
ಒಂದಾನೊಂದು ಕಾಲದಲ್ಲಿ ಆಟೋರಾಜನಾಗಿ ಮೆರೆದು
ನಲಿವಾ ಗುಲಾಬಿ ಹೂವೆ ಹಾಡಿನ ಮೂಲಕ
ಪ್ರೇಮಿಗಳ ಮನದಾಳದಲ್ಲಿಳಿದು
ಕನ್ನಡದ ಮುತ್ತುರಾಜನನ್ನು
ಒಂದು ಮುತ್ತಿನ ಕತೆಯಲ್ಲಿ ಎತ್ತಿ ಹಿಡಿದು
ನ್ಯಾಯ ಎಲ್ಲಿದೆ ?ಎಂದು ಕೇಳಿದವರಿಗೆ
ನೋಡಿ ಸ್ವಾಮೀ ನಾವಿರೋದೆ ಹೀಗೆ ಎಂದು ನುಡಿದು
ಬಾಳಿನ ಅಂತಿಮ ಘಟ್ಟದವರೆಗೂ
ಮಿಂಚಿನ ಓಟದಿ ಮಿಂಚಿದ ದ್ರುವ ತಾರೆ ನೀನು
ನಿನ್ನ ಅಗಲುವಿಕೆಯ ನೋವಿನಲ್ಲಿಯು
ನಿನ್ನ ಹುಟ್ಟು ಹಬ್ಬವನ್ನು ಆಚರಿಸುವ ಅನಿವಾರ್ಯತೆ
ಮತ್ತೊಮ್ಮೆ ಹುಟ್ಟಿ ಬಾ ಎನ್ನುತ್ತಿದೆ ಕನ್ನಡದ ಜನತೆ
ನಿನ್ನ ಪ್ರೀತಿಯ ಅಭಿಮಾನಿ
No comments:
Post a Comment