Sunday, June 13, 2010

ಬಿಟ್ಟು ಹೋದವಳಿಗೊಂದು ಪುಟ್ಟ ಥ್ಯಾಂಕ್ಸ್

ನಿನ್ನ ಹತ್ತಿರ ಏನಿದೆ?ಅದೇ ಹಳೆಯ ಹೀರೊಹೊಂಡ, ಅಪ್ಪಾಕೊಡುವ ಪುಡಿಗಾಸಿನ ಹೊರತು. ಆದರೆ ಅವನ ಹತ್ತಿರ ದುಡ್ಡಿನ ಸಾಮ್ರಾಜ್ಯವಿದೆ. ನನ್ನ ಜೀವನ ಶೈಲಿ ಬದಲಿಸಿಕೊಳ್ಳುವುದಕ್ಕೆ ಏನೆಲ್ಲ ಬೇಕೊ ಅದು ಅವನಲ್ಲಿದೆ. ತಗೊ ಣಿ ಕೊಡಿಸಿದ ರಸ್ತೆ ಬದಿಯಲ್ಲಿನ ವಾಚು ನಿನಗೆ ಇರಲಿ good bye ಎಂದು ನನ್ನ ಪ್ರೀತಿಯನ್ನು ತಿರಸ್ಕರಿಸಿ ಮುಖಕ್ಕೆ ಹೊಡೆದ ಹಾಗೆ ಹೇಳಿ ಹೋದೆಯಲ್ಲ ನೆನಪಿನ್ನು ಹಸಿ ಹಸಿಯಾಗೆ ಇದೆ.

ನಿನಗೆ ಗೊತ್ತಿಲ್ಲ. ನಾ ಕೊಡಿಸಿದ ಕೈ ಗಡಿಯಾರವನ್ನು ನೀನು ರಸ್ತೆ ಬದಿಯಿಂದ ತಂದದ್ದು ಎಂದು ವಾಪಸ್ಸುಕೊಟ್ಟೆ. ಆದರೆ ನಾನು ಅದನ್ನು ತರಬೇಕಾದರೆ ಎರಡು ದಿನಾ ರಾತ್ರಿ over time ಕೆಲಸ ಮಾಡಿ ತಂದಿದ್ದೆ. ಅದಕ್ಕೆ ಬೆಲೆ ಇಲ್ಲದಿದ್ದರೇನಂತೆ, ನನ್ನ ಪ್ರೀತಿಗಾದರು ಬೆಲೆ ಇತ್ತು ತಾನೆ? ಆದರೆ ಅದು ನಿನಗೆ ಅರ್ಥವಾಗದಷ್ಟು ನಿನ್ನ ಮನಸ್ಸುಬದಲಾದಿದೆಯೇ? ಮನೆಯಲ್ಲಿ ಯಾವುದೊ ಕಾರಣಕ್ಕೆ ಜಗಳವಾಡಿ ಬಂದಾಗ ಯಾರು ಇಲ್ಲದಿದ್ದರೇನು,ನಾನು ನಿನ್ನ ಜೊತೆಗಿದ್ದೇನೆ ದೈರ್ಯವಾಗಿರು. ಎಂದು ಹೇಳಿದ ನಿನ್ನ ಸಾಂತ್ವನದ ಮಾತುಗಳು ನನ್ನ ಜೀವನಕ್ಕೆ ಹೋಸ ಭರವಸೆ ನೀಡಿದ್ದವು. ಆದರೆ ನೀನಿಗ ಎಲ್ಲಿದ್ದಿಯಾ? ಸಾಂತ್ವನ ಹೇಳಿದ ನಿನ್ನ ಮಾತುಗಳೇಕೆ ಇಂದು ಕಠೋರವಾದವು? ನನ್ನ ಕಣ್ಣೀರು ಒರೇಸಿದ ಕೈಗಳೇಕೆ ಇಂದು ಕತ್ತು ಹಿಸುಕಿದವು ಹೇಳು?

ನಿನ್ನ ಅಗಲುವಿಕೆಯಿಂದ ಮನನೊಂದು ಸಾಯಬೇಕು ಎನಿಸಿತು. ಆದರೆ ಸಾಯುವುದಕ್ಕೆ ಮನಸ್ಸು ಒಪ್ಪಲಿಲ್ಲ. ಅವಳಿಗಾಗಿ ಸಾಯುವದಕ್ಕಿಂತ ಇಷ್ಟಪಡುವ ಹೆತ್ತವರಿಗಾಗಿ ಬದುಕು. ನಿನ್ನನ್ನು ತಿರಸ್ಕರಿಸಲು ಕಾರಣವಾದ ದುಡ್ಡು, ಅಂತಸ್ಥನ್ನುಪಡೆದುಕೋ ಆಗಲಾದರು ನಿನ್ನ ಪ್ರೀತಿಯ ಅರಿವಾಗಬಹುದು ಎಂದು ಆತ್ಮ ಪ್ರಜ್ಞೆಯ ಜ್ಯೋತಿ ಬೆಳಗಿಸಿತು. ಅಲ್ಲಿಯವರೆಗೂ ಕೇವಲ ನೀ ಕೊಡುವ ಪ್ರೇಮ ಪತ್ರಗಳನ್ನು ಓದುತ್ತ ಅದೇ ಜೀವನ ಎಂದು ನಂಬಿದ್ದ ನಾನು ನಿನ್ನ ನೆನಪುಗಳನ್ನು ಒಂದು ಮೂಲೆಯಲ್ಲಿ ಮರೆಮಾಚಿ ನಿದರ್ಿಷ್ಟ ಗುರಿ ಎಡೆಗೆ ಪಯಣ ಬೆಳೇಸಿದೆ. ಎತ್ತಿಟ್ಟ ಪಠ್ಯ ಪುಸ್ತಕದ ಧೂಲು ಜಾಡಿಸಿ ಕಷ್ಟಪಟ್ಟು ಓದಿದೆ ಪರಿಣಾಮ ಪದವಿಯಲ್ಲಿ 80% ರಷ್ಟು ಅಂಕಗಳು ಬಂದವು.

ಅಲ್ಲಿಯವರೆಗೂ ಡಿಗ್ರಿ ಮುಗಿದರೆ ಸಾಕು ಓದಿಗೆ ವಿಧಾಯ ಹೇಳುವೆ ಎನ್ನುತ್ತಿದ್ದ ನಾನುನಾಲ್ಕುಜನ ನನ್ನ ಗುರುತಿಸುವಂತಾಗಬೇಕು ಅದನ್ನು ನೀನು ನೋಡಬೇಕು ನನ್ನ ನಿಜಾವಾದ ಅಂತಸ್ತಿನ ಅರಿವು ನಿನಗಾಗಬೇಕು. ಎನ್ನುವ ಬಯಕೆಯಿಂದ ಎಂ ಪತ್ರಿಕೋದ್ಯಮಕ್ಕೆ ಕಾಲಿಟ್ಟೆ ಇನ್ನೇನು ಕೆಲವೆ ದಿನಗಳಲ್ಲಿ ಪದವಿ ಮುಗಿಸಿ ಹೋರ ನಡೆಯುವ ನನಗೆ ಸಾಧನೆಯ ದಾರಿ ನಿಚ್ಚಳವಾಗಿ ಕಾಣುತ್ತಿದೆ. ವಿಪಯರ್ಾಸ ಹೇಗಿದೆ ನೋಡು ನೀನು ಬೇಡವೆಂದು ಬಿಸಾಕಿದ ಕೈ ಗಡಿಯಾರ ಇಂದು ನನ್ನ ಭವಿಷ್ಯದ ಸಮಯವನ್ನೆ ಬದಲು ಮಾಡಿತು.

ಎಲ್ಲರಂತೆ ಪ್ರೀತಿಸಿ ಮೋಸಹೋದ ಮೇಲೆ ನಂತರ ಪ್ರೀತಿಸಿದವಳ ಮೇಲೆ ಬರುವಂತಹ ಮತ್ಸರ ನನಗು ಬಂದಿತು. ಆದರೆ ಮತ್ಸರ ಛಲವಾಗಿ, ಜೀವನದ ಗುರಿಯಾಗಿ ಬದಲಾಗಿ ನನ್ನ ಭವಿಷ್ಯದ ಸುವರ್ಣಸೌಧ ನಿಮರ್ಾಣಕ್ಕೆ ನೆರವಾದಾಗ ನಿನ್ನ ಮೇಲೆ ದ್ವೇಶ ಬರುವ ಬದಲು ಗೌರವದ ಭಾವನೆ ಮೂಡುತ್ತಿದೆ. ನಿನ್ನ ಪ್ರೀತಿಯಲ್ಲಿ ಒಂದು ವೇಳೆ ನಾನು ಗೆದ್ದಿದ್ದರೆ ಬರೀ ಜೀವನವನ್ನು ಮಾತ್ರ ಗೆಲ್ಲುತ್ತಿದ್ದೆ. ಆದರೆ ನಿನ್ನ ಪ್ರೀತಿಯಲ್ಲಿ ಸೋತಿದ್ದಕ್ಕೆ ಜಗತ್ತನ್ನೆ ಗೆಲ್ಲುವಶಕ್ತಿ ಇಂದು ನನ್ನಲ್ಲಿ ನಿಮರ್ಾಣವಾಗಿದೆ ಅದಕ್ಕೆ ಮನಸ್ಸು ಬಿಟ್ಟು ಹೋದವಳಿಗೊಂದು ಪುಟ್ಟ ಥ್ಯಾಂಕ್ಸ್ ಹೇಳೂ ಎನ್ನುತಿದೆ.

ನೆನಪುಗಳ ಹಾದಿಯಲ್ಲಿ ನಾನು ಇಂದು ಬಹುದೂರ ಸಾಗಿ ಬಂದಿದ್ದೆನೆ. ಅಲ್ಲಿ ಅಸ್ಪಷ್ಟವಾದ ಹೆಜ್ಜೆಗುರುತುಗಳು ಮಾತ್ರ ವುಳಿದಿವೆ. ನನ್ನ ಜೀವನದ ಗತಿ ಬದಾಲಾದ ರೀತಿ ನೋಡಿ ನನ್ನ ಅಂತಸ್ತು ಎನೆಂದು ನಿನಗೆ ಅರ್ಥವಾಗುತ್ತದೆ ಅಲ್ವಾ? ನನ್ನ ಬದುಕು ಬದಲಿಸಿದ ನಿನಗೆ ನಾನು ಕೃತಜ್ಞನಾಗಿರುತ್ತೇನೆ. ಥ್ಯಾಂಕ್ಸ್.

No comments:

Post a Comment

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...