Tuesday, November 8, 2011

ಮತ್ತೆ ನಿನ್ನಾಷೆಯಂತೆ ಬರುತ್ತೇನೆ

ಡಿಯರ್ ಸೋನು ,
ಇಂದು ಮನಸ್ಸು ಅಂದಿನಂತೆ ಅಳುತ್ತಿಲ್ಲ.ಮೊದಲಿದ್ದ ಸ್ಥಿತಿ ಇಂದು ತಿಳಿಯಾಗಿದೆ.ಹಳೆಯ ಘಟನೆಯನ್ನು ಸಹಿಸಿಕೊಂಡು ಕಣ್ಣಿರು controll ಗೆ ಬಂದಿದೆ.ಸಧ್ಯಕ್ಕಂತೂ ಎಲ್ಲ ಸ್ಥಿತಿಗಳನ್ನು ಅರಗಿಸಿಕೊಳ್ಳುವ ಶಕ್ತಿ ನನ್ನಲ್ಲಿ ಬಂದಿದೆ.

ಅಂದು ಸುಮ್ಮನೆ ಹೊರಟವನ ಬೆನ್ನು ತಟ್ಟಿ ಸ್ನೇಹದ ಸಂದೇಶ ರವಾನಿಸಿದೆ .ಮೊದಲೇ ಖಾಲಿಯಾಗಿದ್ದ ಮನಸ್ಸು, ನಿನ್ನ ಸ್ನೇಹದ ತರಂಗಗಳಿಂದ ಕಂಪಿಸತೊಡಗಿತು.ಪ್ರಪಂಚದಲ್ಲಿ ನಮ್ಮಂತ ಸ್ನೇಹಿತರು ಯಾರು ಇಲ್ಲ ಎನ್ನುವ ಮಟ್ಟಕ್ಕೆ ಬೆಳೆದ ಆ ಸ್ನೇಹ ಪ್ರೀತಿಯ ರೂಪಕ್ಕೆ ತಿರುಗುವುದಕ್ಕೆ ಬಹಳ ಸಮಯ ಬೇಕಾಗಲಿಲ್ಲ.ಪವಿತ್ರ ಪ್ರೀತಿಗೆ ಸೋಲೇ ಇಲ್ಲ ಎನ್ನುವ ಮಾತನ್ನು ನಂಬಿದ್ದ ನಾನು ನಿನ್ನಲ್ಲಿಯೇ ನನ್ನ ಭವಿಷ್ಯದ ಚಿತ್ರಣ ಹುಡುಕಲು ಶುರುವಿತ್ತುಕೊಂಡೆ.ಅದಕ್ಕೆ ಕಾರಣವು ಇತ್ತು ಸತ್ತ ಕನಸುಗಳಿಗೆ ಮತ್ತೆ ಚೇತನ ತುಂಬುವ ಶಕ್ತಿ ನಿನ್ನಲ್ಲಿತ್ತು.ಅದೇ ಇಂದು ನನ್ನ ಜೀವನವನ್ನು ಒಂದು ultimate ಆಘಾತಕ್ಕೆ ಒಡ್ಡುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ.


ನೀನು ನುಡಿಯುತ್ತಿದ್ದ ಭರವಸೆಯ ಮಾತುಗಳು ಸುರಿಸುತ್ತಿದ್ದ sms ನ ಮಳೆ ದಿನ ದಿನವು ನನ್ನಲ್ಲಿ ಒಂದು ಹೊಸ ಕನಸ್ಸಿಗೆ ಜನ್ಮ ನೀವುತ್ತಿದ್ದವು. ಕಾಲಾ ಕಳೆದಂತೆ ಧಾರಾಕಾರವಾಗಿ ಸುರಿಯುತ್ತಿದ್ದ sms ಮಳೆ ನಿಧಾನವಾಗಿ ಜಡಿ ಮಳೆಯಾಗಿ ಪರಿವರ್ತನೆಯಾಯಿತು.ಮಾತುಗಳಲ್ಲಿನ ಪ್ರೀತಿ ಮಾಯವಾಗುತ್ತಾ ಸಾಗಿತು.ಕಾರಣ ಹುಡುಕುತ್ತ ಹೊರಟರೆ ನಾನೊಬ್ಬ ನಿರುದ್ಯೋಗಿ,ಬೇಜವಾಬ್ದಾರಿ ವ್ಯಕ್ತಿ ಎನ್ನುವುದು.ಗೆಳತಿ ನಿನ್ನ ದೃಷ್ಟಿ ಸರಿಯಾಗಿದೆ.ಹೌದು ಜವಾಬ್ದಾರಿ ಇಲ್ಲದ ವ್ಯಕ್ತಿ ನಿನ್ನನ್ನು ಸಾಕಲು ಸಾಧ್ಯವಿಲ್ಲ .ಬದುಕಲ್ಲಿ ಅಮ್ಮನ ನಂತರದ ಸ್ಥಾನ ನಿನಗೆ ನೀಡಿರುವೆ.ಅಂದಮೇಲೆ ಸಾಧನೆಯ ಮಾತು ಅಸಾಧ್ಯವೇನಲ್ಲ .ಮನಸ್ಸಿನ ಹೊಸ್ತಿಲ ಮೇಲೆ ನಿರೀಕ್ಷೆಯ ಡೀಪ್ ಉರಿಸು ಸ್ವಂತ ದುಡಿಮೆಯಲ್ಲಿ ಬಂದು ನಿನ್ನೆದುರು ನಿಲ್ಲುತ್ತೇನೆ


ನಿನ್ನ ಪ್ರೀತಿಯ ನೆನಪಿನ ದೋಣಿಯ ನಾವಿಕ





No comments:

Post a Comment

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...