
ಅದೊಂದು ಮಿಂಚಿತ್ತು, ಎಡಗೈಯ ಕಡಗವನ್ನು ತಿರುವತ,್ತ ಸ್ವಲ್ಪ ವಾರೆ ನಡಿಗೆಯಲ್ಲಿ ಬಂದು ಆ ವ್ಯಕ್ತಿ ಸುರಿಮಳೆ ಶಯಲಿಯ ಸಂಭಾಷಣೆ ಆರಂಭಿಸಿ, ತೆರಯ ಮೇಲೆ ನಿಂತರೆ ಸಾಕು ವಿಕ್ಷಕರಿಂದ ಸಿಳ್ಳೆ, ಚಪ್ಪಾಳೆಗಳು ಮಾರ್ಧನಿಸುತ್ತಿದ್ದವು.`ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೋನೆ, ಇನ್ನೆಲ್ಲ ಜನ್ಮದಲ್ಲೂ ಹುಟ್ಟೋದು ಇಲ್ಲೇನೆ, ಪ್ರೀತ್ಸೋದು ಎಂದು ನಿಮ್ಮನ್ನೆ' ಎಂದು ಇಂದಿಗೆ ಬರೊಬ್ಬರಿ ಎರಡು ವರ್ಷಗಳ ಹಿಂದೆ ಮತ್ತೆ ಬರುತ್ತೇನೆ ಎಂದು ಹೇಳಿ ಹೋಗುವವರ ಹಾಗೆ ಸದ್ದು ಮಾಡದೆ ಎದ್ದು ಹೋದ ಮೇರು ನಟ, ಕನ್ನಡಿಗರ ಪ್ರೀತಿ0ು `ಸಾಹಸ ಸಿಂಹ' ಡಾ.ವಿಷ್ಣುವರ್ಧನ್.ಇಂದಿಗೆ ವಿಷ್ಣುವರ್ಧನ ನಮ್ಮನ್ನಗಲಿ ಸರಿಯಾಗಿ ಎರಡು ವರ್ಷ ಗತಿಸಿದವು. ಆದರೆ ಅವರ ನೆನಪುಗಳು ಮಾತ್ರ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೂಕರ್ಾಲ ಹಚ್ಚ ಹಸಿರಾಗಿದೆ. ಅವರು ನಮ್ಮನ್ನಗಲಿದರು ಕೂಡ ಅವರ ಚಿತ್ರಗಳ ಅಬಿನ0ುದ ಮೂಲಕ ನಮ್ಮ ಮನದಲ್ಲಿ ಅಜರಾಮರವಾಗಿ ನೆಲೆಗೊಂಡಿದ್ದಾರೆ. ಕನ್ನಡ ಚಲನಚಿತ್ರ ಜಗತ್ತಿಗೆ ಪದಾರ್ಪಣೆ ಮಾಡುವಾಗ `ನಾಗರ ಹಾವಾಗಿ' ಕಾಣಿಸಿಕೊಂಡಿದ್ದ ಸಂಪತ್ ಕುಮಾರ(ಅವರ ಮೊದಲ ಹೆಸರು) ತೆರೆ0ು ಮೇಲಿನ ನಟನೆ ಜೊತೆಗೆ ಜೀವನದ ಕಥೆಗೂ ಅಂತಿಮ ಪರದೆ ಎಳೆ0ುುವ ಸಮ0ುಕ್ಕೆ ಸರಿಯಾಗಿ ಕನ್ನಡಿಗರ `ಆಪ್ತರಕ್ಷಕ' ನಾಗಿ ಬಿಟ್ಟಿದ್ದರು. ಇದು ಎಷ್ಟೋಂದು ವಿಚಿತ್ರ ಅಲ್ಲವೇ?1950 ಸೆಪ್ಟಂಬರ್ 18ರಂದು ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಜನಿಸಿದ ಸಂಪತ್ಕುಮಾರ್, ಎಪ್ಪತ್ತರ ದಶಕದಲ್ಲಿ ಎಸ್.ಎಲ್.ಭೆರಪ್ಪನವರ ಕಾದಂಬರಿ ಆಧಾರಿತ `ವಂಶವೃಕ್ಷ' ಚಿತ್ರದಲ್ಲಿ ಬಾಲ ನಟನಾಗಿ ಅಂಬೆಗಾಲಿಟ್ಟವನು, ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಾ0ುಕನಾಗಿ ಮೊದಲ ಹೆಜ್ಜೆ ಇಟ್ಟಿದ್ದು ,1972 ರಲ್ಲಿ ತೆರೆ ಕಂಡ ಕನ್ನಡ ಚಿತ್ರ ರಂಗದ ಶೇಷ್ಠ ನಿದರ್ೇಶಕರ ಸಾಲಿನಲ್ಲಿ ಮೊದಲಿಗೆ ನಿಲ್ಲುವ ಪುಟ್ಟಣ್ಣ ಕಣಗಾಲ್ ನಿದರ್ೇಶನದ `ನಾಗರ ಹಾವು' ಚಿತ್ರದಲ್ಲಿ. ಈ ಚಿತ್ರದಲ್ಲಿ ರಾಮಾಚಾರಿಯಾಗಿ ಕಾಣಿಸಿಕೊಂಡ ಇವರನ್ನು ಕಣಗಾಲ್ರು ವಿಷ್ಣ್ಣುವರ್ಧನ್ ಎಂದು ಕನ್ನಡಿಗರಿಗೆ ಪರಿಚಯಿಸಿದರು.ಸರಳ ವ್ಯಕ್ತಿತ್ವದ ಸಜ್ಜನಿಕೆ0ು ಪ್ರತಿರೂಪದಂತಿದ್ದ ವಿಷ್ಣುವರ್ಧನ್ ಇತರ ನಾ0ುಕ ನಟರುಗಳಿಗೆ ಮಾದರಿಯಾಗುವಂತಹ ಸಾಧು ಸ್ವಭಾವದವರಾಗಿದ್ದರು. 200 ಕ್ಕೂ ಅಧಿಕ ಚಿತ್ರಗಳಲ್ಲಿ ನಾ0ುಕ ನಟನಾಗಿ, ಹಲವು ಚಿತ್ರಗಳಲ್ಲಿ ನಟನೆ0ು ಜೊತೆ0ುಲ್ಲಿ ಹಿನ್ನೇಲೆ ಗಾ0ುಕನಾಗಿ ಬಹುಮುಖ ಪ್ರತಿಭೆ ಮೆರೆದ ಸಕಲ ಕಲಾವಲ್ಲಭ ವಿಷ್ಣು. ಸದಾ ಕಲಾ ದೇವಿ0ುನ್ನು ಆರಾಧಿಸುತ್ತ ಬೆಳೆದ ವಿಷ್ಣುವರ್ಧನ ತಮ್ಮ ಮನೋಜ್ಞ ಅಭಿನ0ುದ ಮೂಲಕ ಕನ್ನಡಾಭಿಮಾನಿಗಳ ಮನದ ಆರಾಧ್ಯ ದೈವವಾಗಿ ಶಾಶ್ವತ ನೆಲೆ0ುೂರಿದ್ದಾರೆ.ಕನ್ನಡ ಚಲನಚಿತ್ರರಂಗದ ಅದ್ಭುತ ಜೋಡಿಯಾಗಿ ಹೆಸರು ವಾಸಿಯಾಗಿದ್ದ ವಿಷ್ಣುವರ್ಧನ್-ಸುಹಾಸಿನಿ ಜೋಡಿ ಅನೇಕ ಹಿಟ್ ಚಿತ್ರವನ್ನು ನೀಡಿದ್ದಾರೆ. ಅತೀ ಹೆಚ್ಚು ಬಾರಿ ವಿಷ್ಣುವಿನ ಜೊತೆ ನಾ0ುಕ ನಟಿಯಾಗಿ ನಟಿಸಿದ ಹಿರಮೆ ಆರತಿಗೆ ಸಲ್ಲುತ್ತದೆ. ಆದರೆ ನಿಜ ಜೀವನದಲ್ಲಿ ಬಾಳು ಬೆಳಗಲು ಬಂದದ್ದು ಮಾತ್ರ `ಬಾಳ ಬಂಗಾರ ನೀನು' ಹಾಡಿನ ಖ್ಯಾತಿ0ು `ಭಾರತಿ'.ಈಗಿನ ಕಾಲದಲ್ಲಿ ಗಂಡುಮಕ್ಕಳು ಬೇಕು ಎಂದು ಹೆಣ್ಣು ಬ್ರೂಣ ಹತ್ಯೆ ಮಾಡುವ ಜನರೆ ಅಧಿಕವಾಶಗಿರುವಾಗ, ಮಕ್ಕಳಿಲ್ಲ್ಲದ ವಿಷ್ಣುವರ್ಧನ್ ಕೀತರ್ಿ ಮತ್ತು ಚಂದನಾ ಎನ್ನುವ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ತೆಗೆದುಕೊಂಡಿರುವುದು ಇವರ ಹೃದ0ು ವೈಶಾಲ್ಯತೆಗೆ ಸಾಕ್ಷಿಯಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಹೆಂಡತಿ0ು ಮೇಲೆ ಕೈ ಮಾಡಿ ಜೈಲುಪಾಲಾಗುತ್ತಿರುವ ಸಧ್ಯದ ನಟರಿಗೆ ವಿಷ್ಣು ಜೀವನ ನೋಡಿ ತಿದ್ದಿಕೊಳ್ಳಬೇಕು ಎನ್ನುವಂತಿದೆ.1972 ರಿಂದ ಚಲನಚಿತ್ರ ರಂಗ ಪ್ರವೇಶಿಸಿದ ಮೇಲೆ ಆನೆ ನಡೆದದ್ದೇ ಹಾದಿ ಎನ್ನುವಂತೆ ಒಂದಕ್ಕಿಂತ ಒಂದು ಹಿಟ್ ಚಿತ್ರಗಳನ್ನು ಕರುನಾಡ ಜನತೆಗೆ ಕೊಡುಗೆಡಯಾಗಿ ನೀಡಿದರು. ಅದರಲ್ಲೂ `ಬಂಧನ', `ನಾಗರ ಹಾವು',`ಸ್ನೇಹಿತರ ಸವಾಲು', `ಸಾಹಸ ಸಿಂಹ', `0ುಜಮಾನ' `ಸಿಂಹಾದ್ರಿ0ು ಸಿಂಹ', `ಮುತ್ತಿನ ಹಾರ' ಹೀಗೆ ನೂರಾನರು ಚಿತ್ರಗಳಲ್ಲಿ ನಟಿಸಿ ತಮ್ಮನ್ನು ನಂಬಿ ಹಣ ಹೂಡಿದ ನಿಮರ್ಾಪಕರ ಗಲ್ಲಾಪೆಟ್ಟಗೆ0ುನ್ನು ಮಾತ್ರ ತುಂಬದೆ, ಕನ್ನಡಿಗರ ಮನದ ತುಂಬಾ ಅಭಿಮಾನ ತುಂಬಿ ಶಾಶ್ವತವಾಗಿ ನೆಲೆ0ುೂರಿದ್ದಾರೆ. ಒಟ್ಟು 220 ಚಿತ್ರಗಳಲ್ಲಿ ವಿಷ್ಣು ಅಭಿನಯಿಸಿದ್ದಾರೆ. ಅದರಲ್ಲಿ 200 ಚಿತ್ರಗಳು ಕನ್ನಡವಾದರೆ ಇಪ್ಪತ್ತು ಚಿತ್ರಗಳು ಮಾತ್ರ ಇತರ ಭಾಷೆ0ು ಚಿತ್ರಗಳು. ಪಂಚಭಾಷಾ ತಾರೆಯಾಗಿದ್ದ ವಿಷ್ಣು ದೃವತಾರೆಯಾಗಿ ಮಿಂಚಿದ್ದು ಮಾತ್ರ ಕನ್ನಡ ಚಿತ್ರರಂಗದಲ್ಲಿ.ಕೇವಲ ಚಿತ್ರಗಳಲ್ಲಿ ಮಾತ್ರ ಸ್ನೆಹಜೀವಿಯಾಗಿರದೇ ನಿಜ ಜೀವನದಲ್ಲಿ0ುೂ ಸ್ನೇಹಮಯಿಯಾಗಿದ್ದವರು ವಿಷ್ಣು. ಅಂಬರೀಷ್ರೊಂದಿಗಿನ ಸ್ನೇಹ ಇಸತ್ಯಕ್ಕೆ ಸಾಕ್ಷಿ ಒದಗಿಸುತ್ತದೆ. ಹಲವಾರು ವಿದ್ಯಾಥರ್ಿಗಳಿಗೆ ಧನ ಸಹಾ0ು ಮಾಡುವ ಮುಖಾಂತರ ಅವರ ಜೀವನ ಸುಧಾರಣೆಗೆ ಕಾರಣವಾಗಿದ ವಿಷ್ಣುವಿನ ಸಾಮಾಜಿಕ ಕಾಳಜಿ0ುುನ್ನು ಎತ್ತಿ ತೊರಿಸುತ್ತದೆ. ಬಹುಮುಖ ವ್ಯಕ್ತಿತ್ವದ ಈ ನಟ ಸಾರ್ವಭೌಮನಿಗೆ ಅಭಿಮಾನಿಗಳು ಪ್ರೀತಿಯಿಂದ ನೀಡಿದ ಬಿರುದೇ `ಸಾಹಸ ಸಿಂಹ' ಎಂದು. ಸುಮಾರು 7 ಬಾರಿ `ಫಿಲ್ಮ್ಫೇರ್' ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅವರನ್ನರಸಿ ಬಂದ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ. ಆದರೆ ಕೊನೆವರೆಗೂ ಅವರ ಬಳಿ ಉಳಿದಿದ್ದು ಹಾಗೂ ಅವರು ಪ್ರೀತಿಸುತ್ತಲಿದ್ದುದು, ಅಂದಿಗೂ, ಎಂದಿಗೂ ಭಿಮಾನಿಗಳು ನೀಡಿದ್ದ ಬಿರಿದ್ದನ್ನ.ವಿಪಯರ್ಾಸ ಹೇಗಿದೆ ನೋಡಿ `ಸಾಹಸ ಸಿಂಹ' ತನ್ನ ಘರ್ಜನೆ0ುನ್ನು ನಿಲ್ಲಿಸಿ ಎರಡು ವರ್ಷಗಳು ಗತಿಸಿದವು. ಕನ್ನಡ ಹೆಂಗಳೆ0ುರ ಪಾಲಿಗೆ `ಜೇಷ್ಠ' ನಾಗಿ, ಸಾಹಸ ಪ್ರಿ0ುರ ಪಾಲಿನ `ಸಾಹಸ ಸಿಂಹ' ನಾಗಿ, ಅಭಿಮಾನಿಗಳ ಮನದ `0ುಜಮಾನ' ನಾಗಿ, ಪ್ರೇಕ್ಷಕರಿಗೆ `ಆಪ್ತಮಿತ್ರ' ನಾಗಿ, ಬಡ ವಿದ್ಯಾಥರ್ಿಗಳ ಪಾಲಿನ `ಆಪ್ತರಕ್ಷಕ' ನಾಗಿ ಹತ್ತು ಹಲವು ರೂಪದಲ್ಲಿ ಜನರ ಮನದಲ್ಲಿ ಅಚ್ಚಳಿ0ುದಂತೆ ಉಳಿದಿರುವ ಸಿಂಹದ ನಡಿಗೆ ಸ್ವರ್ಗದೆಡೆಗೆ ಸಾಗಿದ್ದಾಗಿದೆ. ಆದರೆ ಅವರು ನಮಗಾಗಿ ಬಿಟ್ಟುಹೋದ ನೆನಪುಗಳು ಮುಂದಿನವರಿಗೆ ಆದರ್ಶಪ್ರಾ0ು. ಇಂತಹ ಮಹಾನ್ ಚೇತನದ ಆತ್ಮಕ್ಕೆ ಶಾಂತಿಸಿಗಲಿ, ಕನ್ನಡಮ್ಮನ ಸೇವೆಗಾಗಿ ಮತ್ತೊಮ್ಮೆ ಹುಟ್ಟಿಬರಲಿ ಎಂದು ಅವರು ಈ ಮಣ್ಣಿಗೆ ವಿದಾ0ು ಹೇಳಿದ ದಿನ ನಾವು ಸದಾಶ0ು ವ್ಯಕ್ತಪಡಿಸೋಣ.
ನೆನಪಿನ ದೋಣಿಯ ನಾವಿಕ ಮಂಜುನಾಥ
No comments:
Post a Comment