
ಇ ಹುಚ್ಚು ಮನಸ್ಸಿಗೆ ಅಷ್ಟೇ ಬೇಕಿತ್ತು, ಆ ಒಂದ್ಉ ನಗುವಿನ ಮೈಥುನಕ್ಕೆ ಭಾವನೆಗಳ ಗರ್ಭದಲ್ಲಿ ಕನಸ್ಸುಗಳು ಮೂಡತೊಡಗಿದವು.ಭ್ರೂನವಸ್ಥೆಯಿಂದ ಕನಸುಗಳು ಪ್ರೀತಿಯ ಮಗುವಾಗಿ ಮುಂದೆ ನನ್ನ ಜೋತೆಯಾಗಿರುತ್ತವೆ ಎಂದುಕೊಂಡೆ.ನನ್ನ ನಂಬಿಕೆಯ ತೇರು ಎಳೆಯುತ್ತ ಮುಂದೆ ಸಾಗಿದ ನನಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಎನ್ನುವಂತ ಒಂದು ಪುಟ್ಟ ಸುಳಿವು ಸಿಗಲಿಲ್ಲ.ಮನದಲ್ಲಿ ಕಟ್ಟಿಕೊಂಡಿದ್ದ ಕನಸುಗಳು ಪಲ್ಲವಿಸುವ ಮೊದಲೇ ನೀನು ಅಪಸ್ವರದ ಶ್ರುತಿ ಹಾಡಿಬಿತ್ತೆ.yes thats exctly my badluck.
ಇಂದು ಮೊದಲ ಮುಂಗಾರು ಮಳೆಯi ಹನಿ ನನ್ನ ಮುಖಕ್ಕೆ ತಾಗುತ್ತಿದ್ದಂತೆ ನಿನ್ನ ನೆನಪುಗಳ ಹಳೆಯ ರಾಗದ ವಿರಹದ ಆಲಾಪನೆ ಶುರುವಾಯಿತು.ಆಗಸದಿಂದ ಬೀಳುವ ಮಳೆಯ ಹನಿಗಳ ಮಧ್ಯದಲ್ಲಿ ನನ್ನ ಕಣ್ಣ ಹನಿಗಳು ಹಾಗೆ ಮಾಯವಾದವು.yes this is ಲೈಫ್
ಸುರಿವಾ ಮಳೆಯಲಿ ತಿಳಿಯದ ಹಾಗೆ
ಮರೆಸುವಾ ಕಂಬನಿ ಬಿಂದು
ನೆನೆದ ಕೆನ್ನೆಯ ಗಮನಿಸಿದೊರು
ಭ್ರಮಿಸಲಿ ಮಳೆ ಹನಿ ಎಂದು
ಹೀಗೆಯೇ ಸರಿಯಲು ಕಾರ್ಮುಗಿಲು
ಹಿಂದೆಯೇ ಕಾದಿದೆ ಹೊಂಬಿಸಿಲು
ಜೀವನದ ಪರಮ ಸತ್ಯವೆಂದರೆ ಇದೆ ಆಲ್ವಾ?
ನೆನಪಿನ ಈಗೆಯೇ ನಾವಿಕ ಪಾರ್ಥ