Friday, December 30, 2011

ಪ್ರೀತಿಗೆ ಅರ್ಥ ನೀಡುವ `ಮತ್ತೇ ಬನ್ನಿ ಪ್ರೀತ್ಸೋಣ'



ಹೆಸರೇ ಸೂಚಿಸುವಂತೆ `ಮತ್ತೇ ಬನ್ನಿ ಪ್ರೀತ್ಸೋಣ' ಚಿತ್ರ ಅದ್ಯಾಕೋ ಎರಡೆರಡು ಬಾರಿ ಬಿಡುಗಡೆ0ು ಭಗ್ಯ ಪಡೆದರು ಸಹ ಪ್ರೇಕ್ಷಕ ಪ್ರಭುಗಳ ಮನಮುಟ್ಟಲು ವಿಫಲವಾಗಿದೆ. ಲಾಂಗು,ಮಚ್ಚಿನ ಚಿತ್ರಗಳಿಂದ ಹಾವಳಿಯಿಂದ ಪ್ರೇಕ್ಷಕರು ಅದೇಕೋ ಸದಭಿರುಚಿ0ು ಚಿತ್ರವನ್ನು ಮರೆ0ುುತ್ತಿದ್ದಾರೆ ಎನಿಸುತ್ತಿದೆ. ಮತ್ತೆ ಬನ್ನಿ ಪ್ರೀತ್ಸೋಣ ಇದಕ್ಕೆ ಉತ್ತಮ ಉದಾಹರಣೆ ಎಂದರು ತಪ್ಪಾಗಲಾರದು.ಪ್ರೀತಿ, ಪ್ರೇಮದ ಅಂಶಗಳನ್ನು ದಾಂಪತ್ಯ ಜೀವನದ ಜೊತೆ ಮೇಳೈಸಿ ನಿಮರ್ಿಸಿದ ಚಿತ್ರ ಇದಾಗಿದ್ದು, ಇಲ್ಲಿ ಪತಿ ಪತ್ನಿ0ು ನಡುವೇ ನಂಬಿಕೆ ಇರಬೇಕು. ಇದ್ದಾಗ ಮಾತ್ರ ಪ್ರತಿ ದಿನವು ಪ್ರೇಮಿಗಳ ದಿನವಾಗುತ್ತದೆ. ಎಂಬುದನ್ನು ಸೊಗಸಾಗಿ ತೋರಿಸಲಾಗಿದೆ.ಅತ್ಯುತ್ತಮವಾದ ಕಥಾವಸ್ತುವನ್ನು ಹೊಂದಿರುವ ಸಾಂಸಾರಿಕ ಚಿತ್ರ ಎಂದು ಹೇಳಬಹುದು. ಹೆಂಡತಿ0ುನ್ನು ಅನುಮಾನಿಸುವ ಗಂಡಂದಿರು ನೋಡಲೆಬೇಕಾದ ಚಿತ್ರ ಎಂದರು ಅತಿಶಯೋಕ್ತಿ ಅನಿಸದು.ಪ್ರೇಕ್ಷಕರನ್ನು ತನ್ನತ್ತ ಕೇಂದ್ರೀಕರಿಸಿಕೊಳ್ಳುವ ದೃಷ್ಠಿಯಿಂದ ಚಿತ್ರದ ಆರಂಭವೇ ಹಾಡಿನ ಮೂಲಕವಾಗುತ್ತದೆ. ಹಾಡಿನ ನಡುವೆ ಮೂಡಿ ಬರುವ ಸನ್ನಿವೇಶಗಳು ಪ್ರೀತಿಸುವ ಎರಡು ಜೋಡಿಗಳ ಮದ್ಯದಲ್ಲಿ ಎದುರಾಗುವ ಅನುಮಾನವೆಂಬ ಭೂತದ ಪರಿಚ0ು ಮಾಡಿಸುತ್ತದೆ. ಇದರಿಂದಾಗುವ ಮನಸ್ಥಾಪದ ದರ್ಶನವನ್ನು ಮಾಡಿಸುತ್ತದೆ. ಈ ಸನ್ನಿವೇಶಗಳು ಮೊದಲಿಗೆ ಗಲಿಬಿಲಿಗೊಳಿಸಿದರೆ ನಂತರದಲ್ಲಿ ಕಥೆ ಹೆಣೆ0ುಲು ಸಹಕಾರಿ ಎನಿಸುತ್ತವೆ. ಯಾವುದೋ ರಸ್ತೆ ಅಪಘಾತದಲ್ಲಿ ಕುರುಡನೊಬ್ಬನಿಗೆ ಎದುರಾಗುವ ಅನುಮಾನಿ ಪ್ರೇಮಿಗಳ ಕುರಿತು ಹಿಂದೆ ನಡೆದ ಒಂದು ಕಥೆ0ುನ್ನು ವಿವರಿಸಲು ಮುಂದಾಗುತ್ತಾನೆ. ಹೆಂಡತಿ0ು ಕಣ್ಣಲ್ಲಿ ಒಂದು ಹನಿ ನೀರು ಹಾಕಿಸದಿರುವ ಗಂಡ ಒಂದೆಡೆಯಾದರೆ, ಗಂಡನ ಪ್ರೀತಿ0ುಲ್ಲಿ ಪ್ರಪಂಚವನ್ನೇ ಮರೆ0ುುವ ಹೆಂಡತಿ ಇನ್ನೊಂದೆಡೆ. ಇಲ್ಲಿ ಕೇವಲ ಒಂದು ಅನುಮಾನ ಹೇಗೆ ಇವರಿಬ್ಬರ ಜೀವನದಲ್ಲಿ ಆಟವಾಡುತ್ತದೆ ಎಂಬುದು ಕಥೆ0ು ತಿರುಳು. ಇದೆ ಕಥೆ ಮುಂದಿನ ಚಿತ್ರಕಥೆ0ುನ್ನು ಹೆಣೆ0ುುವ ನೂಲು.ತನ್ನ ಜೀವನ ನಿರ್ವಹಣೆಗಾಗಿ ಕೆಲಸ ಹುಡುಕಿಕೊಂಡು ಸಂದರ್ಶನಕ್ಕೆ ಹಾಜರಾಗು ಕಥಾ ನಾ0ುಕಿ `ಚೇತನಾ'(ತಮನ್) ಳ ಸೌಂದ0ರ್ು ಮತ್ತು ಬುದ್ದಿವಂತಿಕೆಗೆ ಮನಸೋತ ಕಥಾನಾ0ುಕ `ಶ್ಯಾಮ್'(ಪ್ರೇಮ್) ಮೊದಲ ನೊಟದಲ್ಲೇ ಪ್ರೀತಿ0ು ಬಲೆ0ುಲ್ಲಿ ಸಿಲುಕಿಕೊಳ್ಳುತ್ತಾನೆ. ನೇರವಾಗಿ ಚೇತನಾಳ ಮನೆಗೆ ಹೋಗಿ ತನ್ನಾಶೆ0ುನ್ನು ವ್ಯಕ್ತಪಡಿಸುತ್ತಾನೆ. ಇಬ್ಬರ ವಿಚಾರ ಧಾರೆ0ುಲ್ಲೂ ಹೆಚ್ಚಿನ ಸಾಮ್ಯತೆ ರುವುದರಿಂದ ಮದುವೆಯಾಗಿ ಜೀವನ ಸುಂದರವಾಗಿ ಸಾಗುತ್ತದೆ ಎಂಬುದು ಚಿತ್ರದ ಮೊದಲರ್ಧ. ಅಲ್ಲಿಂದ ಆರಂಭವಾಗುವ ಚಿತ್ರದ ಸನ್ನೀವೇಶಗಳು ಪ್ರೇಕ್ಷಕರಲ್ಲಿ ತುಡುತವನ್ನು ಅಧಿಕಗೊಳಿಸುತ್ತವೆ. ಲಿಪ್ಟಲ್ಲಿ ಸಿಕ್ಕ ಮೋಬೈಲ್ ವಾಪಸ್ಸು ಕೊಡಲು ಹೋಗಿ ಸಿಂಚನಾ(ಸಂಜನಾ) ಳ ಬಲೆ0ುಲ್ಲಿ ಸಿಲುಕಿಕೊಳ್ಳುವ ನಾ0ುಕ ಅದರಿಂದ ಯಾವ ರೀತಿ0ು ಪರಿಪಾಟಲು ಪಡುತ್ತಾನೆ ಎಂಬುದೇ ಕಥೆ0ು ತಿರುಳು.ಸೋಸಿ0ುಲ್ ನೆಟವಕರ್ಿಂಗ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸಂಜನಾಳ ವ್ಯವಸ್ಥೆ0ುಲ್ಲಿ ಹಲವಾರು ಹುಡುಗಿ0ುರು ಭಾಗಿಯಾಗಿರುತ್ತಾರೆ. ಇಲ್ಲಿ ಪ್ರೀತಿಗೆ ಅರ್ಥವಿಲ್ಲ ಎಂದು ಹೇಳುವ ಶ್ಯಾಮ್ ನ ಅಭಿಪ್ರಾ0ುವನ್ನು ಬದಲಾಯಿಸುವ ಸವಾಲು ಹಾಕುತ್ತಾಳೆ ಅದಕ್ಕೇ ಒಪ್ಪಿದ ನಾ0ುಕನೆದುರು ಗೀತಾ ಎನ್ನುವ ಬೆಳದಿಂಗಳ ಬಾಲೆ0ು ಪಾತ್ರ ಸೃಷ್ಠಿಯಾಗುತ್ತದೆ. ಆದರೆ ಪಾತ್ರಕ್ಕು ಚೇತನಾಳ ಪಾತ್ರಕ್ಕೂ ಸಾಮ್ಯತೆ ಉಂಟಾಗಿ ನಾ0ುಕನ ಮನಸ್ಸು ಗೊಂದಲದ ಹೂಡಾಗುತ್ತದೆ. ಆದರೂ ಸಹಿತ ಹೆಂಡತಿ0ು ಮೇಲೆ ಯಾವೂದೇ ಅನುಮಾನವಾಗದ ರೀತಿ0ುಲ್ಲಿ ನಡೆದುಕೊಳ್ಳುವುದು ನಿಜಕ್ಕೂ ಅದ್ಭೂತವೆನಿಸುತ್ತದೆ.ವಿರಾಮದ ವೇಳೆಗೆ ಪ್ರೇಕ್ಷಕರಲ್ಲಿ0ುೂ ಕೂಡ ಅನುಮಾನ,ಕುತುಹಲ ಮೂಡಿಸುವಲ್ಲಿ ನಿದರ್ೇಶಕ ರವೀಂದ್ರ 0ುಶಸ್ವಿಯಾಗಿದ್ದಾರೆ.ಅದರಲ್ಲಿ0ುೂ `ಎದ್ದೇಳು ಮಂಜುನಾಥ ' ಚಿತ್ರದಲ್ಲಿ ಕುರುಡನ ಪಾತ್ರ ನಿರ್ವಹಿಸಿದ ತಬಲಾ ನಾಣಿ ಇಲ್ಲಿ0ುೂ ಕೂಡ ಕುರುಡ ಮತ್ತು ಕಥಾ ನಿರೂಪಕನ ಪಾತ್ರ ನಿರ್ವಸುವುವಂತೆ ಮಾಡಿದ ನಿದರ್ೇಶಕರ ಕಾ0ರ್ು ಶ್ಲಾಘನೀ0ು. ಪಾತ್ರಕ್ಕೆ ನ್ಯಾ0ು ಒದಗಿಸುವಂತೆ ತಬಲಾ ನಾಣಿ ಕೂಡ ಅಭಿನಯಿಸಿದ್ದಾರೆ. ತನ್ನೆಲ್ಲ ಅನುಮಾನಗಳನ್ನೂ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರೈವೇಟ್ ಡಿಟೆಕ್ಟಿವ್ ಮೊರೆ ಹೋಗುವ ನಾ0ುಕ ಅಲ್ಲಿ ತನ್ನ ಪ್ರಶ್ನೆಗಳಿ ಉತ್ತರ ಕಂಡುಕೊಳ್ಳುವ ಬಗೆ ನಿಹಕ್ಕೂ ಇನ್ನಷ್ಟು ವಿಚಿತ್ರತೆ ಸೃಷ್ಠಿಸುತ್ತದೆ. ವಾತರ್ಾವಾಚಕ ಗೌರಿಶ್ ಅಕ್ಕಿ ಪ್ರೈವೇಟ್ ಡಿಟೆಕ್ಟಿವ್ ಪಾತ್ರದಲ್ಲಿ ಸೊಗಸಾಗಿ ಅಭಿನಯಿಸಿದ್ದಾರೆ. ಸಿಂಚನಾ ವೃತ್ತಿ ಬದಲಿಸಲು ಹೊರಟ ನಾ0ುಕ ತನ್ನ ವ್ಯಕ್ತತ್ವವನ್ನೇ ಬದಲಾಯಿಸಿಕೊಳ್ಳುತ್ತಾನೆ. ವೇಶ್ಯಾವಾಟಿಕೆ ಜಾಲದಲ್ಲಿ ತನ್ನ ಹೆಂಡತಿಯೇ ಸಿಲುಕಿಕೊಂಡಿದ್ದಾಳೆಂಬುದು ಒಂದು ಕಡೆ ದೃಢವಾದರೆ ಒಂದು ಕಡೆ ಕುತುಹಲ ಮೂಡಿಸುತ್ತದೆ. ಇದೇ ಈ ಚಿತ್ರದ ಇನ್ನೋದು ಹೈಲೈಟ್.ಕೊನೆಗೂ ತನ್ನ ಮನದಲ್ಲಿದ್ದ ಅನುಮಾನ ಎಲ್ಲವನ್ನು ಹೆಂಡತಿ0ು ಎದುರು ಹೇಳಿಕೊಳ್ಳುವುದಕ್ಕೆ ಹೋದ ನಾ0ುಕನೆದರು ತನಗಿದ್ದ ಬ್ರೈನ್ ಟ್ಯೂಮರ್ ರೋಗದ ಕುರಿತು ನಾ0ುಕಿ ತಿಳಿಸಿಕೊಡುತ್ತಾಳೆ. ಅಲ್ಲಿಗೆ ಕಥೆ ಒಂದು ಹಂತಕ್ಕೆ ಬಂದು ತಲುಪುತ್ತದೆ. ಕೊನೆ0ು ಕ್ಷಣದಲ್ಲಿ ಹೆಂಡತಿ0ುುನ್ನು ಹೆಗೆ ನೋಡಿಕೊಳ್ಳುತ್ತಾನೆ ಎಂಬುದನ್ನು ವಿಕ್ಷಕರು ಚಿತ್ರಮಂದಿರದಲ್ಲಿಯೇ ನೋಡಿ ತಿಳಿ0ುಬೇಕು.ಎರಡು ಗಂಟೆಗಳ ಕಾಲ ವಿಕ್ಷರನ್ನು ಕುತುಹಲದಲ್ಲಿ ಹಿಡಿದಿಟ್ಟ ಚಿತ್ರ ಕೊನೆ ಕ್ಷಣದಲ್ಲಿ ನೊವಿನ ದಾರಿಗೆ ಎಳೆ0ುುತ್ತದೆ. ಆದರೆ ನೋವಿನಲ್ಲಿ0ುೂ ಕೂಡ ಹೆಂಡತಿ ನೋವಿಗೆ ಸ್ಪಂದಿಸುವುದು ನಿಜ ಜೀವನದಲ್ಲಿ0ುೂ ಅಳವಡಿಸಿಕೊಳ್ಳಬೇಕು ಎಂಬಂತದೆ. ಕೊನೆಗೂ ಗೀತಾ ಸಾವಿನಿಂದ ಬದುಕಿನ ಅರ್ಥ ತಿಳಿದ ಸಿಂಚನಾ ತನ್ನ ವೃತ್ತಿ ತ್ಯಜಿಸುತ್ತಾಳೆ. ಅತ್ತ ಮಡದಿ0ು ಅಗಲುವಿಕೆ0ುಲ್ಲಿ ನಾ0ುಕ ಎನಾಗುತ್ತಾನೋ ಎಂಬುದು ಪ್ರಶ್ನೆಯಾಗಿ ಉಳಿ0ುುತ್ತದೆ. ಅಲ್ಲಿ0ು ವರೆಗೂ ಕಥಾ ನಿರೂಪಕನಾಗಿದ್ದ ಕುರುಡ ತಾನು ಹೇಳಿದ ಕಥೆ0ು ನಾ0ುಕ ನನ್ನ ಕಣ್ಣಲ್ಲಿದ್ದಾನೆ ಎಂದು ಹೆಳುವ ಮೂಲಕ ಇನ್ನೊಂದು ಪ್ರಶ್ನೆ ಹುಟ್ಟು ಹಾಕುತ್ತಾನೆ.ರವಿಂದ್ರ ನಿದರ್ೇಶನ ಸೊಗಸಾಗಿದ್ದರೆ. ಮಠ ಖ್ಯಾತಿ0ು ಗುರುಪ್ರಸಾದ ಸಂಭಾಷಣೆ ಮತ್ತೆ ಮತ್ತೆ ಕೇಳಬೇಕಿನಿಸುತ್ತದೆ. ಅನೂಪ್ ಸಿಳಿನ್ ರ ಸಂಗೀತದಲ್ಲಿ ಮೂಡಿ ಬಂದ ಹಾಡುಗಳು ಸಂಗೀತ ಪ್ರೇಮಿಗಳ ಮನ ತಣಿಸುತ್ತವೆ. ಅದರಲ್ಲೂ ಅಶೋಕ್ ಕಶ್ಯಪ ರ ಛಾಯಾಗ್ರಹಣ ಮಲೆನಾಡನ್ನೆ ಮುಂದೆ ತಂದು ನಿಲ್ಲಿಸುವಂತಿದೆ. ವಿನಯಾ ಪ್ರಸಾದ್, ಶ್ರೀನಗರ ಕಿಟ್ಟಿ, ಮುಂತಾದ ಕಲಾವಿದರು ಹೀಗೆ ಬಂದು ಹಾಗೇ ಹೋದರು ಸಹ ಅದೊಂದು ಹೊಸ ಅಂಶವನ್ನು ಕಟ್ಟಿಕೊಡುತ್ತದೆ.ಒಟ್ಟಿನಲ್ಲಿ ಮನೆ ಮಂದಿ0ುಲ್ಲಾ ಕುಳಿತು ನೋಡಬಹುದಾದ ಚಿತ್ರ ಮಾತ್ರವಲ್ಲ, ಜೊತೆಗೆ ಪ್ರೀತಿಸುವುದು ಹೇಗೆ ಎಂಬುದನ್ನ ತೊರಿಸುವ ಅದ್ಭುತ ಚಿತ್ರವೆಂದೆ ಹೇಳಬಹುದು. ಪ್ರೀತಿ0ು ನಿಜವಾದ ಅರ್ಥ ತಿಳಿ0ುಬೇಕಾದರೆ ಮತ್ತೇ ಬನ್ನಿ ಪ್ರೀತ್ಸೋಣ ನೋಡಲೇಬೇಕು


ನೆನಪಿನ ದೋಣಿಯ ನಾವಿಕ ಪಾರ್ಥ

Thursday, December 29, 2011

ಅಭಿನವ ಭಾರ್ಗವನಿಗೊಂದು ನಮನ






ಅದೊಂದು ಮಿಂಚಿತ್ತು, ಎಡಗೈಯ ಕಡಗವನ್ನು ತಿರುವತ,್ತ ಸ್ವಲ್ಪ ವಾರೆ ನಡಿಗೆಯಲ್ಲಿ ಬಂದು ಆ ವ್ಯಕ್ತಿ ಸುರಿಮಳೆ ಶಯಲಿಯ ಸಂಭಾಷಣೆ ಆರಂಭಿಸಿ, ತೆರಯ ಮೇಲೆ ನಿಂತರೆ ಸಾಕು ವಿಕ್ಷಕರಿಂದ ಸಿಳ್ಳೆ, ಚಪ್ಪಾಳೆಗಳು ಮಾರ್ಧನಿಸುತ್ತಿದ್ದವು.`ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೋನೆ, ಇನ್ನೆಲ್ಲ ಜನ್ಮದಲ್ಲೂ ಹುಟ್ಟೋದು ಇಲ್ಲೇನೆ, ಪ್ರೀತ್ಸೋದು ಎಂದು ನಿಮ್ಮನ್ನೆ' ಎಂದು ಇಂದಿಗೆ ಬರೊಬ್ಬರಿ ಎರಡು ವರ್ಷಗಳ ಹಿಂದೆ ಮತ್ತೆ ಬರುತ್ತೇನೆ ಎಂದು ಹೇಳಿ ಹೋಗುವವರ ಹಾಗೆ ಸದ್ದು ಮಾಡದೆ ಎದ್ದು ಹೋದ ಮೇರು ನಟ, ಕನ್ನಡಿಗರ ಪ್ರೀತಿ0ು `ಸಾಹಸ ಸಿಂಹ' ಡಾ.ವಿಷ್ಣುವರ್ಧನ್.ಇಂದಿಗೆ ವಿಷ್ಣುವರ್ಧನ ನಮ್ಮನ್ನಗಲಿ ಸರಿಯಾಗಿ ಎರಡು ವರ್ಷ ಗತಿಸಿದವು. ಆದರೆ ಅವರ ನೆನಪುಗಳು ಮಾತ್ರ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೂಕರ್ಾಲ ಹಚ್ಚ ಹಸಿರಾಗಿದೆ. ಅವರು ನಮ್ಮನ್ನಗಲಿದರು ಕೂಡ ಅವರ ಚಿತ್ರಗಳ ಅಬಿನ0ುದ ಮೂಲಕ ನಮ್ಮ ಮನದಲ್ಲಿ ಅಜರಾಮರವಾಗಿ ನೆಲೆಗೊಂಡಿದ್ದಾರೆ. ಕನ್ನಡ ಚಲನಚಿತ್ರ ಜಗತ್ತಿಗೆ ಪದಾರ್ಪಣೆ ಮಾಡುವಾಗ `ನಾಗರ ಹಾವಾಗಿ' ಕಾಣಿಸಿಕೊಂಡಿದ್ದ ಸಂಪತ್ ಕುಮಾರ(ಅವರ ಮೊದಲ ಹೆಸರು) ತೆರೆ0ು ಮೇಲಿನ ನಟನೆ ಜೊತೆಗೆ ಜೀವನದ ಕಥೆಗೂ ಅಂತಿಮ ಪರದೆ ಎಳೆ0ುುವ ಸಮ0ುಕ್ಕೆ ಸರಿಯಾಗಿ ಕನ್ನಡಿಗರ `ಆಪ್ತರಕ್ಷಕ' ನಾಗಿ ಬಿಟ್ಟಿದ್ದರು. ಇದು ಎಷ್ಟೋಂದು ವಿಚಿತ್ರ ಅಲ್ಲವೇ?1950 ಸೆಪ್ಟಂಬರ್ 18ರಂದು ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಜನಿಸಿದ ಸಂಪತ್ಕುಮಾರ್, ಎಪ್ಪತ್ತರ ದಶಕದಲ್ಲಿ ಎಸ್.ಎಲ್.ಭೆರಪ್ಪನವರ ಕಾದಂಬರಿ ಆಧಾರಿತ `ವಂಶವೃಕ್ಷ' ಚಿತ್ರದಲ್ಲಿ ಬಾಲ ನಟನಾಗಿ ಅಂಬೆಗಾಲಿಟ್ಟವನು, ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಾ0ುಕನಾಗಿ ಮೊದಲ ಹೆಜ್ಜೆ ಇಟ್ಟಿದ್ದು ,1972 ರಲ್ಲಿ ತೆರೆ ಕಂಡ ಕನ್ನಡ ಚಿತ್ರ ರಂಗದ ಶೇಷ್ಠ ನಿದರ್ೇಶಕರ ಸಾಲಿನಲ್ಲಿ ಮೊದಲಿಗೆ ನಿಲ್ಲುವ ಪುಟ್ಟಣ್ಣ ಕಣಗಾಲ್ ನಿದರ್ೇಶನದ `ನಾಗರ ಹಾವು' ಚಿತ್ರದಲ್ಲಿ. ಈ ಚಿತ್ರದಲ್ಲಿ ರಾಮಾಚಾರಿಯಾಗಿ ಕಾಣಿಸಿಕೊಂಡ ಇವರನ್ನು ಕಣಗಾಲ್ರು ವಿಷ್ಣ್ಣುವರ್ಧನ್ ಎಂದು ಕನ್ನಡಿಗರಿಗೆ ಪರಿಚಯಿಸಿದರು.ಸರಳ ವ್ಯಕ್ತಿತ್ವದ ಸಜ್ಜನಿಕೆ0ು ಪ್ರತಿರೂಪದಂತಿದ್ದ ವಿಷ್ಣುವರ್ಧನ್ ಇತರ ನಾ0ುಕ ನಟರುಗಳಿಗೆ ಮಾದರಿಯಾಗುವಂತಹ ಸಾಧು ಸ್ವಭಾವದವರಾಗಿದ್ದರು. 200 ಕ್ಕೂ ಅಧಿಕ ಚಿತ್ರಗಳಲ್ಲಿ ನಾ0ುಕ ನಟನಾಗಿ, ಹಲವು ಚಿತ್ರಗಳಲ್ಲಿ ನಟನೆ0ು ಜೊತೆ0ುಲ್ಲಿ ಹಿನ್ನೇಲೆ ಗಾ0ುಕನಾಗಿ ಬಹುಮುಖ ಪ್ರತಿಭೆ ಮೆರೆದ ಸಕಲ ಕಲಾವಲ್ಲಭ ವಿಷ್ಣು. ಸದಾ ಕಲಾ ದೇವಿ0ುನ್ನು ಆರಾಧಿಸುತ್ತ ಬೆಳೆದ ವಿಷ್ಣುವರ್ಧನ ತಮ್ಮ ಮನೋಜ್ಞ ಅಭಿನ0ುದ ಮೂಲಕ ಕನ್ನಡಾಭಿಮಾನಿಗಳ ಮನದ ಆರಾಧ್ಯ ದೈವವಾಗಿ ಶಾಶ್ವತ ನೆಲೆ0ುೂರಿದ್ದಾರೆ.ಕನ್ನಡ ಚಲನಚಿತ್ರರಂಗದ ಅದ್ಭುತ ಜೋಡಿಯಾಗಿ ಹೆಸರು ವಾಸಿಯಾಗಿದ್ದ ವಿಷ್ಣುವರ್ಧನ್-ಸುಹಾಸಿನಿ ಜೋಡಿ ಅನೇಕ ಹಿಟ್ ಚಿತ್ರವನ್ನು ನೀಡಿದ್ದಾರೆ. ಅತೀ ಹೆಚ್ಚು ಬಾರಿ ವಿಷ್ಣುವಿನ ಜೊತೆ ನಾ0ುಕ ನಟಿಯಾಗಿ ನಟಿಸಿದ ಹಿರಮೆ ಆರತಿಗೆ ಸಲ್ಲುತ್ತದೆ. ಆದರೆ ನಿಜ ಜೀವನದಲ್ಲಿ ಬಾಳು ಬೆಳಗಲು ಬಂದದ್ದು ಮಾತ್ರ `ಬಾಳ ಬಂಗಾರ ನೀನು' ಹಾಡಿನ ಖ್ಯಾತಿ0ು `ಭಾರತಿ'.ಈಗಿನ ಕಾಲದಲ್ಲಿ ಗಂಡುಮಕ್ಕಳು ಬೇಕು ಎಂದು ಹೆಣ್ಣು ಬ್ರೂಣ ಹತ್ಯೆ ಮಾಡುವ ಜನರೆ ಅಧಿಕವಾಶಗಿರುವಾಗ, ಮಕ್ಕಳಿಲ್ಲ್ಲದ ವಿಷ್ಣುವರ್ಧನ್ ಕೀತರ್ಿ ಮತ್ತು ಚಂದನಾ ಎನ್ನುವ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ತೆಗೆದುಕೊಂಡಿರುವುದು ಇವರ ಹೃದ0ು ವೈಶಾಲ್ಯತೆಗೆ ಸಾಕ್ಷಿಯಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಹೆಂಡತಿ0ು ಮೇಲೆ ಕೈ ಮಾಡಿ ಜೈಲುಪಾಲಾಗುತ್ತಿರುವ ಸಧ್ಯದ ನಟರಿಗೆ ವಿಷ್ಣು ಜೀವನ ನೋಡಿ ತಿದ್ದಿಕೊಳ್ಳಬೇಕು ಎನ್ನುವಂತಿದೆ.1972 ರಿಂದ ಚಲನಚಿತ್ರ ರಂಗ ಪ್ರವೇಶಿಸಿದ ಮೇಲೆ ಆನೆ ನಡೆದದ್ದೇ ಹಾದಿ ಎನ್ನುವಂತೆ ಒಂದಕ್ಕಿಂತ ಒಂದು ಹಿಟ್ ಚಿತ್ರಗಳನ್ನು ಕರುನಾಡ ಜನತೆಗೆ ಕೊಡುಗೆಡಯಾಗಿ ನೀಡಿದರು. ಅದರಲ್ಲೂ `ಬಂಧನ', `ನಾಗರ ಹಾವು',`ಸ್ನೇಹಿತರ ಸವಾಲು', `ಸಾಹಸ ಸಿಂಹ', `0ುಜಮಾನ' `ಸಿಂಹಾದ್ರಿ0ು ಸಿಂಹ', `ಮುತ್ತಿನ ಹಾರ' ಹೀಗೆ ನೂರಾನರು ಚಿತ್ರಗಳಲ್ಲಿ ನಟಿಸಿ ತಮ್ಮನ್ನು ನಂಬಿ ಹಣ ಹೂಡಿದ ನಿಮರ್ಾಪಕರ ಗಲ್ಲಾಪೆಟ್ಟಗೆ0ುನ್ನು ಮಾತ್ರ ತುಂಬದೆ, ಕನ್ನಡಿಗರ ಮನದ ತುಂಬಾ ಅಭಿಮಾನ ತುಂಬಿ ಶಾಶ್ವತವಾಗಿ ನೆಲೆ0ುೂರಿದ್ದಾರೆ. ಒಟ್ಟು 220 ಚಿತ್ರಗಳಲ್ಲಿ ವಿಷ್ಣು ಅಭಿನಯಿಸಿದ್ದಾರೆ. ಅದರಲ್ಲಿ 200 ಚಿತ್ರಗಳು ಕನ್ನಡವಾದರೆ ಇಪ್ಪತ್ತು ಚಿತ್ರಗಳು ಮಾತ್ರ ಇತರ ಭಾಷೆ0ು ಚಿತ್ರಗಳು. ಪಂಚಭಾಷಾ ತಾರೆಯಾಗಿದ್ದ ವಿಷ್ಣು ದೃವತಾರೆಯಾಗಿ ಮಿಂಚಿದ್ದು ಮಾತ್ರ ಕನ್ನಡ ಚಿತ್ರರಂಗದಲ್ಲಿ.ಕೇವಲ ಚಿತ್ರಗಳಲ್ಲಿ ಮಾತ್ರ ಸ್ನೆಹಜೀವಿಯಾಗಿರದೇ ನಿಜ ಜೀವನದಲ್ಲಿ0ುೂ ಸ್ನೇಹಮಯಿಯಾಗಿದ್ದವರು ವಿಷ್ಣು. ಅಂಬರೀಷ್ರೊಂದಿಗಿನ ಸ್ನೇಹ ಇಸತ್ಯಕ್ಕೆ ಸಾಕ್ಷಿ ಒದಗಿಸುತ್ತದೆ. ಹಲವಾರು ವಿದ್ಯಾಥರ್ಿಗಳಿಗೆ ಧನ ಸಹಾ0ು ಮಾಡುವ ಮುಖಾಂತರ ಅವರ ಜೀವನ ಸುಧಾರಣೆಗೆ ಕಾರಣವಾಗಿದ ವಿಷ್ಣುವಿನ ಸಾಮಾಜಿಕ ಕಾಳಜಿ0ುುನ್ನು ಎತ್ತಿ ತೊರಿಸುತ್ತದೆ. ಬಹುಮುಖ ವ್ಯಕ್ತಿತ್ವದ ಈ ನಟ ಸಾರ್ವಭೌಮನಿಗೆ ಅಭಿಮಾನಿಗಳು ಪ್ರೀತಿಯಿಂದ ನೀಡಿದ ಬಿರುದೇ `ಸಾಹಸ ಸಿಂಹ' ಎಂದು. ಸುಮಾರು 7 ಬಾರಿ `ಫಿಲ್ಮ್ಫೇರ್' ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅವರನ್ನರಸಿ ಬಂದ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ. ಆದರೆ ಕೊನೆವರೆಗೂ ಅವರ ಬಳಿ ಉಳಿದಿದ್ದು ಹಾಗೂ ಅವರು ಪ್ರೀತಿಸುತ್ತಲಿದ್ದುದು, ಅಂದಿಗೂ, ಎಂದಿಗೂ ಭಿಮಾನಿಗಳು ನೀಡಿದ್ದ ಬಿರಿದ್ದನ್ನ.ವಿಪಯರ್ಾಸ ಹೇಗಿದೆ ನೋಡಿ `ಸಾಹಸ ಸಿಂಹ' ತನ್ನ ಘರ್ಜನೆ0ುನ್ನು ನಿಲ್ಲಿಸಿ ಎರಡು ವರ್ಷಗಳು ಗತಿಸಿದವು. ಕನ್ನಡ ಹೆಂಗಳೆ0ುರ ಪಾಲಿಗೆ `ಜೇಷ್ಠ' ನಾಗಿ, ಸಾಹಸ ಪ್ರಿ0ುರ ಪಾಲಿನ `ಸಾಹಸ ಸಿಂಹ' ನಾಗಿ, ಅಭಿಮಾನಿಗಳ ಮನದ `0ುಜಮಾನ' ನಾಗಿ, ಪ್ರೇಕ್ಷಕರಿಗೆ `ಆಪ್ತಮಿತ್ರ' ನಾಗಿ, ಬಡ ವಿದ್ಯಾಥರ್ಿಗಳ ಪಾಲಿನ `ಆಪ್ತರಕ್ಷಕ' ನಾಗಿ ಹತ್ತು ಹಲವು ರೂಪದಲ್ಲಿ ಜನರ ಮನದಲ್ಲಿ ಅಚ್ಚಳಿ0ುದಂತೆ ಉಳಿದಿರುವ ಸಿಂಹದ ನಡಿಗೆ ಸ್ವರ್ಗದೆಡೆಗೆ ಸಾಗಿದ್ದಾಗಿದೆ. ಆದರೆ ಅವರು ನಮಗಾಗಿ ಬಿಟ್ಟುಹೋದ ನೆನಪುಗಳು ಮುಂದಿನವರಿಗೆ ಆದರ್ಶಪ್ರಾ0ು. ಇಂತಹ ಮಹಾನ್ ಚೇತನದ ಆತ್ಮಕ್ಕೆ ಶಾಂತಿಸಿಗಲಿ, ಕನ್ನಡಮ್ಮನ ಸೇವೆಗಾಗಿ ಮತ್ತೊಮ್ಮೆ ಹುಟ್ಟಿಬರಲಿ ಎಂದು ಅವರು ಈ ಮಣ್ಣಿಗೆ ವಿದಾ0ು ಹೇಳಿದ ದಿನ ನಾವು ಸದಾಶ0ು ವ್ಯಕ್ತಪಡಿಸೋಣ.


ನೆನಪಿನ ದೋಣಿಯ ನಾವಿಕ ಮಂಜುನಾಥ

Wednesday, December 28, 2011

ಹಾಡು ಮುಗಿಸಿದ ಹಕ್ಕಿ



ಆಧ್ವನಿಯೇ ಹಾಗಿತ್ತು. ಕೇಳುಗರನ್ನು ತನ್ನತ್ತ ಸೆಳೆಯುವ ಅಗಾದವಾದ ಶಕ್ತಿ ಅದಕ್ಕಿತ್ತು. 'ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ' ಎಂದು ಹಾಡುತ್ತಿದ್ದರೆ ಕೇಳುಗನಿಗೂ ಶ್ರಾವಣ ಬಂದಂತೆಯೇ ಸರಿ. ಇದ್ಯಾರದು ನಡುವೇ ಅಪ್ರಸ್ತುತ ಎನ್ನುವ ಹಾಗೇ ಏನೆನೋ ಹೇಳುತ್ತಿದ್ದೇನಲ್ಲ ಎಂದುಕೊಳ್ಳು ತ್ತಿದ್ದಾರಾ.ಖಂಡಿತಾ ಇದು ಪ್ರಸ್ತುತ ವಿಷಯ. ಅದ್ಯಾಕೋ ಆ ವರ್ಷದ ಡಿಸೆಂಬರ್ ತಿಂಗಳೇ ಸರಿ ಇರಲಿಲ.್ಲ ಕಾರಣ ಕೇವಲ ಒಂದು ದಿನದ ಅಂತರದಲ್ಲಿ ನಾಡಿನ ಎರಡು ಅದ್ಭುತ ಪ್ರತಿಭೆಗಳು ನಮ್ಮಿಂದ ದೂರಾದವು. ವಿಷ್ಣುವರ್ಧನರ ನಿಧನಕ್ಕೂ ಮೊದಲನೇ ದಿನ ಅಂದರೆ 2009ರ ಡಿ.29 ರಂದು ಕನ್ನಡದ ಕಂಚಿನ ಕಂಠದ ಗಾಯಕ ಸಿ.ಅಶ್ವತ್ ತಮ್ಮ ಹಾಡನ್ನು ಬದುಕಿನ ಹಾಡಿಗೆ ಅಂತಿಮ ಚರಣ ಹಾಡಿ ಮುಗಿಸಿದರು. ಇದು ಇಡೀ ಕನ್ನಡ ನಾದ ಲೋಕಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿತು.ಭಾವಗೀತೆಗಳು, ಭಕ್ತಿ ಗೀತೆಗಳು, ಜನಪದ ಗೀತೆಗಳು ಹಾಗೂ ಚಲನಚಿತ್ರ ಗೀತೆಗಳಿಗೆ ತಮ್ಮ ಉಸಿರಿನಿಂದ ಜೀವ ತುಂಬಿದ್ದ ಗಾನ ಗಾರುಡಿಗ ಕನ್ನಡಿಗ ಇಂದು ನೆನಪು ಮಾತ್ರ. ವಿಧಿ ವಿಚಿತ್ರ ಹೇಗಿದೆ ನೋಡಿ. ಅಶ್ವತ್ ಹುಟ್ಟಿದ್ದು ಡಿಸೆಂಬರ್.29 ರಂದು ಬದುಕಿಗೆ ವಿದಾಯ ಹೇಳಿದ್ದು ಇದೇ ದಿನ. ತಮ್ಮ 71 ನೇ ಜನ್ಮ ದಿನದಂದು ಕೊನೆ ಉಸಿರೆಳೆದ ಇವರು ಬದುಕಿನ ಕೊನೆವರೆಗೂ ಹಾಡುತ್ತಲೇ ಬದುಕಿದವರು.ಮೈಸೂರುಮಲ್ಲಿಗೆ, ಸುಬ್ಬಾಭಟ್ಟರ ಮಗಳು, ಶ್ರಾವಣ, ನನ್ನವಳು, ಕೆಂಗುಲಾಬಿ ಮುಂತಾದ ನೂರಾರು ಗೀತೆಗಳು ಇವರ ಸುಶ್ರಾವ್ಯ ಕಂಠದಲ್ಲಿ ಮೂಡಿ ಬಂದು ಇಂದಿಗೂ ಕೂಡ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿವೆ.ಸಂಗೀತ ನಿದರ್ೇಶಕರಾಗಿ, ಕಲಾವಿಧರಾಗಿ, ವೃತ್ತಿ ರಂಗಭೂಮಿಗೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ ಮಹನೀಯರು. ನಮ್ಮನ್ನಗಲಿ ಎರಡು ವರ್ಷಗತಿಸಿದವು. ಆದರೆ ಅವರ ಕಂಠದಿಂದ ಮೂಡಿ ಬಂದ ಹಾಡುಗಳನ್ನು ಕೇಳುತ್ತಿದ್ದರೆ ಅವರು ನಮ್ಮೊಂದಿಗಿದ್ದಾರೆ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ. ಏನಾದರು ಆ ಅದ್ಭುತ ಗಾಯಕನ ಅಗಲುವಿಕೆಯ ಕಹಿ ನೆನಪಿನಲ್ಲೇ ಒಂದು ಸಣ್ಣ ನಮನ ಸಲ್ಲಿಸೋಣ.




ನುಡಿ ನಮನ ಸಲ್ಲಿಸುವ ನಿಮ್ಮ ಅಭಿಮಾನಿ ನೆನಪಿನ ದೋಣಿಯ ನಾವಿಕ

Tuesday, December 6, 2011

ಮೊದಲು ಹೋಗೋದು ನಿನಗಾಗೆ ಕಣೆ








ಡಿಯರ್ ಸೋನು



ಅದ್ಯಾಕೋ ಗೊತ್ತಿಲ್ಲಾ ನಿನ್ನ ನೆನಪಿಸಿಕೊಂಡು ಸಂಕಟ ಅನುಭವಿಸ್ತ ಇದೆ. ಎಷ್ಟು ಹೇಳಿದ್ರು ಮನಸು ಕೇಳ್ತಾನೆ ಇಲ್ಲ ಕಣೆ. ಸುಮ್ನೆ ಇದ್ರೂ ಬಂದು ಬಂದು ಕೆನಕೋ ನಿನ್ನ ನೆನಪುಗಳಿಗೆ ಸ್ವಲ್ಪ ಹೇಳು. ಪದೇ ಪದೇ ಕೆಣಕಬೇಡ ಅಂತ. ಯಾಕಂದ್ರೆ ಇದು ನಿನ್ನಷ್ಟು ಗತ್ತಿಯಗಿದ್ದಲ್ಲ. ಸ್ವಲ್ಪ ನೋವಾದ್ರೂ ಸಹಿಸಿಕೊಳ್ಳೋ ಸ್ತಿತಿಯಲ್ಲಿಲ್ಲ ಖಂಡಿತಾ ಇಲ್ಲ. ಕನೆ


ಬಂದ ನಮ್ಮ ಸ್ನೇಹ ಅದು ಹೇಗೆ ಪ್ರೀತಿಯಾಗಿ ಮರ್ಪಟ್ಟಿತೋಗೊತ್ತಿಲ್ಲ್ಲ ಅಂದಿನಿಂದ ಇಂದಿನವರೆಗೂ ನಿನ್ನ ಹೊರತು ಬೇರೆ ದ್ಯಾನವೆಮಾಡುತ್ತಿಲ್ಲ. ನಿನಗೋ ನಾನೆಂದರೆ ಅಲರ್ಜಿ ನೀನು ಇಷ್ಟ ಪಡೋ ಯಾವುದೇ ಗುಣಗಳು ನನ್ನಲ್ಲಿಲ್ಲ. ಬಿಲ್ದಮಾಡಿರೋ ಬದಿ ಇಲ್ಲ ಕಣೋ ಆದ್ರೆ ಪ್ರೀತಿ ತುಂಬಿದ ಮನಸ್ಸಿದೆ. ಆದ್ರೆ ನಿನಗೆ ಮನಸ್ಸಿಗಿಂತ ಸದ್ರುದವಾದ್ ದೇಹ ಮುಖ್ಯ ಅದು ನಿಜ ಯಾಕೆಂದ್ರೆ ಇಡೀ ಜಗತ್ತೇ ಭಾಹ್ಯ ಸೌಂದರ್ಯದ ಬೆನ್ನು ಹತ್ತಿರುವಾಗ ನೀನು ಮಾಡುವುದರಲ್ಲಿ ತಪ್ಪೇನು ಇಲ್ಲ. ಆದ್ರೆ ಆ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ನನ್ನ ಮನಸ್ಸು ಸಿದ್ದವಿಲ್ಲ ಸೋನು.


ವಿಷಯ ನಾನು ಇದನ್ನು ಬರೆಯುವ ವೇಳೆಗೆ ಆಗಲೇ ನನ್ನ ಕನಸುಗಳಿಗೆ ವಿಷ ಹಾಕಲು ಸಿದ್ದನಗಿದ್ದೆ, ಯಾಕೆ ಗೊತ್ತ ನಾನು ನಿನ್ನ ಪಾಲಿಗೆ ಮಸಣದ ಹೂವು ಆದರೆ ನನ್ನ ಪಾಲಿಗೆ ನೀನು ನಾ ಪೂಜಿಸುವ ದೈವ , ನನ್ನ ಕಂಡರೆ ನಿನಗೆ ಅದೇಕೋ ಒಂದು ತರಹದ ಬೇಸರ ಆದ್ರೆ ನನ್ನ ಪಾಲಿಗೆ ನೀನೆ ಸಂತೋಷ, ನಿನ್ನ ಪಾಲಿಗೆ ನಾನೊಬ್ಬ ನಿರುಪಯುಕ್ತ ನಿಜ ಆದ್ರೆ ನನ್ನ ಪಾಲಿಗೆ ನೀನೆ ಬೆನ್ನೆಲುಬು, ನಾನೆಂದರೆ ನಿನಗೆ ವೇದನೆ ಆದ್ರೆ ನಂಗೆ ನೀನೆ ಹೃದಯದ ನಾದ, ನಿನ್ನ ಪಾಲಿಗೆ ನಾನೊಬ್ಬ ಭಿಕ್ಷುಕ ನಿಜ ನಿನ್ನ ಪ್ರೀತಿಯಾ ಭಿಕ್ಷೆ ಬೇಡುತ್ತಿರುವುದು ನಿಜ,ಇವೆಲ್ಲವೂ ಸಪೂರ್ಣವಾದ ಸತ್ಯಗಳೇ ಅಲ್ಲದೆ ಬೇರೇನೂ ಅಲ್ಲ ಆಲ್ವಾ?


ಹೌದು ಸೋನು ಇಂದು ಇ ಹುಚ್ಚನನ್ನು ತುಚ್ಚವಾಗಿ ಕಾನುತ್ತಿರುವೆ ಅದಕ್ಕೆ ನಾನೆಂದು ಬೇಸರ ಪತ್ತುಕೊಲ್ಲುವುದಿಲ್ಲ ಯಾಕೆ ಗೊತ್ತ ನಿನ್ನ ಪ್ರಾಣಕ್ಕಿಂತ ಜಾಸ್ತಿಯಾಗಿ ಪ್ರೀತಿಸ್ತೀನಿ ಇವತ್ತು ನಾನು ನಿನ್ನ ನಿರೀಕ್ಷೆಗಳ ಸಾಗರದಾಚೆಯ ಒಂದು ಪ್ರಪಂಚಕ್ಕೆ ಹೊರಡಲು ಅನಿಯಾಗಿದ್ದಿನಿ ನನ್ನಲ್ಲಿ ಹುಚ್ಚೆಬ್ಬಿಸಿದ ನಿನ್ನ ಮಾತುಗಳನ್ನು ಕೇಳುವುದಕ್ಕೆ ಇನ್ನು ಮುಂದೆ ಇ ಕುರೂಪಿ ಇರುವುದಿಲ್ಲ ನೀನು ಇಶಪದುವುದಕ್ಕಿಂತ ಸುಬ್ದರವಾದವ್ನೆ ನಿನಗೆ ಸಿಗಲಿ ಎಂದು ದೇವರ ಬಳಿ ಪ್ರಾರ್ಥಿಸುತ್ತ ಹೋಗುತ್ತಿರುವೆ ಮುಂದಿನ ಜ್ನ್ಮ್ದಲ್ಲದರು ಮಯ್ತ್ತೆ ನಿನ್ನ ಎದುರು ಬರುತ್ತೇನೋ ಇಲ್ವೋ ಗೊತ್ತಿಲ್ಲ ಯಾಕಂದ್ರೆ ಇ ಯಾಂತ್ರಿಕ ಸಮಾಜದಲ್ಲಿ ಬಟ್ಟೆ,ಸೌನ್ದರ್ಯಕ್ಕಿದ್ದ ಬೆಲೆ ಸ್ವಚ್ಛ ಮನ್ಸಿಗಿಲ್ಲ ಹೀಗಾಗಿ ಮತ್ತೆ ನನ್ನಂತ ನಟದ್ರುಷ್ಟನನ್ನು ಹುತ್ತಿಸದಿರು ಎಂದು ದೇವರಲ್ಲಿ ಕೇಳಿಕೊಳ್ಳಲು ಹೊರಟಿರುವೆ ಚನ್ನಗಿರು. ಇಲ್ಲಿದ್ದಗಳು ನೀನು ಚನ್ನಗೆ ಇರ್ಲಿ ಎಂದು ಹಾರಿಸುತ್ತಿದ್ದ ಇ ನೆನಪಿನ ದೋಣಿಯ ನಾವಿಕ ಅಲ್ಲಿಯೂ ಕೂಡ ಅದನ್ನೇ ಮಾಡುತ್ತಾನೆ. ನಿನ್ನ ಸಂತೋಷದ ದಿನಗಳನ್ನು ಅಲ್ಲಿಂದಲೇ ನೋಡಿ ಖುಷಿ ಪಡುತ್ತೇನೆ. ಮತ್ತೆ ಮುಂದೊಂದು ದಿನ ನೀನು ಅಲ್ಲಿಗೆ ಬರಲೇ ಬೇಕಲ್ವ ಹಾಗಂತ ಅಲ್ಲಿಯೂ ನಿನ್ನ ಬೆನ್ನತ್ತಿ ಬರ್ಯ್ತೇನೆ ಅನ್ಕೊಬೇಡ ನಾನು ಮೊದಲು ಹೋಗುತ್ತಿರುವುದು ನೀನು ಅಲ್ಲಿ ಬಂದ್ರು ಸಂತೋಷವಾಗಬೇಕು ಅದಕ್ಕೆ ನಿನ್ನಿಷ್ಟದಂತ ವಾತಾವರಣ ನಿರ್ಮಾಣ ಮಾಡಲು ಹೋಗಿರುತ್ತೇನೆ. ಎಲ್ಲಿದ್ದರು ಚನ್ನಗಿರು.



ಇಂತಿ ನಿನ್ನ ನೆನಪಿನ ದೋಣಿಯ ನಾವಿಕ

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...