ಎಡವಿ ಬೀಳುವಾಗ ಕೈಹಿಡಿದು
ನಡೆಸಿದವಳು ನೀನೆ
ಸುರಿವ ಹನಿಗಳನೋರೆಸಿ ಸಾಂತ್ವನ
ಇತ್ತವಳು ನೀನೆ
ಬಳವಿರದ ಮನಸಿನಲಿ
ಛಲ ತುಂಬಿದವಳು ನೀನೆ
ಹಸಿದು ಬಂದಾಗ ಚಂದದಿ
ಕಲೆಸಿ ಕೈತುತ್ತು ಕೊಟ್ಟವಳು ನೀನೆ
ಸಾಧಿಸುವ ಚಲದೊಂದಿಗೆ ಹೊರಟಾಗ
ಹಣೆಗೆ ಮುತ್ತನಿಟ್ಟವಳು ನೀನೆ
ಸಾಧಿಸಿ ಬರುವವನ ದಾರಿ ಕಾಯುತ್ತ
ನಿರೀಕ್ಷೆಯ ದೀಪ ಉರಿಸುತ್ತಿರುವವಳು ನೀನೇ
ಎಲ್ಲಕ್ಕೂ ಮಿಗಿಲಾಗಿ ನನ್ನ ಮನದ ತುಂಬ
ನೀನೆ ಬರೀ ನೀನೆ
super ultimate...........
ReplyDelete