
ಆಧ್ವನಿಯೇ ಹಾಗಿತ್ತು. ಕೇಳುಗರನ್ನು ತನ್ನತ್ತ ಸೆಳೆಯುವ ಅಗಾದವಾದ ಶಕ್ತಿ ಅದಕ್ಕಿತ್ತು. 'ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ' ಎಂದು ಹಾಡುತ್ತಿದ್ದರೆ ಕೇಳುಗನಿಗೂ ಶ್ರಾವಣ ಬಂದಂತೆಯೇ ಸರಿ. ಇದ್ಯಾರದು ನಡುವೇ ಅಪ್ರಸ್ತುತ ಎನ್ನುವ ಹಾಗೇ ಏನೆನೋ ಹೇಳುತ್ತಿದ್ದೇನಲ್ಲ ಎಂದುಕೊಳ್ಳು ತ್ತಿದ್ದಾರಾ.ಖಂಡಿತಾ ಇದು ಪ್ರಸ್ತುತ ವಿಷಯ. ಅದ್ಯಾಕೋ ಆ ವರ್ಷದ ಡಿಸೆಂಬರ್ ತಿಂಗಳೇ ಸರಿ ಇರಲಿಲ.್ಲ ಕಾರಣ ಕೇವಲ ಒಂದು ದಿನದ ಅಂತರದಲ್ಲಿ ನಾಡಿನ ಎರಡು ಅದ್ಭುತ ಪ್ರತಿಭೆಗಳು ನಮ್ಮಿಂದ ದೂರಾದವು. ವಿಷ್ಣುವರ್ಧನರ ನಿಧನಕ್ಕೂ ಮೊದಲನೇ ದಿನ ಅಂದರೆ 2009ರ ಡಿ.29 ರಂದು ಕನ್ನಡದ ಕಂಚಿನ ಕಂಠದ ಗಾಯಕ ಸಿ.ಅಶ್ವತ್ ತಮ್ಮ ಹಾಡನ್ನು ಬದುಕಿನ ಹಾಡಿಗೆ ಅಂತಿಮ ಚರಣ ಹಾಡಿ ಮುಗಿಸಿದರು. ಇದು ಇಡೀ ಕನ್ನಡ ನಾದ ಲೋಕಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿತು.ಭಾವಗೀತೆಗಳು, ಭಕ್ತಿ ಗೀತೆಗಳು, ಜನಪದ ಗೀತೆಗಳು ಹಾಗೂ ಚಲನಚಿತ್ರ ಗೀತೆಗಳಿಗೆ ತಮ್ಮ ಉಸಿರಿನಿಂದ ಜೀವ ತುಂಬಿದ್ದ ಗಾನ ಗಾರುಡಿಗ ಕನ್ನಡಿಗ ಇಂದು ನೆನಪು ಮಾತ್ರ. ವಿಧಿ ವಿಚಿತ್ರ ಹೇಗಿದೆ ನೋಡಿ. ಅಶ್ವತ್ ಹುಟ್ಟಿದ್ದು ಡಿಸೆಂಬರ್.29 ರಂದು ಬದುಕಿಗೆ ವಿದಾಯ ಹೇಳಿದ್ದು ಇದೇ ದಿನ. ತಮ್ಮ 71 ನೇ ಜನ್ಮ ದಿನದಂದು ಕೊನೆ ಉಸಿರೆಳೆದ ಇವರು ಬದುಕಿನ ಕೊನೆವರೆಗೂ ಹಾಡುತ್ತಲೇ ಬದುಕಿದವರು.ಮೈಸೂರುಮಲ್ಲಿಗೆ, ಸುಬ್ಬಾಭಟ್ಟರ ಮಗಳು, ಶ್ರಾವಣ, ನನ್ನವಳು, ಕೆಂಗುಲಾಬಿ ಮುಂತಾದ ನೂರಾರು ಗೀತೆಗಳು ಇವರ ಸುಶ್ರಾವ್ಯ ಕಂಠದಲ್ಲಿ ಮೂಡಿ ಬಂದು ಇಂದಿಗೂ ಕೂಡ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿವೆ.ಸಂಗೀತ ನಿದರ್ೇಶಕರಾಗಿ, ಕಲಾವಿಧರಾಗಿ, ವೃತ್ತಿ ರಂಗಭೂಮಿಗೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ ಮಹನೀಯರು. ನಮ್ಮನ್ನಗಲಿ ಎರಡು ವರ್ಷಗತಿಸಿದವು. ಆದರೆ ಅವರ ಕಂಠದಿಂದ ಮೂಡಿ ಬಂದ ಹಾಡುಗಳನ್ನು ಕೇಳುತ್ತಿದ್ದರೆ ಅವರು ನಮ್ಮೊಂದಿಗಿದ್ದಾರೆ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ. ಏನಾದರು ಆ ಅದ್ಭುತ ಗಾಯಕನ ಅಗಲುವಿಕೆಯ ಕಹಿ ನೆನಪಿನಲ್ಲೇ ಒಂದು ಸಣ್ಣ ನಮನ ಸಲ್ಲಿಸೋಣ.
ನುಡಿ ನಮನ ಸಲ್ಲಿಸುವ ನಿಮ್ಮ ಅಭಿಮಾನಿ ನೆನಪಿನ ದೋಣಿಯ ನಾವಿಕ
No comments:
Post a Comment