Sunday, June 13, 2010

ಬದುಕು ಬದಲಿಸಿ ಪ್ಲೀಸ್

ನಾನು ಇದನ್ನು ಬರೆದು ಮುಗಿಸುವ ಹೊತ್ತಿಗೆ ನಾನೇ ಸಂಪೂರ್ಣವಾಗಿ ಕಣ್ಣಿರಾಗಿಬಿಟ್ಟಿದ್ದೆ. ಮೂಡಿದ ಅಕ್ಷರಗಳೆಲ್ಲ ಮಂಜಾಗಿ ಕಾಣುತ್ತಿದ್ದವು. ಕಣ್ಣೊರೆಸಿಕೊಂಡು ನೋಡಿದಾಗ ನೆನಪುಗಳೆಲ್ಲ ಹಾಳೇಯಲ್ಲಿ ಅಚ್ಚಾಗಿ ಬಿಟ್ಟಿದ್ದವು. ಮನಸಿನ ಭಾರವಾದ ಭಾವನೆಗಳನ್ನು ಇಳಿಸಿಕೊಳ್ಳಲು ನಾನು ಬರವಣಿಗೆಯ ಮೊರೆ ಹೋಗಿದ್ದೆ.

ನನ್ನಷ್ಟಕ್ಕೆ ನಾನು ಹಾಡಿಕೊಳ್ಳುತ್ತ ಫುಟ್ಪಾತ ಮೆಲೆ ಹೋಗುತ್ತಿದ್ದೆ. ಹುಚ್ಚು ಭಾವನೆಗಳಿಗೆ ಪದಗಳನ್ನು ಕೊಡುತ್ತಿದ್ದೆ. ನನ್ನ ಕಣ್ಣುಗಳು ನನಗೆ ಹೇಳದೆ ಅರೆಬರೆ ನೆರಳು ನೀಡುತ್ತಿದ್ದ ಮರದ ಕೆಳಗೆ ಕುಳಿತು ಹಾಲುಣಿಸುತ್ತಿದ್ದ ತಾಯಿಯ ಎಡೆಗೆ ಹೋಗಿದ್ದವು. ಪ್ರಪಂಚ ಎಂದರೇನು ಎಂದು ತಿಳಿಯದ ಮಗು ಅಮ್ಮನ ಮಡಿಲಲ್ಲಿ ಬೆಚ್ಚನೆ ಮಲಗಿತ್ತು. ಇನ್ನೇನು ನನ್ನ ದಾರಿ ನಾನು ಹಿಡಿಯಬೇಕುಎಂದುಕೊಂಡಾಗ ನನ್ನೇದುರಿಗೆ ನಡೆದ ಘಟನೆ ಇಂದು ನನ್ನನ್ನು ಹಾಳು ಸಮಾಜದ ಮೇಲೆ ಜಿಗುಪ್ಸೆ ಮೂಡಿಸಿತು.

ಹಾಲುಣಿಸುತ್ತ ಕುಳಿತ ತಾಯಿಯ ಹತ್ತಿರ ಬಂದ ವ್ಯಕ್ತಿ ಏನೋ ಸನ್ನೆ ಮಾಡಿ ಕೈ ಹಿಡಿದು ಎಳೆದುಕೊಂಡು ಹೋಗಲು ಮುಂದಾದ. ಆಗ ತಾಯಿ ಹಾಲು ಕುಡಿಯುತ್ತಿದ್ದ ಹಸುಳೆಯನ್ನು ಎದೆಯಿಂದ ಕಿತ್ತಿ ರಸ್ತೆಬದಿಯಲ್ಲಿ ಮಲಗಿಸಿ ಅಮಾಯಕಳಾಗಿ ಒಳ ನಡೆದಳು. ಏನು ಅರಿಯದ ಕಂದಮ್ಮ ಮೊದಲ ಬಾರಿಗೆ ಸಮಾಜದ ದೌರ್ಜನ್ಯ ಎದುರಿಸಬೇಕಾಯಿತು. ಇದು ಎಂತಹ ವಿಪಯರ್ಾಸ ಅಲ್ಲವೆ?
ರಸ್ತೆ ಬದಿಯಲ್ಲಿ ಮಲಗಿದ ಮಗುವಿನ ಆಕ್ರಂದನ ಯಾಂತ್ರಕೃತ ಸಮಾಜದ ಸದ್ದುಗದ್ದಲದಲ್ಲಿ ಕೇಳದೆ ಹೋಗುತ್ತಿತ್ತು. ಕೇವಲ ಒಬ್ಬ ಹುಡುಗಿಯ ಕೈಯಿಂದ ಪುಸ್ತಕ ಜಾರಿದರೆ ಎತ್ತಿಕೊಡಲು ಹತ್ತು ಜನ ಬರುವಂತಹ ನಮ್ಮ ವ್ಯವಸ್ಥೆ ರಸ್ತೆ ಪಕ್ಕದಲ್ಲಿ ರೋಧಿಸುತ್ತಿದ್ದ ಮಗುವನ್ನು ನೋಡಿ ಕಣ್ಣಿದ್ದು ಕುರುಡಾಯಿತು. ಸ್ವಲ್ಪ ಸಮಯದ ಬಳಿಕ ನಾನು ತಡೆಯಲಾರದೆ ಮಗುವನ್ನು ಎತ್ತಿ ಕೊಳ್ಳಲು ಮುಂದಾದೆ. ಆದರೆ ಅಲ್ಲಿದ್ದವರು ಮಗುವನ್ನು ಮುಟ್ಟಬ್ಯಾಡ್ರಿ ಅದು ಸೂಳೆಮಗು ಎಂದು ಹೇಳಿದಾಗ ಹಾಳು ಸಮಾಜದ ಕರಾಳ ಮುಖ ಘೊಚರಿಸಿದಂತಾಯಿತು. ಹೆಣ್ಣಿಗೆ ವೆಶ್ಯೆ ಪಟ್ಟಕಟ್ಟುವ ಗಂಡುತಾನೆ ಹಾಳು ಸ್ಥಿತಿಗೆ ಕಾರಣ ಎಂಬುದನ್ನು ಮುಚ್ಚಿ ಹಾಕುತ್ತಿರುವುದು ಹೇಸಿಗೆ ತರುತ್ತಿದೆ. ಮಹಿಳೆಯರಿಗೆ ಮೀಸಲಾತಿ ಕೊಡಿ ಎಂದು ಬೊಬ್ಬೆ ಹಾಕುವ ಮಹಿಳಾ ಮಣಿಗಳಿಗೆ ಇವರ ಸ್ಥಿತಿ ಅರ್ಥವಾಗುವದಿಲ್ಲವೆ? ಒಬ್ಬ ಮಂತ್ರಿ ಮಾನಬಂಗ ಮಾಡಿದನೆಂಬ ವಿಷಯವನ್ನಿಟ್ಟುಕೊಂಡು ದೇಶಾದ್ಯಂತ ಕೆಂಪು ಬಾವುಟ ಹಾರಿಸುವ ಇವರಿಗೆ ಹೆಣ್ಣಿನ ಸಂಕಟ ಅರ್ಥವಾಗುವದಿಲ್ಲವೇ? ಇಂದು ಎಲ್ಲರ ದೃಷ್ಟಿಯಲ್ಲಿ ಕೇವಲ ಎನಿಸಿಕೊಂಡ ಇವರ ಮಕ್ಕಳು ನಾಳೆ ಸಮಾಜಘಾತುಕ ಶಕ್ತಿಯಾಗಿ ಬೆಳೆಯುವದಿಲ್ಲವೇ?

ಮೀಸಲಾತಿಯ ಮಸೂದೆ ದುಡ್ಡಿನ ರಾಜಕಾರಣದಲ್ಲಿ ತೋರಿಕೆಯ ಹೋರಾಟವೆಂಬ ಹಗಲು ವೇಷ ದರಿಸಿ ಡೊಂಬರಾಟವಾಡುವ ನಮ್ಮ ಸಮಾಜ ಇನ್ನಾದರೂ ಕಣ್ತೆರದು ನೋಡಲಿ. ವೇಶ್ಯೆಯರೆಂದು ಕಡೆಗಣಿಸುವ ಬದಲು ಮೃತ್ಯುಕೂಪದಿಂದ ಬಿಡಿಸಿ ಹೊಸಜೀವನವನ್ನು ಕಲ್ಪಿಸಿಕೊಡಲಿ. ನೀವಾದರೂ ನಿಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡು ಅವರನ್ನು ಕೂಡಾ ಮಾನವರಂತೆ ಕಾಣ್ತಿರಲ್ಲಾ...........

No comments:

Post a Comment

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...