ಯಾಗ್ರಹ'ಕ್ಕಿಗ ಶತಮಾನದ ಸಂಭ್ರಮ. ಅಂದರೆ 25 ಜೂನ 2017 ಕ್ಕೆ ಅಂದರೆ ಇಂದಿಗೆ ಬರೊಬ್ಬರಿ ನೂರು ವರ್ಷವಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ರೈತರ ಮೇಲಾಗುತ್ತಿದ್ದ ಅನ್ಯಾವನ್ನು ಹೋಗಲಾಡಿಸಲು ಗಾಂಧೀಜಿ ಅವತಾರಿ ಪುಷರಾಗಿ ಜನಿಸಿದರು. ಪರಿಣಾಮ ಸತ್ಯಾಗ್ರಹ ಜರುಗಿ ರೈತರ ಹಕ್ಕುಗಳ ರಕ್ಷಣೆ ಆದವು. ಆದರೆ ಸ್ವಾತಂತ್ರ್ಯಾ ನಂತರದಲ್ಲಿ ರೈತರ ಮೇಲಾಗುವ ದೌರ್ಜನ್ಯ ಕೇಳುವುದಕ್ಕೆ ಯಾರು ಇಲ್ಲವೇ ಎನ್ನುವ ಹಾಗಗಿದೆ. ಬ್ರಿಟಿಷರು ಬಿಟ್ಟು ಹೋದರು ಶೋಷಣೆ ಮಾಡುವುದಕ್ಕೆ ಭಾರತೀಯ ಬ್ರಿಟೀಷರು ಹುಟ್ಟಿಕೊಂಡಿರಬೇಕಾದರೆ ಹೋರಾಟ ಮಾಡುವುದಕ್ಕೆ ಗಾಂಧೀ ಬರುತ್ತಾರಾ? ಎಂಬುದೇ ಯಕ್ಷ ಪ್ರಶ್ನೆಯಾಗಿ ನನ್ನನ್ನು ಕಾಡುತ್ತಿದೆ. ಅದೇನೆ ಇರಲಿ ಶತಮಾನದ ಸಂಭ್ರಮದಲ್ಲಿರುವ 'ಚಂಪಾರಣ ಸತ್ಯಾಗ್ರಹದ' ಕುರಿತು ಒಮ್ಮೆ ಅವಲೋಕನ ಮಾಡೋಣ ಗಾಂಧೀಗಿರಿಯನ್ನು ಮನಸಾರೆ ಶ್ಲಾಘಿಸೋಣ.

Tuesday, June 9, 2015

ಬಹಳ ದಿನಗಳ ಬಳಿಕ ಗೆಳೆಯರ ಮತ್ತು ಓದುಗರ ಅಪಕ್ಷೆಯಂತೆ ನಿನ್ನ ಕಣ್ಣ ಕನ್ನಡಿಯಲ್ಲಿ ಕಾಲಂನ್ನು ಮತ್ತೆ ಬರೆಯಲು ಆರಂಭಿಸುತ್ತಿದ್ದೆನೆ. ನಿಮ್ಮ ಮನದಲ್ಲಿನ ಮಿಡಿತಗಳಿಗೆ ಭಾವನೆಗಳ ತುಡಿತಗಳಿಗೆ ಮತ್ತೆ ನನ್ನ ಅಕ್ಷರಗಳ ಮೂಲಕ ರೂಪ ನೀಡುತ್ತಿದ್ದೆನೆ. ಸೋನು ಎಂಬ ಕಲ್ಪನೆ ಮತ್ತೆ ನಿಮ್ಮೆದುರು ಬರುತ್ತಿದೆ.

Wednesday, December 24, 2014

ನಿನ್ನ ಕಣ್ಣ ಕನ್ನಡಿಯಲ್ಲಿ

                   
                                              ಮರೆಯಲಾಗದ ಆ ಮಳೆ ಮತ್ತೆ ಕಾಡುತಿದೆ ಗೆಳತಿ
ಡಿಯರ್ ಸೋನು,
ಮೊದಲು ಮಳೆ ಬಂದಿತೆಂದರೆ ಸಾಕು ನನ್ನ ಕೋಪಕ್ಕೆ ಮಿತಿ ಇಲ್ಲದ ಹಾಗಾಗುತ್ತಿತ್ತು. ಆ ಕಿಚಿ ಪಿಚಿ ಕೆಸರಲಿ ಕಾಲಿಟ್ಟಗಲಂತು ಆ ದೇವರನ್ನು ಎಷ್ಟು ಸೆಪಿಸುತ್ತದ್ದೇನೋ ಅದೇ ದೇವರಿಗೇ ಗೊತ್ತು. ಹಾಗಿತ್ತು ಮಳೆಯ ಮೇಲೆ ನನ್ನ ಮುನಿಸು. ಒಟ್ಟಿನಲ್ಲಿ ನಾನೊಬ್ಬ ಮಳೆಯ ವಿರೋಧಿಯಾಗಿದ್ದೆ. ಯಾಕಾದರು ಈ ಹಾಳು ಮಳೆ ಹಿಡಿದುಕೊಳ್ಳುತ್ತದೆಯೋ ಎಂದುಕೊಳ್ಳುತ್ತಿದ್ದ ಮನಸು ಇಂದು ಮೊದಲ ಮುಂಗಾರು ಮಳೆಯನ್ನು ಕಾಯುತ್ತಿದೆ. ಅದರಲ್ಲೂ ಜಿಡಿ...ಜಿಡಿ....ಮಳೆಯಲ್ಲಿ ನೆನೆಯಬೇಕೆಂಬ ಆಶೆ ಹೆಚ್ಚುತ್ತಿದೆ. ಮನೆ ಬಿಟ್ಟು ಹೊರಗೆ ಬಾ ಎಂದು ಸ್ವಾಗತ ಕೋರುವ ಆ ಮಣ್ಣಿನ ಕಮಟು ವಾಸನೆ ನೆನಯುತ್ತಿದ್ದರೆ, ನನ್ನ ಮನದ ಭಾವನೆಯ ಭೂಮಿಯಲಿ ಕಲ್ಪನೆಯ ಬಳಿಯಲ್ಲಿ ನೆನಪಿನ ಹೂ ಅರಳುತ್ತದೆ.
ಮೊದಲ ಮುಂಗಾರು ಮಳೆ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿಯೂ ಕಳೆದ ಮುಂಗಾರು ಮಳೆಯ ಝಲಕ್ನ್ನು ಮತ್ತೆ ಮತ್ತೆ ತೋರಿಸುತ್ತಿದೆ. ಅಂದು ಬಂದ ಮಳೆ ಭೂತಾಯಿಗೆ ಅಮೃತ ಸಿಂಚನ ನೀಡುತ್ತಿತ್ತು. ಹನಿಗೂಡುತ್ತಿದ್ದ....ಮಳೆ, ಕಡಿದಾದ ದಾರಿ ದಾರಿಯ ಮೇಲೆ ಒಬ್ಬರು ಮಾತ್ರ ಸಂಚಿರಿಸಿವಷ್ಟು ಇಕ್ಕಟ್ಟು ಇಂತಹ ಸಮಯದಲ್ಲಿಯೇ ಹೀಲ್ಟ್ಸನ ಶಬ್ದ ಮಾಡುತ್ತ ಹೆಜ್ಜೆ ಹಾಕುತ್ತ ಸಾಗೂತ್ತಿದ್ದ ನನ್ನ ಮೌನದೇವತೆ ಮತ್ತೆ ಮತ್ತೆ ಮನದಲ್ಲಿ ಪ್ರತ್ಯಕ್ಷಳಾಗುತ್ತಾಳೆ. ಅಂದು ನಿನ್ನ ಜೊತೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಆ ಸಮಯದಲ್ಲಿ ನನ್ನ ಮನದ ಮುಗಿಲಲ್ಲಿ ಭಾವನೆಯ ಮೋಡಗಳು ಕಟ್ಟಿಕೊಂಡು ಪ್ರೀತಿಯ ಧಾರೆಯಾಗೆ ಧರೆಗಿಲಿಯಲು ಕಾಯುತ್ತಿದ್ದವು.
ಆದರೆ ಸಿಕ್ಕಿದ್ದೆ ಛಾನ್ಸ್ ಎನ್ನುವಂತೆ ಮಳೆಯ ಹನಿಗಳು ಬಂದುನನ್ನವಳ ಮುಖಕ್ಕೆ ಮುತ್ತಿಕ್ಕುತ್ತಿದ್ದರೆ ಆ ಹನಿಗಳ ಮೇಲೆ ಮತ್ಸರದ ಭಾವನೆ ಉಂಟಾಗುತ್ತಿತ್ತು. ಶ್ವೇತ ವರ್ಣದ ವಸ್ತ್ರದಲ್ಲಿ ಥೇಟ್ ಅಪ್ಸರೆಯ ಪ್ರತಿರುಪವಾಗಿ ಕಾಣುತ್ತಿದ್ದ ನನ್ನವಳ ರೇಷ್ಮೆಯಂತಹ ಕೇಶರಾಸಿ ಮತ್ತಷ್ಟು ನೆನಯದಿರಲೆಂದು ಅವಳ ದುಪ್ಪಟ್ಟಾವನ್ನು ತಲೆಗೆ ಹೊದಿಸಿದಾಗ ಅವಳು ಕೊಟ್ಟ ಆ ಒಂದು ಪ್ರೀತಿಯ ನಗು ಅಲ್ಲಿಯವರೆಗೂ ಕಾದಿದ್ದ ಭಾವನೆಯ ಮೋಡಗಳು ಹನಿಗಳಾಗಿ ಪರಿವತರ್ಿತಗೊಂಡವು. ಮತ್ತೆ ಅವಳೋಟ್ಟಗಿನ ನಡಿಗೆ ಏಳೇ ಏಳು ಜನ್ಮದಲ್ಲೂ ನಾನು ನಿನ್ನ ಜೊತೆಗೆ ಹೆಜ್ಜೆ ಹಾಕುವೆ ಎನ್ನುವಂತ ಸ್ಪಷ್ಟ ಸಂದೇಶದಂತೆ ತೋರುತ್ತಿತ್ತು. ಇದೆಲ್ಲವನ್ನು ಗಮನಿಸುತ್ತಿದ್ದ ಮೇಗರಾಜನಿಗೆ ಖುಷಿ ಹೆಚ್ಚಾಗಿ ಕುಣಿದಾಡತೊಡಗಿದನು. ನಾನು ನೆನೆಯದಿರಲೆಂದು ನೀ ಹೊದಿಸಿದ ದುಪ್ಪಟ್ಟಾ ನಮ್ಮಿಬ್ಬರ ಪ್ರೀತಿಗೆ ಸಾಕ್ಷಿಯಾಗಿತ್ತು. ನನ್ನ ಕೈಹಿಡಿದು ನೀನು ನಡೆಯುತ್ತದ್ದರೆ ಮೇಘರಾಜ ನಿನ್ನ ದಾರಿಯನ್ನು ಹಸನಾಗಿಸಲು ಕಷ್ಟ ಪಡುತ್ತಿದ್ದಾನೇನೊ ಎನ್ನಿಸುತ್ತಿತ್ತು.
ನಿಜಾ ಸೋನು ನನಗೀಗಲು ಮರೆಯಲಾಗದ ಆ ಮಳೆಯನ್ನು ನೆನಸಿಕೊಂಡರೆ ಸಾಕು ಏನೋ ರೋಮಂಚನವಾಗುತ್ತದೆ. ಮಳೆಯಲಿ ಜೊತೆಯಲಿ, ನೆನೆಯುತ ಸಾಗಲಿ ಎಂದು ಹಾಡುವುದಕ್ಕೆ ಮನಸು ಆರಂಭಿಸುತ್ತದೆ. ಅಂದು ಮಳೆ ಸೃಷ್ಟಸಿದ ಸಂದರ್ಭ ಇಂದು ನನ್ನ ಜೀವನದ ಆಟೋಗ್ರಾಫ ಪುಸ್ತಕದಲ್ಲಿ ಮರೆಯದಂತ ಪುಟವಾಗಿಬಿಟ್ಟಿದೆ. ಅಂದು ಆ ಮಳೇ ಬಾರದೇ ಇದ್ದಿದ್ದರೆ ನಾವಿಂದು ಇಷ್ಟು ಆತ್ಮಿಯರಾಗಿರಲು ಆಗುತ್ತಿರಲಿಲ್ಲ ಅನಿಸುತ್ತದೆ.
ಮತ್ತೇ ಮುಂಗಾರಾ ನಮಗಾಗಿ ಕದಿದೆ. ಕಳೆದ ಕ್ಷಣಗಳು ಮತ್ತೆ ಮತ್ತೆ ಕಾಡುತಿವೆ. ಬರುವ ಮುಂಗಾರಿನಲಿ ಮತ್ತೆ ಒಂದಾಗೋಣ ಪ್ರತಿ ಮುಂಗಾರು ಮಳೆಯನ್ನು  ಜೊತೆಯಾಗಿಯೇ ಆಸ್ವಾಧಿಸೋಣ ಎನ್ನುವ ಬಯಕೆ ಆಡುತಿದೆ ಸೋನು ಕಾಯ್ತಾ ಇರ್ತಿನಿ ಪ್ಲೀ........ಸ್ ಬೇಗ ಬರ್ತಿಯಾ ತಾನೇ..........?
                                                                                     ಇಂತಿ ನಿನ್ನ ನೆನಪಿನ ದೋಣಿಯ ನಾವಿಕ



Thursday, August 22, 2013

ಕಣ್ಣು ಹೇಳುತ್ತೆ ನಿನ್ನಾ ನೋಡು ಅಂತಾ
ಮನಸ್ಸು ಹೇಳುತ್ತೆ ಮಾತಾಡು ಅಂತಾ
ಬುದ್ದಿ ಹೇಳುತ್ತೆ ವಿಚಾರಾ ಮಾಡು ಅಂತಾ
ನನ್ನ ಪರ್ಸ ಹೇಳುತ್ತೆ ಇದರಲ್ಲಿ ದುಡ್ಡಿಲ್ಲಾ ಅಂತಾ
ಆದ್ರೆ ದುನಿಯಾ ಹೇಳುತ್ತೆ ದುಡ್ಡಿಲ್ಲಾ ಅಂದ ಮೇಲೆ
ಈ ನೋಡೋದು, ಮಾತಾಡೋದು ಯಾಕೆ ಅಂತ
ಸಮಾಜ ಸತ್ಯಾ ಹೇಳುತ್ತೆ ದುಡ್ಡಿದ್ರೆ ಮಾತ್ರ ದುನಿಯಾ ಅಂತ.

 ನಿಮ್ಮ ನೆನಪಿನ ದೋಣಿಯ ನಾವಿಕ





ಮಬ್ಬು ಮುಸುಕಿದ ದಾರಿಯಿಂದ
ಭರವಸೆ ತುಂಬಿದ ಬೆಳಕಿನ ಹಾದಿಗೆ
ಹೊರಡುವ ಮಹದಾಶೆಯಿಂದ
ಹೊರಟಿರುವೆ ನಾನು
ಆದರೆ ಜೀವನದ ತಿರುವುಗಳು
ನನ್ನನ್ನು ಮತ್ತೆಲ್ಲಿ ಹೊರಳಿಸುತ್ತದೆಯೋ
ದುಃಖ ದುಮ್ಮಾನಗಳು ಕೆರಳಿಸುತ್ತವೆಯೋ
ಗೊತ್ತಿಲ್ಲ. ನೋವು ನಲಿವುಗಳ ಚಿಂತೆಗಿಂತ
ತಿರುವುಗಳ ಚಿಂತೆಯೆ ನನ್ನನ್ನು ಕಾಡುತ್ತಿದೆ.

Friday, December 28, 2012

ಸಿಗದವರಿಗಾಗಿ ಸಾಯೊಕಾಗುತ್ತೆ ಸಿಕ್ಕವರಿಗಾಗಿ ಬದಕೋಕಾಗಲ್ವ ಪ್ರೆಂಡ್ಸ್?



ಇಂದು ನಾವು ನೋಡದ್ದೆಲ್ಲ ನಮ್ಮದು ಎನ್ನುವ ಭಾವನಡಯಲ್ಲಿ ಬದುಕುತ್ತಿರುವ ಮೂರ್ಕರು, ನಮ್ಮವರು, ನನ್ನವಳು ಎನ್ನು ಭಾವನೆಗಳೇ ಕೆಲವೊಮ್ಮೆ ನಮಗೆ ಮುಳ್ಳಾಗುತ್ತದೆ. ನಮ್ಮ ಪ್ರೀತಿಯೇ ನಮಗೆ ದೌರ್ಬಲ್ಯವಾಗುತ್ತದೆ. ಆವಾಗ ನಾವು ಹಿಡಿಯುವ  ಅಸಹನೀಯವಾದ ದಾರಿ ನಮ್ಮನ್ನು ನಿರಾಶೆಯ ಕೂಪಕ್ಕೆ ತಳ್ಳುತ್ತದೆ. ಪರಿಣಾಮ ನಾವು ನಮ್ಮನ್ನು ಪ್ರೀತಿಸುವವರನ್ನು ಮರೆತು ನಾವು ಪ್ರೀತಿಸಿದರು ಪ್ರೀತಿಸದ ಜಿವಕ್ಕಾಗಿ ನಮ್ಮ ಜೀವನ ಬಲಿಕೊಡಲು ಹೊರಡುವುದು ಯಾವ ನ್ಯಾ ನೀವೇ ಹೇಳೀ ನಾನು ಹೇಳಿದ್ದು ತಪ್ಪಾ?

                               ನಿಮ್ಮ ಪ್ರೀತಿಯ ಪಯಣಿಗ ......

                                                    ಆದರೂ....ನೆನಪಿನ ದೊಣಿಯ ನಾವಿಕ



Tuesday, December 18, 2012


ಇದು ನಿಜ ಪ್ರೀತಿಯ ಕಡಲಾಳ ಸುಮ್ಮನೆ ನಿಂತು ನೋಡಿದರೆ ತಿಳಿಯದು ಆಳಕ್ಕೆ ಇಳಿದಾಗ ಮಾತ್ರ ಪ್ರೀತಿಯ ಅರಿವಾಗುವುದು ಒಮ್ಮೆ ಓದಿ
                                                                                        ಇಂತಿ ನಿಮ್ಮ ಪ್ರೀತಿಯ ನೆನಪಿನ ದೋಣಿಯ ನಾವಿಕ 

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...