Tuesday, November 29, 2011

ಮಳೆಯ ಹನಿಗಳ ಮಧ್ಯೆ ಮರೆಯಾದ ಕಣ್ಣ ಹನಿಗಳು

ಮತ್ತೆ ಎಂದಿನಂತೆ ಇಂದು ಕೂಡ ಮನದಲ್ಲಿ ಮೃದಂಗ ಮಾರ್ಧನಿಸುತ್ತಿದೆ. ಅದಕ್ಕೂ ಒಂದು ಅದ್ಭುತವಾದ ಕಾರಣವಿರಲೇ ಬೇಕಲ್ಲ ಆಲ್ವಾ? ಹೌದು ಮೊದಲ ಮುಂಗಾರಿನ ಪ್ರಥಮ ಹನಿಗಳು ಒಂದೊಂದಾಗಿ ದರೆಗಿಳಿದು ಸಿಂಚನ ಮಾಡುತ್ತಿವೆ. ಅದೇ ಸಮಯಕ್ಕೆ ಸರಿಯಾಗಿ ನೀನು, ಜಡಿ ಮಳೆಯ ಸೋನೆಯಲಿ ಹುಡುಕಿ ಬಂದು ಮುಖಕ್ಕೆ ಮುತ್ತಿಡುತ್ತಿದ್ದ ಹನಿಗಳ ಆ ಮೃಧು ಸ್ಪರ್ಶಕ್ಕೆ ಮದುರವಾಗಿ ಕರಗುತ್ತಿದ್ದೆ.ಮಳೆಯ ಹನಿಗಳಿಗೆ ಸ್ಪರ್ಧೆ ಒಡ್ಡುವ ಹಾಗೆ ಮುಂಗುರುಳುಗಳು ಮುಂದೆ ಬರುತ್ತಿವೆ.ಬೇಡವೆಂದು ನೀ ಬದಿಗೊತ್ತಿದರು ರಚ್ಚೆ ಬಿಡದ ಮಗುವಿನ ಹಾಗೆ ಕೆನ್ನೆಕಚ್ಚಿತ್ತಿರುವಾಗ,ಹುಸಿ ಮುನಿಸು ತೋರುತ್ತ ನನ್ನೆದುರು ನೀನು ನಡೆದು ಬರುತ್ತಿದ್ದ ನಿನ್ನ ನೆನಪುಗಳು ಮತ್ತೆ ಮತ್ತೆ ಕೆನಕಿದಾಗಲೇ ಮನದ ಮೃದಂಗಕ್ಕೆ ಚಾಲನೆ ಸಿಗುವುದು.ಅಂದು ಮಣ್ಣಿನ ವಾಸನೆಯಲ್ಲಿ ಮನಸ್ಸು ಪುಳಕಗೊಂಡಿತ್ತು.ಅಂತಾದರ ನಡುವೆಯೇ ಆ ನಿನ್ನ ಸಣ್ಣ ನಗು ಪುಳಕಗೊಂಡ ಮನದಲ್ಲಿ ತನ್ನ ಜಲಕ್ಕು ತೋರಿಸಿದ್ದು.ಆದ್ರೆ ಅಂದಿನ ನಗು ಇಂದು ಇಲ್ಲ ಅಳುವ ಮನ ಮಾತ್ರ ನಿನ್ನ ನೆನಪಿಸಿಕೊಲ್ಲುತ್ತದೆ
ಇ ಹುಚ್ಚು ಮನಸ್ಸಿಗೆ ಅಷ್ಟೇ ಬೇಕಿತ್ತು, ಆ ಒಂದ್ಉ ನಗುವಿನ ಮೈಥುನಕ್ಕೆ ಭಾವನೆಗಳ ಗರ್ಭದಲ್ಲಿ ಕನಸ್ಸುಗಳು ಮೂಡತೊಡಗಿದವು.ಭ್ರೂನವಸ್ಥೆಯಿಂದ ಕನಸುಗಳು ಪ್ರೀತಿಯ ಮಗುವಾಗಿ ಮುಂದೆ ನನ್ನ ಜೋತೆಯಾಗಿರುತ್ತವೆ ಎಂದುಕೊಂಡೆ.ನನ್ನ ನಂಬಿಕೆಯ ತೇರು ಎಳೆಯುತ್ತ ಮುಂದೆ ಸಾಗಿದ ನನಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಎನ್ನುವಂತ ಒಂದು ಪುಟ್ಟ ಸುಳಿವು ಸಿಗಲಿಲ್ಲ.ಮನದಲ್ಲಿ ಕಟ್ಟಿಕೊಂಡಿದ್ದ ಕನಸುಗಳು ಪಲ್ಲವಿಸುವ ಮೊದಲೇ ನೀನು ಅಪಸ್ವರದ ಶ್ರುತಿ ಹಾಡಿಬಿತ್ತೆ.yes thats exctly my badluck.


ಇಂದು ಮೊದಲ ಮುಂಗಾರು ಮಳೆಯi ಹನಿ ನನ್ನ ಮುಖಕ್ಕೆ ತಾಗುತ್ತಿದ್ದಂತೆ ನಿನ್ನ ನೆನಪುಗಳ ಹಳೆಯ ರಾಗದ ವಿರಹದ ಆಲಾಪನೆ ಶುರುವಾಯಿತು.ಆಗಸದಿಂದ ಬೀಳುವ ಮಳೆಯ ಹನಿಗಳ ಮಧ್ಯದಲ್ಲಿ ನನ್ನ ಕಣ್ಣ ಹನಿಗಳು ಹಾಗೆ ಮಾಯವಾದವು.yes this is ಲೈಫ್



ಸುರಿವಾ ಮಳೆಯಲಿ ತಿಳಿಯದ ಹಾಗೆ



ಮರೆಸುವಾ ಕಂಬನಿ ಬಿಂದು



ನೆನೆದ ಕೆನ್ನೆಯ ಗಮನಿಸಿದೊರು



ಭ್ರಮಿಸಲಿ ಮಳೆ ಹನಿ ಎಂದು



ಹೀಗೆಯೇ ಸರಿಯಲು ಕಾರ್ಮುಗಿಲು



ಹಿಂದೆಯೇ ಕಾದಿದೆ ಹೊಂಬಿಸಿಲು



ಜೀವನದ ಪರಮ ಸತ್ಯವೆಂದರೆ ಇದೆ ಆಲ್ವಾ?




ನೆನಪಿನ ಈಗೆಯೇ ನಾವಿಕ ಪಾರ್ಥ

No comments:

Post a Comment

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...